ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಪ್ರಾಸಿಕ್ಯೂಟರ್-1 ಆಗಿ ಬಿ.ಎನ್.ಜಗದೀಶ್ ಅವರನ್ನು ನೇಮಕ ಮಾಡಿ ರಾಜ್ಯ ಕಾನೂನು ಇಲಾಖೆ ಆದೇಶ ಹೊರಡಿಸಿದೆ.
ಈವರೆವಿಗೂ ರಾಜ್ಯ ಪ್ರಾಸಿಕ್ಯೂಟರ್-1 ಆಗಿದ್ದ ಬಿ.ಎ.ಬೆಳ್ಳಿಯಪ್ಪ ಅವರ ಹುದ್ದೆಗೆ ಜಗದೀಶ್ ಅವರಿಗೆ ಪದೋನ್ನತಿ ನೀಡಲಾಗಿದೆ. ವಿಜಯಕುಮಾರ್ ಮಜಗೆ ಅವರನ್ನು ರಾಜ್ಯ ಪ್ರಾಸಿಕ್ಯೂಟರ್-2 ಹುದ್ದೆಯಲ್ಲಿ ಮುಂದುವರಿಸಲಾಗಿದೆ. ಮೊಹಮ್ಮದ್ ಆಯುಬ್ ಅಲಿ ಖಾನ್ ಅವರನ್ನು ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಗಿದೆ.
