Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಲೋಕಸಭಾ ಚುನಾವಣೆಗೂ ಮೊದಲೇ ಬಲಿಷ್ಠ ತಂಡ ಕಟ್ಟಿದ ಕಮಲ ಸಾರಥಿ !

 

ಬೆಂಗಳೂರು:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಸಲವು ಭರ್ಜರಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಇದೀಗ ಕಮಲ ಸಾರಥಿ ಬಿ.ವೈ. ವಿಜಯೇಂದ್ರ ಅವರು ಬಲಿಷ್ಠ ಯುವ ಪಡೆಯನ್ನು ನೇಮಕ ಮಾಡಿಕೊಂಡಿದ್ದಾರೆ.

ಪಕ್ಷದ ಮಾಜಿ ಸಚಿವರು ಹಾಗೂ ಮಾಜಿ ಶಾಸಕರ ಬಹುದೊಡ್ಡ ಪಡೆಯನ್ನು ನೇಮಕ ಮಾಡಿಕೊಂಡಿದ್ದಾರೆ. ಇವರಲ್ಲಿ ಕುಡಚಿಯ ಮಾಜಿ ಶಾಸಕ ಪಿ.ರಾಜೀವ್, ಉತ್ತರ ಕರ್ನಾಟಕ ಅನ್ಯಾಯದ ವಿರುದ್ಧ ಸತತ ದನಿ ಎತ್ತುತ್ತಾ ಬಂದಿರುವ ಎ.ಎಸ್.ಪಾಟೀಲ ನಡಹಳ್ಳಿ, ಕಾರ್ಕಳ ಹಾಲಿ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಅತಿರಥ ಮಹಾರಥ ನಾಯಕರು ಇದೀಗ ಬಿಜೆಪಿ ತಂಡದಲ್ಲಿದ್ದಾರೆ.

ಬಿಜೆಪಿ ರಾಜ್ಯ ಅಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಮಾಜಿ ಸಚಿವರಾದ ಮುರುಗೇಶ್‌ ನಿರಾಣಿ, ಬೈರತಿ ಬಸವರಾಜ್‌ ಅವರು ಉಪಾಧ್ಯಕ್ಷರಾಗಿದ್ದರೆ , ಮತ್ತೊಬ್ಬ ಮಾಜಿ ಸಚಿವ ವಿ. ಸುನಿಲ್‌ ಕುಮಾರ್‌ ಅವರು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
10 ಮಂದಿ ಉಪಾಧ್ಯಕ್ಷರು, ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.

ಯಾರಿಗೆ ಯಾವ ಹುದ್ದೆ; ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?
ಹತ್ತು ಉಪಾಧ್ಯಕ್ಷರು ಇವರು: ಮಾಜಿ ಸಚಿವರಾದ ಮುರುಗೇಶ್ ನಿರಾಣಿ (ಬಾಗಲಕೋಟೆ), ಬೈರತಿ ಬಸವರಾಜ್ (ಬೆಂಗಳೂರು), ನಾಯಕರಾದ ರಾಜುಗೌಡ ನಾಯಕ್ (ಯಾದಗಿರಿ), ಎನ್ ಮಹೇಶ್ (ಚಾಮರಾಜನಗರ), ಅನಿಲ್ ಬೆನಕೆ (ಬೆಳಗಾವಿ), ಹರತಾಳು ಹಾಲಪ್ಪ (ಶಿವಮೊಗ್ಗ), ರೂಪಾಲಿ ನಾಯಕ್ (ಉತ್ತರ ಕನ್ನಡ), ಡಾ. ಬಸವರಾಜ್ ಕೇಲಗಾರ (ಹಾವೇರಿ), ಮಾಳವಿಕಾ ಅವಿನಾಶ್ (ಬೆಂಗಳೂರು) ಹಾಗೂ ಎಂ. ರಾಜೇಂದ್ರ (ಮೈಸೂರು) ಅವರನ್ನು ನೇಮಿಸಲಾಗಿದೆ.

ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಕುಡಚಿಯ ಪಿ. ರಾಜೀವ್, ಬೆಂಗಳೂರಿನ ನಂದೀಶ್ ರೆಡ್ಡಿ, ಹಾಸನ ಪ್ರೀತಮ್ ಗೌಡ ನೇಮಕಗೊಂಡಿದ್ದಾರೆ.

1೦ ಮಂದಿ ರಾಜ್ಯ ಕಾರ್ಯದರ್ಶಿಗಳು ಇವರು
ಬೀದರ್‌ನ ಶೈಲೇಂದ್ರ ಬೆಲ್ದಾಳೆ, ಶಿವಮೊಗ್ಗ ಡಿ.ಎಸ್ ಅರುಣ್, ಕಲಬುರಗಿಯ ಬಸವರಾಜ್ ಮತ್ತಿಮೋಡ್, ಚಿಕ್ಕಬಳ್ಳಾಪುರದ ಸಿ ಮುನಿರಾಜು, ತುಮಕೂರಿನ ವಿನಯ್ ಬಿದರೆ, ಮಂಗಳೂರಿನ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೊಪ್ಪಳದ ಶರಣು ತಳ್ಳಕೇರಿ, ಯಾದಗಿರಿಯ ಲಲಿತಾ ಅನಾಪುರ, ಮಂಡ್ಯದ ಲಕ್ಷ್ಮೀ ಅಶ್ವಿನ್ ಗೌಡ, ತುಮಕೂರಿನ ಅಂಬಿಕಾ ಹುಲಿನಾಯ್ಕರ್ ನೇಮಕ.

ಬಿಜೆಪಿ ರಾಜ್ಯ ಖಚಾಂಚಿಯಾಗಿ ಬೆಂಗಳೂರಿನ ಸುಬ್ಬ ನರಸಿಂಹ ಅವರನ್ನು ಮುಂದುವರಿಸಲಾಗಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ