Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಂಪುಟ ಸೇರ್ತಾರಾ ಜಗದೀಶ ಶೆಟ್ಟರ್ ?

 

ನವದೆಹಲಿ:
“ನಮ್ಮ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಯಿಂದ ಆಗುವುದಿಲ್ಲ. ಇದು ವಿಫಲ ಯತ್ನ ಎಂದು ಅವರಿಗೂ ಚೆನ್ನಾಗಿ ಗೊತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜತೆ ಬುಧವಾರ ಅವರು ಮಾತನಾಡಿದರು.

ಆಪರೇಷನ್ ಕಮಲ ಮಾಡಲು ಬಿಜೆಪಿ ಸಜ್ಜಾಗುತ್ತಿದ್ದು, ಫಡ್ನವೀಸ್ ನೇತೃತ್ವದಲ್ಲಿ ಮಹರಾಷ್ಟ್ರದಲ್ಲಿ ಸಭೆ ನಡೆದಿದೆ ಎಂದು ಗುಪ್ತಚರ ಇಲಾಖೆಗಳು ತಿಳಿಸಿವೆಯಂತಲ್ಲ’ ಎಂದು ಕೇಳಿದ ಪ್ರಶ್ನೆಗೆ, “ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ನಾನು ಯಾವುದೇ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಅವರ ಪಕ್ಷದ, ನಾಯಕತ್ವದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅದನ್ನು ಹೊರಗೆ ಹೇಳಿಕೊಳ್ಳಲು ಆಗದೆ, ಇಂತಹ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿಯವರು ಯಾರೋ ಬಂದಂತೆ, ಹೋದಂತೆ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಕೆಲಸಗಳಿಗೆ, ಕುಶಲೋಪರಿ ವಿಚಾರಿಸಲು ಅನೇಕರು ಬಂದಿರುತ್ತಾರೆ. ಆದರೆ ಮನೆಯಿಂದ ಹೊರಗೆ ಬಂದು ರಾಜಕೀಯ ವಿಚಾರಕ್ಕೆ ಬಂದಿದ್ದೇ ಎಂದು ಮಾಧ್ಯಮಗಳ ಮುಂದೆ ಹೇಳುತ್ತಾರೆ. ಚಲಾವಣೆಯಲ್ಲಿ ಇರಬೇಕಾದ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ” ಎಂದರು.

*ಬಿಜೆಪಿಯ ಎಲ್ಲಾ ನಡೆಯೂ ನನಗೆ ಗೊತ್ತಿದೆ*

ಸರ್ಕಾರ ಬೀಳಿಸುವ ಯತ್ನ ಮಹರಾಷ್ಟ್ರದಿಂದ ನಡೆದಿದೆ, ರಾಜ್ಯದ ನಾಯಕರು ಅಲ್ಲಿ ಭಾಗವಹಿಸಿದ ಬಗ್ಗೆ ಮಾಹಿತಿ ಸಿಕ್ಕಿದೆಯೇ ಎಂದು ಮರುಪ್ರಶ್ನಿಸಿದಾಗ, “Hundred Things happens, Congress Party will digist (ನೂರಾರು ಬೆಳವಣಿಗೆಗಳು ನಡೆಯುತ್ತವೆ. ಇದೆಲ್ಲವನ್ನು ಕಾಂಗ್ರೆಸ್ ಪಕ್ಷ ಅರಗಿಸಿಕೊಳ್ಳುತ್ತದೆ). ಇದರ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾಗಿದೆ. ನೂರು ಸಭೆ ಮಾಡಿರಲಿ, ಮಾಡದಿರಲಿ. ಅವರ ಎಲ್ಲಾ ನಡೆಯೂ ನನಗೆ ಗೊತ್ತಿದೆ. ಬಿಜೆಪಿಯ ನಾಯಕರು ತಮ್ಮದೇ ಕಷ್ಟದಲ್ಲಿದ್ದಾರೆ, ಒಂದಷ್ಟು ಜನ ನಿರುದ್ಯೋಗಿಗಳು ಇದ್ದಾರಲ್ಲಾ, ಅವರು ಚಪಲಕ್ಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಹೇಳಿದರು.

*ನಮ್ಮಿಂದ ಅಲ್ಲಿಗೆ ಹೋದವರೇ, ಈ ಆಪರೇಷನ್ ಕೆಲಸ ಮಾಡುತ್ತಿರುವುದು*

ಕಾಂಗ್ರೆಸ್ ಪಕ್ಷದ ಶಾಸಕರು ಈ ಸಭೆಗಳಲ್ಲಿ ಭಾಗವಹಿಸಿದ್ದಾರೆಯೇ ಎಂದು ಕೇಳಿದಾಗ “ನಮ್ಮ ಶಾಸಕರು ಯಾರೂ ಹೋಗಿಲ್ಲ. ಮೊದಲಿನಿಂದ ಏಜೆಂಟ್ ಕೆಲಸ ಮಾಡುತ್ತಿದ್ದವರು, ನಮ್ಮ ಶಾಸಕರನ್ನು ಸ್ವತಃ ಹುಡುಕಿಕೊಂಡು ಬಂದಿದ್ದಾರೆ. ಯಾರು, ಯಾರ ಬಳಿ ಬಂದು ಮಾತನಾಡಿದ್ದಾರೆ, ಅವರೆಲ್ಲಾ ನಮ್ಮ ಬಳಿ ಬಂದು ಮಾಹಿತಿ ನೀಡಿದ್ದಾರೆ. ನಮ್ಮಿಂದ ಹಿಂದೆ ಅಲ್ಲಿಗೆ ಹೋದವರೇ ಈ ಆಪರೇಷನ್ ಕೆಲಸ ಮಾಡುತ್ತಿರುವುದು” ಎಂದರು.

ಕರ್ನಾಟಕ ಜಗಳಕ್ಕೆ ಮಾದರಿ ಎಂದು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಹೇಳಿರುವ ಬಗ್ಗೆ ಕೇಳಿದಾಗ “ಪ್ರಧಾನಿಗಳು ನಮ್ಮನ್ನು ನೆನೆಸಿಕೊಳ್ಳುತ್ತಿದ್ದಾರಲ್ಲಾ ಅಷ್ಟೇ ಸಾಕು. ನಮ್ಮ ಗ್ಯಾರಂಟಿ, ಕೆಲಸ, ಒಗ್ಗಟ್ಟು ಅವರ ನಿದ್ರೆ ಕೆಡಿಸಿದೆ. ಇದು ಸಂತೋಷದ ವಿಚಾರ, ಅವರಿಗೆ ಅಭಿನಂದನೆಗಳು. ಅದಕ್ಕೆ ಮುಖ್ಯಮಂತ್ರಿ ಏನು ಉತ್ತರ ಕೊಡಬೇಕೋ ಕೊಟ್ಟಿದ್ದಾರೆ” ಎಂದು ಪ್ರತಿಕ್ರಿಯಿಸಿದರು.

ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ವಿಚಾರದ ಬಗ್ಗೆ ಕೇಳಿದಾಗ “ನಾನು ಕಾಂಗ್ರೆಸ್ ಪಕ್ಷ ಎನ್ನುವ ಕುಟುಂಬದ ಮುಖ್ಯಸ್ಥ. ಪಕ್ಷದ ಸಾಕಷ್ಟು ಕೆಲಸಗಳು ಇರುತ್ತವೆ. ಆದಕ್ಕೆ ನಾನೇ ಒಂದಷ್ಟು ಜನ ನಾಯಕರ ಮನೆಗೆ ಹೋಗುತ್ತೇನೆ. ಅಥವಾ ನನ್ನ ಮನೆಗೆ ಕರೆಯುತ್ತೇನೆ. ರಾಮಲಿಂಗಾರೆಡ್ಡಿ, ಪರಮೇಶ್ವರ್ ಅವರ ಮನೆಗೆ ಹೋಗುತ್ತೇನೆ. ಅವರುಗಳೇ ನನ್ನ ಮನೆಗೆ ಬರುತ್ತೇನೆ ಎಂದಾಗ, ಬೇಡ ನಾನೇ ಬರುತ್ತೇನೆ ಎಂದು ಹೋಗಿದ್ದ ಸಂದರ್ಭಗಳೂ ಇವೆ. ಅದೇ ರೀತಿ ಸತೀಶ್ ಜಾರಕಿಹೊಳಿ ಅವರೇ ಮನೆಗೆ ಬರುತ್ತೇನೆ ಎಂದಿದ್ದರು. ಅದಕ್ಕೆ ಬೇಡ, ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ಹೋದೆ. ನಾನೊಬ್ಬ ಪಕ್ಷದ ಅಧ್ಯಕ್ಷ, ಅದಕ್ಕೆ ಭೇಟಿಯಾಗಿದ್ದೇನೆ” ಎಂದರು.

ಸಾಮಾನ್ಯವಾಗಿ ಕುಟುಂಬದ ಮುಖ್ಯಸ್ಥನ ಮನೆಗೆ ಸದಸ್ಯರು ಬರುತ್ತಾರೆ, ನೀವೆ ಅವರ ಮನೆಗೆ ಹೋಗಿದ್ದು ಏಕೆ ಎಂದಾಗ “ನಮ್ಮ ಮನೆಯಲ್ಲಿ ಮಾತನಾಡಲು ಸಮಯವೇ ಇಲ್ಲ, ನಮ್ಮ ಕಾರ್ಯಕರ್ತರಿಗೆ ಸರಿಯಾಗಿ ಸಮಯ ಕೊಡಲು ಆಗುತ್ತಿಲ್ಲ. ಅದಕ್ಕಾಗಿ ಅವರ ಬಳಿ ಕ್ಷಮೆ ಕೇಳುತ್ತೇನೆ” ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎನ್ನುವ ಎರಡು ಅಧಿಕಾರ ಶಕ್ತಿ ಕೇಂದ್ರಗಳಿದ್ದು, ಸತೀಶ್ ಜಾರಕಿಹೊಳಿ ಅವರು ಮೂರನೇ ಶಕ್ತಿ ಕೇಂದ್ರವಾಗಿ ಸೃಷ್ಟಿಯಾಗುತ್ತಿದ್ದಾರಾ ಎಂದಾಗ “ರಾಜ್ಯದಲ್ಲಿ ಒಬ್ಬರೇ ಸಿಎಂ, ಒಬ್ಬರೇ ಕೆಪಿಸಿಸಿ ಅಧ್ಯಕ್ಷ, ಇದಕ್ಕೆ ಉಪಮುಖ್ಯಮಂತ್ರಿ ಪಟ್ಟ ಜೋಡಿಸಿಕೊಂಡಿದೆ” ಎಂದು ಸ್ಪಷ್ಟಪಡಿಸಿದರು.

2028 ರಲ್ಲಿ ನಾನೇ ಸಿಎಂ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂದಾಗ “ಆಸೆ ಪಡುವುದರಲ್ಲಿ ತಪ್ಪೇನಿದೆ. ಈಗ ಕೊಟ್ಟಿರುವ ಅಧಿಕಾರವನ್ನು 5 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿ, ಮುಂದಿನ ಬಾರಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎನ್ನುವ ಆತ್ಮವಿಶ್ವಾಸಕ್ಕಿಂತ ಬೇರೇನಿದೆ?” ಎಂದು ತಿಳಿಸಿದರು.

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಎಳೆದುಕೊಂಡು ಬಿಡುತ್ತಾರೆ ಎಂಬ ಮಾತುಗಳು ಇದ್ದಾಗ ಹಾಸನಾಂಬ ದರ್ಶನ ಪಡೆದು ಕುಮಾರಸ್ವಾಮಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರಲ್ಲ ಎಂದು ಕೇಳಿದಾಗ “ಇಂತಹ ಪರಿಸ್ಥಿತಿ ಅವರಿಗೆ ಏಕೆ ಬಂತು?. ನಾವು ಅವರ ಸುದ್ದಿಗೆ ಹೋಗಿಲ್ಲ, ನಮ್ಮಲ್ಲೇ 136 ಜನ ಹಾಗೂ ಪಕ್ಷೇತರರ ಬೆಂಬಲ ಇದೆಯಲ್ಲಾ? ಅವರಿಗೆ ಒಗ್ಗಟ್ಟು ಪ್ರದರ್ಶಿಸುವ ಪರಿಸ್ಥಿತಿ ಏಕೆ ಬಂತು?” ಎಂದು ಕೇಳಿದರು.

ನೀವು ಏನಿಲ್ಲ ಎಂದು ಹೇಳುತ್ತಿದ್ದೀರಿ, ಆದರೆ ಸಿಎಂ ಸಿದ್ದರಾಮಯ್ಯ ಅವರು ಬಹಳಷ್ಟು ಜನ ಬಿಜೆಪಿ, ಜೆಡಿಎಸ್ನವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎನ್ನುತ್ತಿದ್ದಾರೆ ಎಂದಾಗ “ಇದೆ, ನಾನು ಇಲ್ಲ ಎಂದು ಹೇಳಿಲ್ಲವಲ್ಲ. ನ.15 ಕ್ಕೆ ಪಕ್ಷ ಸೇರ್ಪಡೆ ಇದೆ, ನ.14 ರ ಸಂಜೆ ತಿಳಿಸುತ್ತೇವೆ, ನೀವು ಯಾರೋ ಬರುತ್ತಾರೆ ಎಂದು ಹೇಳಿದರಲ್ಲಾ” ಎಂದರು.

ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರನ್ನು ವಿಮುಕ್ತಿಗೊಳಿಸಬೇಕು, ಅವರೇ ಸರ್ಕಾರಕ್ಕೆ ಕಳಂಕ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಆರೋಪ ಮಾಡಿರುವ ಬಗ್ಗೆ ಕೇಳಿದಾಗ “ನನಗೆ ಅವರ ಭೇಟಿಯ ನಂತರ ಈ ವಿಚಾರ ತಿಳಿಯಿತು. ನನಗೆ ಯಾವುದೇ ಪತ್ರ ತಲುಪಿಲ್ಲ, ಅದರ ಬಗ್ಗೆ ವಿಚಾರಿಸಿ ಹೇಳುತ್ತೇನೆ. ಹಿರಿಯರಾದ ಕೆಂಪಣ್ಣ ಅವರು ಭೇಟಿ ಮಾಡಿ, ಒಂದಷ್ಟು ಸಲಹೆ ನೀಡಿದರು. ಸೀನಿಯಾರಿಟಿ ಮೇಲೆ ಹಣ ನೀಡಿ ಎಂದು ಸಲಹೆ ನೀಡಿದ್ದಾರೆ. ಅವರು ನೀಡಿರುವ ಸಲಹೆ ಸಮಯೋಚಿತವಾಗಿದೆ” ಎಂದರು.

ಸದಾಶಿವ ಆಯೋಗ ವರದಿ ಜಾರಿಗೆ ಮತ್ತೊಮ್ಮೆ ಕೂಗು ಎದ್ದಿದೆ, ಎಡಗೈ ಸಮುದಾಯದವರು ಬೆಳಗಾವಿಯಲ್ಲಿ ಬೃಹತ್ ಸಮಾವೇಶಕ್ಕೆ ಸಜ್ಜಾಗುತ್ತಿರುವ ಬಗ್ಗೆ ಕೇಳಿದಾಗ “ಕಾಂಗ್ರೆಸ್ ಪಕ್ಷ ಈ ವಿಚಾರಕ್ಕೆ ಬದ್ದವಾಗಿದೆ. ಚುನಾವಣೆಗೂ ಮುಂಚಿತವಾಗಿ, ಚಿತ್ರದುರ್ಗದ ಸಮಾವೇಶದಲ್ಲಿ ಒಂದಷ್ಟು ನಿರ್ಣಯಗಳನ್ನು ತೆಗೆದುಕೊಂಡಿದ್ದೆವು. ಹಂತ, ಹಂತವಾಗಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಒಂದೇ ದಿನದಲ್ಲಿ ಮಾಡಲು ಯಾರ ಕೈಯಲ್ಲೂ ಆಗುವುದಿಲ್ಲ.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಸುಮ್ಮನೆ ಹೇಳುತ್ತಿದ್ದರು, ಆದರೆ ನಾವು ಹಿಂದಿನ ಬಜೆಟ್ ನಲ್ಲಿ ಯಾವ ಕೆಲಸಗಳು ಇದ್ದವೋ ಅದನ್ನು ಮುಂದುವರೆಸಿದಿದ್ದೇವೆ. ಹೊಸ ಕೆಲಸ ಮಾಡಲು ನಾವು ಹೊಸ ಬಜೆಟ್ ಕೊಟ್ಟಿಲ್ಲವಲ್ಲ? ಆದರೆ ಗ್ಯಾರಂಟಿಗಳ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಬರುವ ಡಿಸೆಂಬರ್ ವೇಳೆಗೆ ಮುಖ್ಯಮಂತ್ರಿಗಳು ಒಂದಷ್ಟನ್ನು ನಿಭಾಯಿಸೋಣ ಎಂದು ಭರವಸೆ ನೀಡಿದ್ದಾರೆ” ಎಂದು ತಿಳಿಸಿದರು.

ರಾಜ್ಯದಲ್ಲಿ ಬರಗಾಲವಿದ್ದರು ಸಿಎಂ ಕಚೇರಿಗೆ ಪೀಠೋಪಕರಣ ಹಾಗೂ ಹೊಸ ಕಾರುಗಳ ಖರೀದಿ ಬಗ್ಗೆ ಕೇಳಿದಾಗ “ಡಿಸೇಲ್ ಕಾರು ಮತ್ತು ಹಳೆಯ ಕಾರುಗಳನ್ನು ಬದಲಾಯಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ದೆಹಲಿಯಲ್ಲಿ ಇರುವ ನನ್ನ ಕಾರನ್ನೇ ಬದಲಾಯಿಸಬೇಕು ಎಂದು ಕಾರ್ಯದರ್ಶಿ ಹೇಳಿದರು, ಇಲ್ಲಿ ಬುಕ್ಕಿಂಗ್ ಇಲ್ಲದ ಕಾರಣ, ಬೆಂಗಳೂರಿಗೆ ಹೋಗಿ ಟೊಯೋಟೋ ಕಂಪೆನಿಯವರಿಗೆ ಬದಲಾಯಿಸಿಕೊಡಿ ಎಂದು ಹೇಳಬೇಕಾಗಿದೆ. ಆದ ಕಾರಣ ಡೀಸೆಲ್ ಕಾರುಗಳನ್ನು ತೆಗೆದು 30 ಪೆಟ್ರೋಲ್ ಕಾರುಗಳಿಗಾಗಿ ಕಾಯ್ದಿರಿಸಲಾಗಿದೆ” ಎಂದು ಸಮರ್ಥನೆ ನೀಡಿದರು.

ಪಂಚರಾಜ್ಯ ಚುನಾವಣೆಯಲ್ಲಿ ಎಷ್ಟು ರಾಜ್ಯಗಳನ್ನು ಗೆಲ್ಲಬಹುದು ಎಂದು ಕೇಳಿದಾಗ “ಐದು ರಾಜ್ಯಗಳನ್ನೂ ಗೆಲ್ಲುತ್ತೇವೆ. ಮಿಜೋರಾಂ ಬಗ್ಗೆ ಅಷ್ಟಾಗಿ ಮಾಹಿತಿಯಿಲ್ಲ, ಆದರೆ ಮಿಕ್ಕ ರಾಜ್ಯಗಳನ್ನು ಗೆಲ್ಲುತ್ತೇವೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದೆ ಎಂದು ಮರುಪ್ರಶ್ನಿಸಿದಾಗ “ಇಡೀ ಉತ್ತರ ಭಾರತದಲ್ಲೇ ಅತ್ಯಂತ ಹೆಚ್ಚು ಉತ್ತಮ ಕೆಲಸಗಳು ನಡೆದಿರುವುದು ರಾಜಸ್ಥಾನದಲ್ಲಿ. ನೋಡಿ, ಕೇಳಿ ಮಾಹಿತಿ ಪಡೆದುಕೊಂಡಿದ್ಧೇನೆ, ಒಳ್ಳೆ ಕೆಲಸ ಮಾಡಿದ್ದಾರೆ” ಎಂದರು.

ಪಂಚರಾಜ್ಯ ಚುನಾವಣೆ ಆದ ನಂತರ ಸಚಿವ ಸಂಪುಟ ಪುನರ್ರಚನೆಯಾಗುತ್ತದೆ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಾಗುತ್ತದೆಯೇ ಎನ್ನುವ ಪ್ರಶ್ನೆಗೆ “ಯಾರನ್ನು ಬಿಡುವ ಪ್ರಶ್ನೆಯಿಲ್ಲ, ಈಗ ಸದ್ಯಕ್ಕೆ ಇದರ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ನಿಗಮ ಮಂಡಳಿಗಳ ಬಗ್ಗೆ ಈಗಾಗಲೇ ಎರಡು ಬಾರಿ ಚರ್ಚೆಯಾಗಿದ್ದು, ನ. 15 ರ ನಂತರ ಎಐಸಿಸಿಯವರು ಬಂದು ತೀರ್ಮಾನ ಮಾಡುತ್ತಾರೆ” ಎಂದು ಮಾಹಿತಿ ನೀಡಿದರು.

ಕಾರ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಕೇಳಿದಾಗ “ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ ಅವರು ಸಾಕಷ್ಟು ಕಾರ್ಯಭಾರಗಳ ಒತ್ತಡದಲ್ಲಿ ಇದ್ದಾರೆ. ಅವರ ಇಲಾಖೆಯ ಕೆಲಸ ಸಾಕಷ್ಟಿದೆ. ಆದ ಕಾರಣ ಹೊಸ ತಂಡ ಬಂದು ಪಕ್ಷದ ಚಟುವಟಿಕೆಗಳನ್ನು ಚುರುಕು ಮಾಡಬೇಕು ಎನ್ನುವ ಅಭಿಲಾಷೆಯಿದೆ, ನಮ್ಮ ಸಲಹೆಯನ್ನೂ ಕೇಳಿದ್ದಾರೆ. ನಮ್ಮ ರಾಜ್ಯದವರೇ ಮೇಲಿದ್ದಾರೆ, ಸದ್ಯದಲ್ಲೇ ತೀರ್ಮಾನ ಮಾಡುತ್ತಾರೆ” ಎಂದರು.

ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಯಾವ ವಿಚಾರ ಚರ್ಚೆ ಮಾಡಿದ್ದೀರಿ ಎಂದು ಕೇಳಿದಾಗ “ತೆಲಂಗಾಣ ಚುನಾವಣೆಗೆ ರಾಜ್ಯದ 50 ಕ್ಕೂ ಹೆಚ್ಚು ನಾಯಕರನ್ನು ಚುನಾವಣಾ ಸಂಬಂಧಿ ಕೆಲಸಗಳಿಗೆ ನಿಯೋಜಿಸಲಾಗಿದೆ. ನಾನು ಸಹ ನ.10 ರಂದು ತೆಲಂಗಾಣಕ್ಕೆ ಭೇಟಿ ನೀಡಲಿದ್ದೇನೆ, ಈ ವಿಚಾರವಾಗಿ ಚರ್ಚೆ ನಡೆಸಲಾಯಿತು. ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯಗಳ ನಾಯಕರು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ರಾಜ್ಯಕ್ಕೆ ಬಂದು ಕೆಲಸ ಮಾಡಿದ್ದಾರೆ, ಅದಕ್ಕೆ ನಾವು ಸಹಾಯ ಮಾಡುತ್ತಿದ್ದೇವೆ. ಬಿಜೆಪಿಯವರೂ ಕಳಿಸಿದ್ದಾರೆ” ಎಂದು ತಿಳಿಸಿದರು.

ಯಾವ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೀರಿ ಎಂದು ಕೇಳಿದಾಗ “ಅದನ್ನೆಲ್ಲಾ ಹೇಳಲು ಆಗುವುದಿಲ್ಲ” ಎಂದರು.

ಶಿವಾಜಿ ನಗರದಲ್ಲಿ 74 ಕೋಟಿ ವೆಚ್ಚದ ಚರಕ ಆಸ್ಪತ್ರೆ ವೈದ್ಯರು ಹಾಗು ಇತರೇ ಸಿಬ್ಬಂದಿಗಳು ಇಲ್ಲದೇ ಅನುಪಯುಕ್ತವಾಗಿದೆ ಎಂದು ಕೇಳಿದಾಗ “ಬಿಬಿಎಂಪಿಯಿಂದ ಬೆಂಗಳೂರು ನಗರದಲ್ಲಿ ಸಾಕಷ್ಟು ಮೂಲ ಸೌಕರ್ಯ ಯೋಜನೆಗಳು ಅನುಷ್ಠಾನಗೊಂಡಿವೆ. ಖಾಸಗಿ ಆಸ್ಪತ್ರೆಯವರು ಒಂದಷ್ಟು ಏರಿಯಾಗಳನ್ನು ದತ್ತು ತೆಗದುಕೊಂಡು ಅದನ್ನು ನಿರ್ವಹಣೆ ಮಾಡುವ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಮತ್ತು ನಾನು ಸಭೆ ಸೇರಿ ತೀರ್ಮಾನ ಮಾಡಲಿದ್ದೇವೆ. 200 ಹಾಸಿಗೆಯುಳ್ಳ ಅನೇಕ ಆಸ್ಪತ್ರೆಗಳು ಸಿಬ್ಬಂದಿಗಳು ಇಲ್ಲದೇ ಸೊರಗಿವೆ, ಇವುಗಳ ಅಭಿವೃದ್ದಿಗೆ ಕ್ರಮ ತೆಗೆದುಕೊಳ್ಳುತ್ತೇವೆ. ಅನೇಕ ವೈದ್ಯರು ಕೆಲಸ ಮಾಡಲು ಹಳ್ಳಿಗಳಿಗೆ ಹೋಗುತ್ತಿಲ್ಲ, ಆದ ಕಾರಣ ಇವುಗಳಿಗೆ ಜೀವ ಕೊಡಲು ಈ ಯೋಜನೆಯನ್ನು ಜಾರಿಗೆ ತರಲು ಯೋಚಿಸುತ್ತಿದ್ದೇವೆ. ಬೌರಿಂಗ್ ಆಸ್ಪತ್ರೆ ಸೇರಿದಂತೆ ಪಾಲಿಕೆಯ ಅಡಿಯಲ್ಲಿ ಬರುವ ಆಸ್ಪತ್ರೆಗಳ ಸಮರ್ಪಕ ಬಳಕೆ ಮಾಡಿಕೊಳ್ಳುತ್ತೇವೆ” ಎಂದು ತಿಳಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ