Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಮಾಜಕ್ಕೆ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಕೊಡುಗೆ ಅನನ್ಯ

ಬೆಳಗಾವಿ : ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಬೆಳಗಾವಿ ಕಾರಂಜಿಮಠದ ಕೊಡುಗೆ ಅನನ್ಯ ಹಾಗು ಅಸಾದೃಶ್ಯ. ಪರಮಪೂಜ್ಯ ಲಿಂಗೈಕ್ಯ ಬಸವಲಿಂಗ ಮಹಾಸ್ವಾಮಿಗಳ ಸಮರ್ಥ ಉತ್ತರಾಧಿಕಾರಿಗಳಾಗಿ ಬಂದ ಪೂಜ್ಯಶ್ರೀ ಗುರುಸಿದ್ಧ ಸ್ವಾಮೀಜಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಚಿರಸ್ಮರಣೀಯವೆನಿಸಿದೆ. ಜಿಲ್ಲೆಯ ಹಿರಿಯ ಪೂಜ್ಯರಾಗಿ ವೈವಿಧ್ಯಮಯ ಸೇವೆಗಳಿಂದ ‘ಸಮಾಜಮುಖಿ ಸ್ವಾಮೀಜಿ’ ಎಂಬ ಅಭಿದಾನದ ಮೂಲಕ ಭಕ್ತಜನರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಪ್ರಾಧ್ಯಾಪಕ ಪ್ರೊ.ಶ್ರೀಕಾಂತ ಶಾನವಾಡ ಹೇಳಿದರು.

ನಗರದ ಲಿಂಗಾಯತ ಭವನದಲ್ಲಿ ಅಮವಾಸ್ಯೆ ನಿಮಿತ್ತ ಆಯೋಜಿಸಿದ್ದ ಅನುಭಾವ ಗೋಷ್ಠಿ ಹಾಗೂ ಪೂಜ್ಯ ಗುರುಸಿದ್ಧ ಸ್ವಾಮೀಜಿಯವರ ಸತ್ಕಾರ ಸಮಾರಂಭದಲ್ಲಿ ಅಭಿನಂದನ ನುಡಿಗಳನ್ನಾಡುತ್ತಾ ಅವರು ಮಾತನಾಡಿದರು.

ನಾಡಿನಲ್ಲಿ ಸಾವಿರಾರು ಗುರು ಮತ್ತು ವಿರಕ್ತ ಮಠಗಳಿವೆ. ಅವುಗಳಲ್ಲಿ ಹಲವು ಶ್ರೀಮಠಗಳು ತಮ್ಮಯ ಸಾಮಾಜಿಕ ಕೈಂಕರ್ಯದಿಂದ ಭಕ್ತರಲ್ಲಿ ಚಿರಸ್ಥಾಯಿಯಾಗಿ ನೆಲೆಸಿವೆ ಅವುಗಳಲ್ಲಿ ಕಾರಂಜಿಮಠವು ಒಂದೆಂಬುದು ಅಭಿಮಾನದ ಸಂಗತಿ. ಸಮಾಜಮುಖಿ ವಿಚಾರಧಾರೆಗೆ ಯಾವತ್ತೂ ಮೇಲ್ಪಂಕ್ತಿಯಲ್ಲಿ ನಿಂತು ಸಮರ್ಪಣಾಭಾವದಿಂದ ತಮ್ಮ ಬದುಕನ್ನು ಪ್ರಸಾದಮಯವನ್ನಾಗಿ ಮಾಡಿಕೊಂಡವರು ಪೂಜ್ಯ ಗುರುಸಿದ್ಧ ಸ್ವಾಮೀಜಿಯವರು. ಶ್ರೀಮಠಗಳು ಸಮಾಜಮುಖಿಯಾಗಿ ದುಡಿಯಬೇಕು. ಸಮಾಜದ ಅನಿಷ್ಠವನ್ನು ತೊಡೆದು ಹಾಕಬೇಕು. ತಮ್ಮ ರಚನಾತ್ಮಕ ಹಾಗೂ ಸೃಜನಶೀಲ ಕಾರ್ಯಗಳಿಂದ ಲೋಕಮುಖಿಯಾಗಿರಬೇಕೆಂಬ ಮಾತಿಗೆ ಬದ್ಧರಾಗಿಯೇ ನಡೆದವರು ಪೂಜ್ಯ ಗುರುಸಿದ್ಧಶ್ರೀಗಳು. ಇಂದು ಮಠಗಳು ತಮ್ಮ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಒಂದಷ್ಟು ಮಠಗಳು ಹೂವಾಗಿ ಅರಳಿನಿಲ್ಲುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಜಂಗಮ ತತ್ವಕ್ಕೆ ನಿಜಾರ್ಥವನ್ನು ತಂದು ಅದನ್ನು ಅನುಷ್ಠಾನಗೊಳಿಸಿದವರು ಪೂಜ್ಯ ಗುರುಸಿದ್ಧಶ್ರೀಗಳು ಎಂದರು.

ದೇಹದಾನದಂತಹ ಜಾಗೃತಿಗೆ ಕರೆ ನೀಡಿರುವ ಪೂಜ್ಯರು ಅದನ್ನು ಮರಣದ ನಂತರ ಅರ್ಪಿಸುವ ದೃಢ ನಿರ್ಧಾರವನ್ನು ಕೈಗೊಂಡು ಸಮಾಜಕ್ಕೆ ಮಾದರಿಯಾದವರು. ಕೈದಿಗಳ ಮನಪರಿವರ್ತನೆ, ಪುಸ್ತಕ ಪ್ರಕಟಣೆ, ಸಾಮಾಜಿಕ ಅನಿಷ್ಟಗಳ ಕುರಿತು ಜಾಗೃತಿ ಆಂದೋಲನಗಳನ್ನು ಕೈಗೊಂಡಿರುವ ಪೂಜ್ಯರ ನಡೆ ಸಮಾಜಮುಖಿಯಾಗಿ ಬೆಳಗಿದೆ ಇಂತಹ ಪೂಜ್ಯರು ನಮ್ಮ ಮಧ್ಯೆದಲ್ಲಿರುವುದು ನಮ್ಮ ಪುಣ್ಯವೆಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ೭೫ ವಸಂತಗಳು ಬದುಕಿನಲ್ಲಿ ಅತ್ಯಂತ ಶ್ರೇಷ್ಠವಾದಂತಹದು. ಆ ಬದುಕನ್ನ ಅರ್ಥಪೂರ್ಣವನ್ನಾಗಿಸಿಕೊಂಡವರು ಕಾರಂಜಿಶ್ರೀಗಳು. ಅವರ ಚಿಂತನೆ ಬಸವ ತತ್ವಗಳ ಕುರಿತು ಇದ್ದಂತಹ ಜ್ಞಾನ ಅಪಾರ. ನಿಜವಾದ ಅನುಭಾವ ಕಾರಂಜಿ ಎಣಿಸಿಕೊಂಡವರೇ ಶ್ರೀಗಳು. ನಮ್ಮ ಮಹಾಸಭೆಯ ಗೌರವಾಧ್ಯಕ್ಷರಾಗಿ ಮಹಾಸಭೆಯ ಎಲ್ಲ ರಚನಾತ್ಮಕ ಚಟುವಟಿಕೆಗಳಿಗೆ ಮಾರ್ಗದರ್ಶಕರಾಗಿ, ಪ್ರೇರಕರಾಗಿ ಆಶೀರ್ವದಿಸುತ್ತಾ ಬಂದಿದ್ದಾರೆ. ಪೂಜ್ಯರು ಶತಾಯುಷಿಗಳಾಗಳೆಂದು ಹಾರೈಸಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಕಾರಂಜಿ ಗುರುಸಿದ್ಧ ಸ್ವಾಮೀಜಿಯವರು, ಹಿಂದಿನ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಸ್ವಾಮೀಜಿಯವರ ಕೃಪಾಶೀರ್ವಾದದಿಂದ ನಾನು ಸಾಮಾಜಿಕ ಸೇವೆಗೆ ತೊಡಗಲು ಸಾಧ್ಯವಾಯಿತು. ಈ ಸುದೀರ್ಘ ಬದುಕಿನಲ್ಲಿ ಸಮಾಜ ನೀಡಿದ ಜವಾಬ್ದಾರಿಗಳನ್ನ ನಿಷ್ಠೆಯಿಂದ ನಿರ್ವಹಿಸಿದ್ದೇನೆ. ಮುಂದೆಯೂ ಬಸವಾದಿ ಶರಣರ ಕೃಪೆಯಿಂದ ಸೇವೆ ನೀಡುತ್ತೇನೆ. ಶ್ರೀಮಠವನ್ನು ಅಸಂಖ್ಯ ಭಕ್ತರು ಕಟ್ಟಿ ಬೆಳೆಸಿದ್ದಾರೆ. ಅವರನ್ನು ಶ್ರೀಮಠವು ಸದೈವ ಅಭಿನಂದಿಸುತ್ತದೆ ಎಂದು ಆಶೀರ್ವದಿಸಿದರು.

ಸರಳಾ ಗುಮಾಜಿ ವಚನ ಪ್ರಾರ್ಥನೆ ಸಲ್ಲಿಸಿದರು. ಅನುಪಮಾ ದೊಡವಾಡ, ಶೈಲಜಾ ಸಂಸುದ್ದಿ ಅಭಿನಂದನ ನುಡಿಗಳನ್ನಾಡಿದರು. ಸುಮಾ ಬೇವಿನಕೊಪ್ಪಮಠ ಪರಿಚಯಿಸಿದರು. ಆಶಾ ಯಮಕನಮರಡಿ ಸ್ವಾಗತಿಸಿದರು. ಶೈಲಾ ಪ್ರಸಾದಿ ವಂದಿಸಿದರು. ಗಿರಿಜಾ ಮುಳಗುಂದ ನಿರೂಪಿಸಿದರು. ಗೀತಾ ಗುಂಡಕಲ್ಲ ದಾಸೋಹ ಸೇವೆ ನೀಡಿದರು. ಡಾ.ಎಫ್.ವಿ.ಮಾನ್ವಿ, ರಮೇಶ ಕಳಸಣ್ಣವರ, ಪ್ರಸಾದ ಹೀರೆಮಠ, ಡಾ.ಗುರುದೇವಿ ಹುಲೆಪ್ಪನವರಮಠ, ಜ್ಯೋತಿ ಬಾದಾಮಿ, ಜಯಶೀಲಾ ಬ್ಯಾಕೋಡ, ನ್ಯಾಯವಾದಿ ವಿ.ಕೆ.ಪಾಟೀಲ, ಬಾಲಚಂದ್ರ ಬಾಗಿ, ಗುರುದೇವ ಪಾಟೀಲ, ಮಹಾಸಭೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ