Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಏಕೀಕರಣಕ್ಕೆ ಶಕ್ತಿ ತುಂಬಿದ ಹಚ್ಚೇವು ಕನ್ನಡದ ದೀಪ -ಡಾ. ತೋಂಟದ ಶ್ರೀ

ಬೆಳಗಾವಿ: ಉದಯವಾಗಲಿ ಚಲುವ ಕನ್ನಡ ನಾಡು ಕರ್ನಾಟಕದ ಏಕೀಕರಣಕ್ಕೆ ಮುನ್ನುಡಿ ಬರೆದರೆ ಡಾ. ಡಿ. ಎಸ್. ಕರ್ಕಿಯವರ ಹಚ್ಚೇವು ಕನ್ನಡದ ದೀಪ ಕವಿತೆ. ಅದಕ್ಕೆ ಶಕ್ತಿ ತುಂಬಿ ಏಕೀಕರಣದ ಕೂಗು ಬಲಗೊಳ್ಳಲು ಕಾರಣವಾಯಿತು.ಬೆಳಗಾವಿಯಂತಹ ಮರಾಠಿಮಯ ನೆಲದಲ್ಲಿ ಕವಿ ಈ ಕವಿತೆ ರಚಿಸಿದ್ದನ್ನು ನಾವು ಗಮನಿಸಬೇಕು. ಡಾ.ಡಿ.ಎಸ್. ಕರ್ಕಿಯವರು ಕಟ್ಟಿಕೊಟ್ಟ ಈ ಕವಿತೆ ಎಲ್ಲೆಲ್ಲಿ ಕನ್ನಡಿಗರಿದ್ದಾರೊ ಅಲ್ಲೆಲ್ಲ ಮೊಳಗುತ್ತಲೆ ಇರುತ್ತದೆ. ಅದು ಗಡಿನಾಡೆ ಇರಲಿ. ನಡುನಾಡೆ ಇರಲಿ. ದೇಶವೆ ಇರಲಿ. ವಿದೇಶವೆ ಇರಲಿ. ಅದು ಕನ್ನಡಿಗರ ಧ್ಯೇಯಗೀತೆಯಾಗಿ ಕನ್ನಡಿಗರನ್ನು ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಲೆ ಇರುತ್ತದೆ ಎಂದು ಗದುಗಿನ ಡಾ. ತೋಂಟದ ಸಿದ್ದರಾಮ ಶ್ರೀಗಳು ನುಡಿದರು.

ಬೆಳಗಾವಿಯ ಡಾ. ಡಿ.ಎಸ್. ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನದ ೨೦೨೪ ನೇ ಸಾಲಿನ ಕರ್ಕಿ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಇಂತಹ ಲೋಕಮಾನ್ಯ ಕವಿ ನಮ್ಮ ಬೆಳಗಾವಿಯವರು ಎಂಬುದು ನಮಗೆ ಹೆಮ್ಮೆಯ ವಿಷಯ. ಕನ್ನಡ ಛಂದೋವಿಕಾಸದಂತಹ ಪ್ರಬುದ್ದ ಪ್ರಬಂಧ,ನಕ್ಷತ್ರ ಗಾನ,ಭಾವತೀರ್ಥ ಬಣ್ಣದ ಚಂಡು ದಂತಹ ಉತ್ಕೃಷ್ಟ ಸಾಹಿತ್ಯ ಕೊಟ್ಟ ಕವಿಗೆ ಸಿಗಬೇಕಾದ ಗೌರವ ಪುರಸ್ಕಾರಗಳು ಸಿಗದಿರುವುದು ವಿಷಾದಕರ ಸಂಗತಿ.
ಅವರ ಹೆಸರಲ್ಲಿ ಅವರ ಕುಟುಂಬದ ಸದಸ್ಯರು ಅಭಿಮಾನಿಗಳು ಸೇರಿ ಪ್ರತಿಷ್ಠಾನದ ಮೂಲಕ ನಾಡಿನ ಹಿರಿಯ ಸಾಹಿತಿಗೆ ಕರ್ಕಿ ಕಾವ್ಯ ಶ್ರೀ ಪ್ರಶಸ್ತಿ ಕೊಡಲು ಮೊದಲು ಮಾಡಿರುವುದು ಸ್ತುತ್ಯ ಕೆಲಸ. ಈ ವರ್ಷ ನಾಡಿನ ಹಿರಿಯ ಮಕ್ಕಳ ಕ್ಷೇತ್ರದ ಸಾಹಿತಿ ಸಿಂದಗಿಯ ಹ.ಮ. ಪೂಜಾರರಿಗೆ ಸಂದಿರುವುದು ಯೋಗ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು

ಕರ್ಕಿಯವರ ಛಂದೋವಿಕಾಸ ಸಾಹಿತ್ಯ ಪ್ರವೇಶಿಸುವ ಪ್ರತಿಯೊಬ್ಬರಿಗೂ ಮಾರ್ಗಸೂಚಿಯಾಗಿದೆ. ಕರ್ಕಿಯವರ ಕಾವ್ಯ ಕಲಿಸಿದ ನನಗೆ ಈ ಪ್ರಶಸ್ತಿ ದೊರಕಿರುವುದು ನನ್ನ ಭಾಗ್ಯ. ಧಾರವಾಡದ ವಿದ್ಯಾವರ್ಧಕ ಸಂಘದ ಧರೆಗೆ ದೊಡ್ಡವರು ಮತ್ತು ಈ ಕರ್ಕಿ ಕಾವ್ಯಶ್ರೀ ಪ್ರಶಸ್ತಿಗಳು ನನ್ನ ಜೀವನದ ಬಹು ದೊಡ್ಡ ಪ್ರಶಸ್ತಿಗಳೆಂದು ಪ್ರಶಸ್ತಿ ಸ್ವೀಕರಿಸಿದ ಹ.ಮ. ಪೂಜಾರರು ಹೇಳಿದರು

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಡಾ. ನಿರ್ಮಲಾ ಬಟ್ಟಲ ಡಾ.ಕರ್ಕಿಯವರ ಕಾವ್ಯ ಚಿಂತನೆ ಕುರಿತು ಮಾತನಾಡಿದರು

ಸಾಹಿತಿ ಪ್ರೊ. ಎಂ.ಎಸ್. ಇಂಚಲ ಅವರು ಕರ್ಕಿಯವರ ಜೊತೆಗಿನ ಮಧುರ ನೆನಪುಗಳನ್ನು ಹಂಚಿಕೊಂಡರು. ಮಕ್ಕಳ ಸಾಹಿತಿ ಬಸವರಾಜ ಗಾರ್ಗಿ ಅಭಿನಂದನಪರ ನುಡಿಗಳನ್ನಾಡಿದರು. ಅಶೋಕ ಉಳ್ಳೆಗಡ್ಡಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಗಡಿನಾಡ ಚೇತನ ಪುರಸ್ಕೃತ ಬಿ.ಎಸ್. ಗವಿಮಠರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಶಿವಪುತ್ರ ಕರ್ಕಿ ಅಧ್ಯಕ್ಷತೆ ವಹಿಸಿದ್ದರು.

ಸ.ರಾ.ಸುಳಕೂಡೆಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯಲ್ಲಿ ಕವಿಗಳು ಸ್ವರಚಿತ ಕವನ ಓದಿದರು. ಗೌರಮ್ಮ ಕರ್ಕಿ ಸ್ವಾಗತಿಸಿದರು ರಮಾನಾಥ ಬನಶಂಕರಿ ವಂದಿಸಿದರು. ಶಿಕ್ಷಕಿ ಮೀನಾಕ್ಷಿ ಕಾಮಕರ ನಿರೂಪಿಸಿದರು. ಡಾ. ಬಸವರಾಜ ಜಗಜಂಪಿ, ಡಾ. ಹೆಚ್.ಬಿ. ಕೋಲಕಾರ, ಡಾ. ರಾಮಕೃಷ್ಣ ಮರಾಠೆ, ಡಾ.ಎಸ್. ಎ.ಕರ್ಕಿ, ಡಾ.ಆನಂದ ಜಕ್ಕನ್ನವರ, ಎಸ್.ಎಸ್. ಸಾತಿಹಾಳ, ಶಿವ ಶಿಂಪಿಗೇರ, ವಿಜಯಾ ಕರ್ಕಿ, ಆನಂದ ಕರ್ಕಿ, ಜಗದೀಶ್ವರ ಪೂಜಾರ, ಎಸ್.ಬಿ. ನಾಗರಾಜ ಮತ್ತು ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನದ ಟ್ರಸ್ಟಿನ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ