Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಹೆಸರು, ಅಂಕಿ-ಸಹಿ ಅಭಿಯಾನ

 

ಬೆಂಗಳೂರು:
ಕನ್ನಡವನ್ನು ಎಲ್ಲಾ ಸ್ತರಗಳಲ್ಲಿಯೂ ನೆಲೆಗೊಳಿಸಲು ಬದ್ದವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಹೆಸರು ಮತ್ತು ಸಹಿ ಅಭಿಯಾನವನ್ನು ಆರಂಭಿಸಲಿದೆ.

ಹಿರಿಯರ, ಸಾಧಕರ. ಕನ್ನಡ ನಾಡಿಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆಯನ್ನು ನೀಡಿದವರ ಹೆಸರುಗಳನ್ನು ರಸ್ತೆಗಳಿಗೆ ಬಡಾವಣೆಗೆ ಇಡುವ ಪದ್ಧತಿ ಮೊದಲಿಂದಲೂ ಇದೆ. ಆದರೆ ಕ್ರಮೇಣ ಆಂಗ್ಲ ಭಾಷೆಯಲ್ಲಿ ಹೃಸ್ವಗೊಳ್ಳುವ ಈ ಹೆಸರುಗಳು ಮೂಲದ ಅರ್ಥದ ಸಾಧ್ಯತೆಯಿಂದ ದೂರವಾಗುತ್ತಿರುವ ಪ್ರಸಂಗಗಳು ಹೆಚ್ಚಾಗುತ್ತಿವೆ. ಹೊಸ ಪೀಳಿಗೆಯವರಿಗೆ ಸಾಧಕರ ಪರಿಚಯವೇ ಆಗದೇ ಹೋಗುವ ಸಾಧ್ಯತೆಗಳೂ ಹೆಚ್ಚಾಗಿವೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಹೆಸರು ಮತ್ತು ಸಹಿ ಅಭಿಯಾನವನ್ನು ಹಮ್ಮಿ ಕೊಳ್ಳುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ರಸ್ತೆ ಈಗ ಎಂ.ಜಿ.ರಸ್ತೆಯಾಗಿದೆ. ಕೃಷ್ಣ ರಾಜ ಒಡೆಯರ ಹೆಸರಿನಲ್ಲಿ ಇರುವ ರಸ್ತೆ ಕೆ.ಆರ್.ರಸ್ತೆಯಾಗಿದೆ. ನರಸಿಂಹ ರಾಜ ಒಡೆಯರ್ ಅವರ ಹೆಸರಿನಲ್ಲಿ ರೂಪಿತವಾದ ಬಡಾವಣೆ ಎನ್.ಆರ್.ಕಾಲೋನಿಯಾಗಿದೆ ಹೀಗೆ ಹತ್ತಾರು ಉದಾಹರಣೆಗಳನ್ನು ನೀಡ ಬಹುದು. ಕನ್ನಡ ಬರಹಗಾರರಲ್ಲಿ ಡಿ.ವಿ.ಗುಂಡಪ್ಪನವರ ಹೆಸರನ್ನು ಡಿ.ವಿ.ಜಿ ಎಂದು ಬರೆಯುವ ಪದ್ದತಿ ಜನಜನಿತವಾಗಿದ್ದು ಅವರ ಮೂಲ ಹೆಸರೇ ಮರೆಯಾಗುವ ಅಪಾಯವಿದೆ. ಎಚ್.ಎಸ್.ವಿ, (ಎಚ್.ಎಸ್.ವೆಂಕಟೇಶ ಮೂರ್ತಿ), ಬಿ.ಆರ್.ಎಲ್ (ಬಿ.ಆರ್.ಲಕ್ಷ್ಮಣ ರಾವ್) ಪಿ.ಟಿ.ಎನ್, (ಪು.ತಿ.ನರಸಿಂಹಾಚಾರ್) ಕೆ.ಎಸ್.ಎನ್ (ಕೆ.ಎಸ್.ನರಸಿಂಹ ಸ್ವಾಮಿ) ಇಂತಹ ಪ್ರಯೋಗಗಳು ಸಾಮಾಜಿಕ ಜಾಲತಾಣಗಳು ಬೆಳೆಯುತ್ತಾ ಹೋದಷ್ಟು ಹೆಚ್ಚಾಗುತ್ತಿದೆ. ಸೌತ್ ಎಂಡ್ ಸರ್ಕಲ್ ಗೆ ತೀನಂಶ್ರೀ ವೃತ್ತ ಎಂದು ಬೆಂಗಳೂರು ಮಹಾನಗರ ಪಾಲಿಕೆ ಅಧಿಕೃತ ನಾಮಕರಣ ಮಾಡಿದ್ದರೂ ಅದು ಜನ ಜನಿತವಾಗಿಲ್ಲ. ಟ್ಯಾಂಕ್ ಬಂಡ್ ರಸ್ತೆಗೆ ಆರ್.ನಾಗೇಂದ್ರ ರಾಯರ ಹೆಸರು ಇಟ್ಟಿದ್ದರೂ ಅದು ಆಚರಣೆಗೆ ಬಂದಿಲ್ಲ. ಇಂತಹ ಹಲವು ದೋಷಗಳನ್ನು ಪಟ್ಟಿ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಅಭಿಯಾನವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಲೋಚಿಸಿದೆ.

ಇದಲ್ಲದೆ ಈಗ ಹೆಸರು ಇಟ್ಟಿರುವ ಸಾಧಕರ ಕುರಿತು ಜನ ಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಿ ಅರಿವನ್ನು ಹೆಚ್ಚಿಸುವ ಉದ್ದೇಶವೂ ಕನ್ನಡ ಸಾಹಿತ್ಯ ಪರಿಷತ್ತಿಗಿದೆ. ಉದಾಹರಣೆಗೆ ಬ್ಯೂಗಲ್ ರಾಕ್ ಪಾರ್ಕ್‌ ದ್ವಾರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆಗೆ ಶ್ರಮಿಸಿದ ಬೆಳ್ಳಾವೆ ವೆಂಕಟನಾರಾಯಣಪ್ಪನವರ ಹೆಸರನ್ನು ಇಟ್ಟಿದ್ದು. ಅವರ ಕುರಿತ ವಿವರಗಳು ಅಲ್ಲಿ ಲಭ್ಯವಿಲ್ಲ, ಈ ವಿವರಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಅಲ್ಲಿ ಅಳವಡಿಸುವ ಉದ್ದೇಶ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದು ಅಭಿಯಾನದ ಉದ್ದೇಶವನ್ನು ನಾಡೋಜ. ಡಾ.ಮಹೇಶ ಜೋಶಿ ವಿಶ್ಲೇಷಿಸಿದ್ದಾರೆ.

ಕನ್ನಡದಲ್ಲಿ ಸಹಿ ಮಾಡುವ ಅಭಿಯಾನವನ್ನೂ ಕೂಡ ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಲಿದೆ. ಸಹಿ ಎನ್ನುವುದು ವ್ಯಕ್ತಿಯ ವ್ಯಕ್ತಿತ್ವದ ಹೆಗ್ಗುರುತು ಇದ್ದಂತೆ. ಇಲ್ಲಿ ಕನ್ನಡ ಬಳಕೆಯಾದರೆ ಭಾಷೆಯ ಭಾವನಾತ್ಮಕ ಅಯಾಮದ ಜೊತೆಗಿನ ವ್ಯಕ್ತಿಯ ಬಾಂಧವ್ಯವೂ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿಯೇ ಸಹಿ ಮಾಡುವಂತೆ ಕನ್ನಡಿಗರೆಲ್ಲರೂ ಜಾಗೃತಿ ಉಂಟು ಮಾಡುವ ಇಂತಹ ಕನ್ನಡದ ಸಹಿಯನ್ನು ಎಲ್ಲಾ ಅಧಿಕೃತ ವ್ಯವಹಾರಗಳಲ್ಲಿಯೂ ಮಾನ್ಯ ಮಾಡುವಂತೆ ಮಾಡುವ ಅಭಿಯಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತೊಡಗಲಿದೆ ಎಂದು ನಾಡೋಜ. ಡಾ.ಮಹೇಶ ಜೋಶಿ ಬಣ್ಣಿಸಿದ್ದಾರೆ.

ಲಿಪಿಗಳಲ್ಲಿಯೇ ಅತಿ ಸುಂದರವೆಂದು ಕರೆಸಿ ಕೊಂಡಿರುವ ಕನ್ನಡ ಲಿಪಿಯನ್ನು ಆಚಾರ್ಯ ವಿನೋಬ ಭಾವೆಯವರು ‘ಲಿಪಿಗಳ ರಾಣಿ’ ಎಂದು ಕರೆದಿದ್ದನ್ನು ನಾಡೋಜ ಡಾ.ಮಹೇಶ ಜೋಶಿ ಸ್ಮರಿಸಿ ಕೊಂಡು ಕನ್ನಡದಲ್ಲಿಯೇ ಸಹಿ ಮಾಡುವುದು ಲಿಪಿಯ ಕುರಿತು ಆಸಕ್ತಿ ಮತ್ತು ಪ್ರೀತಿಯನ್ನು ಬೆಳೆಸುವ ವಿಧಾನ ಕೂಡ ಹೌದು ಎಂದು ಹೇಳಿದ್ದಾರೆ.

ಕನ್ನಡ ಅಂಕಿಗಳನ್ನೇ ಬಳಸುವ ಅಭಿಮಾನವನ್ನೂ ಕೂಡ ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಲಿದೆ. ತನ್ನದೇ ಆದ ಅಂಕಿಗಳನ್ನು ಹೊಂದಿದ ವಿಶಿಷ್ಟವಾದ ಭಾಷೆ ಕನ್ನಡವಾಗಿದೆ.

ಕನ್ನಡ ಅಂಕಿಗಳು ವಿಶಿಷ್ಟವಾಗಿದ್ದು ಸುಂದರವೂ ಆಗಿದೆ. ಕನ್ನಡ ಅಂಕಿಗಳಲ್ಲಿ ಲಿಪಿಯ ಒತ್ತುಗಳ ಸೂಚನೆಯೂ ಇದ್ದೂ ಇದು ಕಲಿಕೆಯನ್ನು ಸುಲಭ ಪಡಿಸಲು ಮಾಡಿರುವ ಸೌಲಭ್ಯ.

೧-ಗ ಒತ್ತ-(ಕಗ್ಗ), ೨-ತ ಒತ್ತು (ಬತ್ತ), ೩-ನ ಒತ್ತು (ತನ್ನಯ), ೪-ಳ ಒತ್ತು (ಕಳ್ಳ) ೬-ಮ ಒತ್ತು (ಸುಮ್ಮನೆ), ೯-ರ ಒತ್ತು (ಕೀರ್ತಿ) ಹೀಗೆ*.. ಇಂತಹ ಸೌಲಭ್ಯವನ್ನು ಪ್ರಪಂಚದ ಯಾವ ಭಾಷೆಯೂ ಹೊಂದಿಲ್ಲವೆಂದು ಹಿರಿಯರಾದ ತ.ಸು.ಶಾಮರಾಯರು ಬಣ್ಣಿಸಿದ್ದಾರೆ.
ದಿನಾಂಕದಲ್ಲಿ ಬಳಸುವುದರಿಂದ ಹಿಡಿದು ವ್ಯವಹಾರದ ಎಲ್ಲಾ ಹಂತಗಳಲ್ಲಿ, ವಿಳಾಸ ಬರೆಯುವಲ್ಲಿ, ಸೂಚನಾ ಪತ್ರಗಳಲ್ಲಿ, ಚೆಕ್ ಬರೆಯುವಲ್ಲಿ ಹೀಗೆ ಸಾರ್ವತ್ರಿಕವಾಗಿ ಕನ್ನಡದ ಬಳಕೆ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಕನ್ನಡವನ್ನು ಎಲ್ಲಾ ಹಂತದಲ್ಲಿಯೂ ಸ್ಥಾಪಿಸುವ ಇನ್ನಷ್ಟು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದ ನಾಡೋಜ.ಡಾ.ಮಹೇಶ ಜೋಶಿ ಅವರ ಅನುಷ್ಟಾನದಲ್ಲಿ ಎಲ್ಲಾ ಕನ್ನಡಿಗರ ಸಹಕಾರವನ್ನೂ ಕೋರಿ ಕನ್ನಡ ತಾಯಿ ಭುವನೇಶ್ವರಿಯ ನೆಲವೀಡಾದ ಸಿದ್ದಾಪುರಿಂದ ಈ ಅಭಿಯಾನವು ಆರಂಭವಾಗಲಿದ್ದು ಶೀಘ್ರದಲ್ಲಿಯೇ ದಿನಾಂಕವನ್ನು ನಿಗದಿ ಪಡಿಸುವುದಾಗಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ