Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೆಬ್ಬಾಗಿಲು ಮಾತ್ರ ಕನ್ನಡವೇ ಇರಲಿ: ಡಾ. ಕುಮಾರ ತಳವಾರ

ಸಂಕೇಶ್ವರ : ಅನ್ಯ ಧರ್ಮಗಳನ್ನು ಗೌರವಿಸುವ, ಇತರ ಭಾಷೆಗಳನ್ನು ಪ್ರೀತಿಸುವ ಔದಾರ್ಯವಿರುವ ಕನ್ನಡಿಗರ ಮನೆಯಲ್ಲಿ ಕಿಟಕಿಗಳು ಯಾವುದೆ ಭಾಷೆಯಾದರೂ ಇರಬಹುದು, ಆದರೆ ಹೆಬ್ಬಾಗಿಲು ಮಾತ್ರ ಕನ್ನಡವೇ ಇರಲಿ ಎಂದು ಪ್ರಾಧ್ಯಾಪಕ ಡಾ. ಕುಮಾರ ತಳವಾರ ಹೇಳಿದರು.

ಇಲ್ಲಿನ ಬ್ರಿಲಿಯಂಟ್ ಸಿಬಿಎಸ್‌ಇ ಶಾಲೆಯಲ್ಲಿ ಜರುಗಿದ 70 ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನವನ್ನು ಉಲ್ಲೇಖಿಸಿ, ಕನ್ನಡಿಗರು ಒಳ್ಳೆಯವರೊಂದಿಗೆ ಒಳ್ಳೆಯವರಾಗಿ, ಮಧುರವಾಗಿ ವ್ಯವಹರಿಸುವವರೊಂದಿಗೆ ಮಧುರವಾಗಿ ವರ್ತಿಸುವ ಗುಣವನ್ನು ಹೊಂದಿದ್ದಾರೆ ಎಂದು ವಿವರಿಸಿದರು.

ಕನ್ನಡದ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯಗೊಳಿಸಲು ಪ್ರೀತಿ ಮತ್ತು ವಿಶ್ವಾಸದಿಂದ ಒತ್ತಾಯಿಸಬೇಕು. ಗಡಿ ಭಾಗದಲ್ಲಿ ಕನ್ನಡದ ಬಗ್ಗೆ ಹೆಚ್ಚು ಗಮನ ಹರಿಸಲು ಹಾಗೂ ಭಾಷಾ ಪ್ರೇಮವನ್ನು ಕ್ರಿಯಾತ್ಮಕವಾಗಿ ತೋರಿಸಲು ಎಲ್ಲರೂ ಮುಂದಾಗಬೇಕೆಂದು ಎಂದರು.

ಮನೆಯ ಭಾಷೆ ಯಾವುದೇ ಇರಲಿ, ಕರ್ನಾಟಕ ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಜನರೂ ಕನ್ನಡಿಗರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಕಿಯರಾದ ಧನಶ್ರೀ ಕೇಸ್ತಿ, ಶ್ವೇತಾ ನಾಯಿಕ ಮತ್ತು ವಿದ್ಯಾರ್ಥಿನಿಯರಾದ ಸಾಕ್ಷತಾ ಮಠದ, ಸಾದಿಯಾ ಮಗದುಮ್ ಮಾತನಾಡಿದರು.

ಆಡಳಿತಾಧಿಕಾರಿ ವಿನಯ ಹಾಲದೇವರಮಠ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಸಂದೀಪ ಮಹಾಳಂಕ, ರಾಜು ಗಡಕರಿ, ಪ್ರಾಚಾರ್ಯೆ ನಸೀಮಾ ಢಾಂಗೆ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಧ್ವಜಾರೋಹಣ ನೆರವೇರಿಸಲಾಯಿತು. ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು.
ಪೃಥ್ವಿರಾಜ ಬಸ್ತವಾಡಿ ಸ್ವಾಗತಿಸಿದರು. ರಷಿಕಾ ಹುದ್ದಾರ ನಿರೂಪಿಸಿದರು. ಶಿಕ್ಷಕಿ ಉಮಾ ಆಲೂರಿ ಪರಿಚಯಿಸಿದರು. ಶಿಕ್ಷಕಿ ದೀಪಾ ಕೇದಾರಶೆಟ್ಟಿ ವಂದಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ