Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಕೆಂಡ ಕಾರಿದ ಕರವೇ

 

ಬೆಳಗಾವಿ:
ಫೆ.28 ರ ಒಳಗೆ ಕನ್ನಡಮಯವಾಗುತ್ತದೆ ಅಂತಾ ಸರಕಾರ ಹೇಳಿ ಸಮಯ ತೆಗೆದುಕೊಂಡಿದೆ. ಸರಕಾರ ಮಾತು ತಪ್ಪಿದರೆ 32 ಜಿಲ್ಲೆಯವರು ಗುಡುಗಬೇಕಾಗುತ್ತದೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಕನ್ನಡ ಭವನದಲ್ಲಿ ಇಂದು ಕರವೇ ರಾಜ್ಯ ಕಾರ್ಯಕಾರಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಉಳಿವಿಗಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಿತು. ಬೆಂಗಳೂರಿನಲ್ಲಿ ಕರವೇ ಹೋರಾಟದ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಸಭೆಯಲ್ಲಿ ಪೋಲಿಸ್ ಕಮಿಷನರ್ ದಯಾನಂದ ಅವರು ಸಿದ್ದರಾಮಯ್ಯ ಅವರಿಗೆ ತಲೆ ತುಂಬುವ ಕೆಲಸ ಮಾಡಿದರು. ನಾರಾಯಣಗೌಡ ಅವರನ್ನು ಮೂರು ತಿಂಗಳು ಬಂಧಿಸಿದರೆ ಚೆನ್ನಾಗಿರುತ್ತದೆ ಅಂತಾ ದಯಾನಂದ ಹೇಳಿದ್ದ ಎಂದು ಆರೋಪಿಸಿದರು.
ಪ್ರತಿ ಹೋರಾಟದಲ್ಲಿ ನಮಗೆ ಮಾಧ್ಯಮಗಳು ಸಾಕಷ್ಟು ಸಹಕಾರ ನೀಡುವ ಕೆಲಸ ಮಾಡಿವೆ. ನಮ್ಮ ಹೋರಾಟದಲ್ಲಿ ನಮಗೆ ಸದಾ ಬೆನ್ನೆಲುಬಾಗಿ ನಿಂತು ನಮ್ಮ ಜೈಲಿನಿಂದ ಬಿಡಿಸಿದವರು ನಮ್ಮ ವಕೀಲರು ಎಂದು ಹೇಳಿ ಮಾಧ್ಯಮ ಹಾಗೂ ವಕೀಲರಿಗೆ ಅಭಿನಂದನೆ ಸಲ್ಲಿಸಿದರು.

ನಮ್ಮನ್ನ ಬಂಧಿಸಿ ನಮ್ಮನ್ನ ಇನ್ನು ಜೈಲಿಗೆ ಹಾಕಿ ಭಯ ಪಡುವುದಿಲ್ಲ. ಹೆಂಡರು ಹೋಗಲಿ ಮಕ್ಕಳು ಹೋಗಲಿ, ಕನ್ನಡ ನಮ್ಮ ಜಗತ್ತ ಬೆಳಗಿಸೊವರೆಗೂ ನಮ್ಮ ಹೋರಾಟ ನಡೆಯಲಿದೆ. ನಾಡಿನ ಸಲುವಾಗಿ ಮನೆ ಬಿಟ್ಟು ಹೊರಗೆ ಬಂದು ಹೋರಾಟ ಮಾಡುವವರು ನಾವು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಹಾಗೂ ಯಡಿಯೂರಪ್ಪ ಅವರೇ ನಿಮ್ಮ ಕೊಡುಗೆ ರಾಜ್ಯಕ್ಕೆ ಏನಾದರೂ ಇದೇನಾ? ರಾಜಕಾರಣಿಗಳ ಕೊಡುಗೆ ಬಗ್ಗೆ ಪ್ರಶ್ನೆ ಮಾಡಿದಾಗ ಬರುವ ಉತ್ತರ ಶೂನ್ಯ ಎಂದರು.
ಬೆಳಗಾವಿ ಅಂತಾ ಅಂದರೆ ಬೆಳಗಾವಿ ನಮ್ಮದು ಅಂತಾ ಹೇಳಿದ್ದು ಕರವೇ ಹೋರಾಟದಿಂದ ಶುರುವಾಗಿದೆ. ಕರ್ನಾಟಕದ ಸಚಿವ ಸಂಪುಟ ಅಂದರೆ ನಮ್ಮ ಕನ್ನಡಿಗರು. ಅಪ್ಪಟ ಕನ್ನಡಿಗರು ಈ ಸಭೆಯಲ್ಲಿ ಕುಳಿತಿರುವುದೆ ನಮ್ಮ ಸಚಿವ ಸಂಪುಟ ಎಂದರು.

ಪಾಟೀಲ ಪುಟ್ಟಪ್ಪ, ಕುವೆಂಪು ಅವರೇ ನಮ್ಮ ನಾಯಕರು, ಅವರೆ ನಮ್ಮ ದೇವರು. ನಮಗೆ ಕನ್ನಡವೇ ಧರ್ಮ, ಕನ್ನಡವೇ ಜಾತಿ. ನಿಮ್ಮದು ಯಾವುದು ಎಂದು ರಾಜಕೀಯ ನಾಯಕರ ವಿರುದ್ಧ ಅಕ್ರೋಶ ಹೊರಹಾಕಿದ ನಾರಾಯಣಗೌಡ, ನನ್ನನ್ನು ಅಡಗಿಸಿದರೆ ಕರವೇ ಮುಚ್ಚುತ್ತೆ ಎಂದು ತಿಳಿದು ಕೊಂಡಿದ್ದೀರಾ? ಕರವೇ ಬೇರು ಸಾಕಷ್ಟು ಆಳವಾಗಿದೆ, ಅದನ್ನ ಅಡಗಿಸಲು ಅಸಾಧ್ಯವಾದ ಮಾತು ಎಂದರು.
ಕನ್ನಡವನ್ನ, ಕರವೇ ಅವರನ್ನ ಎದುರು ಹಾಕಿಕೊಂಡವರು ಯಾರು ಉಳದಿಲ್ಲಾ ನಮ್ಮ ಮುಂದೆ. ನಮ್ಮ ಹೆಣ್ಣ ಮಕ್ಕಳು ಶಾಲು ಹಾಕಿ ಕುತಕ್ಕೊಂಡಾರಲ್ಲಾ ಅವರೆಲ್ಲಾ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಹೆತ್ತವರು ಅನಸುತ್ತದೆ. ನಾನು ನನ್ನ 35 ವರ್ಷದಲ್ಲಿ ನನ್ನ ಬದುಕಿನ‌ ಬಗ್ಗೆ ಯೋಚನೆ ಮಾಡಿಲ್ಲ. ಇವತ್ತಿಗೂ ನಾನು ನನ್ನ ಬದುಕಿನ ಬಗ್ಗೆ ಯೋಚನೆ ಮಾಡಿಲ್ಲ. ನಾನು ಇವತ್ತಿಗೂ ಎದೆಗುಂದದೆ ಮಾತಾಡುವ ಶಕ್ತಿ ಕೊಟ್ಟಿದ್ದು ನೀವು ಎಂದು ಕಾರ್ಯಕರ್ತರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು.



ಕನ್ನಡ ನಾಡನ್ನ ಪ್ರೀತಿಯಿಂದ ಕಟ್ಟೋಣ, ನಾವು ಯಾರನ್ನ ದ್ವೇಷ ಮಾಡಲು ಬಂದಿಲ್ಲ. ನಮ್ಮ ನಾಡು ನುಡಿ ಹಂಚಿಕೊಂಡು ಬದುಕಿ, ನಮ್ಮ ಭಾಷೆ ಹಂಚಿಕೊಂಡು ಬದುಕಿ ಎಂದು ರಾಜ್ಯದಲ್ಲಿರುವ ಹೊರ ರಾಜ್ಯದವರಿಗೆ ಎಚ್ಚರಿಕೆ ನೀಡಿದರು. ನಮ್ಮಲ್ಲಿ ಬೇರೆ ಬೇರೆ ಭಾಷೆ ಮಾತಾಡುವವರು ಇದ್ದಾರೆ. ಆದರೆ ಕನ್ನಡ ಭಾಷೆಯನ್ನು ಪ್ರೀತಿಸುವವರು ಇದ್ದಾರೆ. ಬೆಳಗಾವಿಯಲ್ಲಿ ಇರುವ ಮರಾಠಿಗರಿಗೆ ದ ರಾ ಬೇಂದ್ರೆ ಆಗಿ ಅಂತಾ ಹೇಳುತ್ತೇವೆ. ಅದು ತಪ್ಪು ಅಂದರೆ ನಾವು ಅದನ್ನ ಒಪ್ಪಿಕ್ಕೊಳುವುದಿಲ್ಲ. ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದರು.
ನಾನು ಸುಪ್ರೀಂ ಕೋರ್ಟಗೆ ಹೋಗುತ್ತೇನೆ ಅಂತ ಯಾವನೋ ಮರಾಠಿಯವನು ಹೇಳುತ್ತಿದ್ದಾನೆ. ಹೋಗರಪಾ ನಾವು ಬೇಡಾ ಅಂದಿದ್ದೇವಾ? ಸುಪ್ರೀಂ ಕೋರ್ಟ್​​ಗಾದರೂ ಹೋಗಿ ಅವರ ಅಪ್ಪನ ಕೋರ್ಟ್​​ಗಾದರೂ ಹೋಗಿ. ಇಲ್ಲಿರುವ ಎಂಇಎಸ್​ನವರಿಗೆ ಬೆಳಗಾವಿ ಕಾರ್ಪೋರೆಟರ್ ಆಗಲಿಕೆ ಆಗಲ್ಲ. ಗಾಂಚಾಲಿ ಬಿಡಿ ಸರಿಯಾಗಿ ಇರಿ ಎಂದು ಎಂಇಎಸ್ ನಾಯಕರಿಗೆ ತಿರುಗೇಟು ನೀಡಿದರು.
ಕರ್ನಾಟಕ ಸರಕಾರ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಸಂತೋಷ. ಆದರೆ ಬಸವಣ್ಣನವರ ವಚನ ನಿಮ್ಮ ಸಚಿವ ಸಂಪುಟದವರಿಗೆ ಅನ್ವಯಿಸುತ್ತಾ? ಕೇವಲ ಬಸವಣ್ಣನವರ ಪೋಟೋ ಹಾಕಿದರೆ ಸಾಕಾ? ಅವರ ಸಿದ್ಧಾಂತಾ ಬೇಡವೇ ಸಿದ್ದರಾಮಯ್ಯ ಅವರೇ ಎಂದು ಕೇಳಿದರು.

ರಾಜ್ಯದಲ್ಲಿ ಒಬ್ಬ ಅಧಿಕಾರಿಯನ್ನ ನೇಮಕ ಮಾಡಬೇಕಾದರೆ ಲಂಚ ತಗೊಂಡು ನೇಮಕ ಮಾಡತ್ತೀರಿ. ಲಂಚ ಕೊಟ್ಟು ನೇಮಕವಾದ ವ್ಯಕ್ತಿ ಲಂಚ ಹೊಡೆಯಲು ಶುರು ಮಾಡುತ್ತಾನೆ. ಅಧಿಕಾರಿಗಳು ಬಂಡವಾಳ ಹೂಡತ್ತಾನೆ, ಲಂಚ ತಿನ್ನುತ್ತಾನೆ ಎಂದು ವಾಗ್ದಾಳಿ ನಡೆಸಿದ ನಾರಾಯಣಗೌಡ, ಕನ್ನಡ ನಾಡಿಗಾಗಿ ಹೋರಾಟ ಮಾಡುವವರ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲಿಸುತ್ತೀರಿ. ನಾಚಿಕೆ ಆಗಬೇಕು ನಿಮಗೆ ಎಂದು ಛೀಮಾರಿ ಹಾಕಿದರು.
ಒಬ್ಬ ಪುಣ್ಯಾತ್ಮ ಮೂರು ವರ್ಷ ಹೋರಾಟ ಮಾಡಬೇಡಿ ಅಂತಾ ನನಗೆ ಹೇಳಿದ್ದ. ಹೋರಾಟ ಮಾಡಬೇಡಿ ಅಂದಿದ್ದಕ್ಕೆ ನಾನು ಹೋರಾಟ ಮಾಡಿದ್ದೇನೆ. ಕಾವೇರಿಗಾಗಿ ಹೋರಾಟ ಮಾಡಿದೆ ಅದಕ್ಕೂ ಬಂಧಿಸಿದರು.

ಬೆಂಗಳೂರಿನಲ್ಲಿ ತಮಿಳುನಾಡಿನವರು ಮೂರ್ತಿ ಸ್ಥಾಪನೆ ವಿಚಾರವಾಗಿ ಅದಕ್ಕೂ ಹೋರಾಟ ಮಾಡಿದೆ, ಅವಾಗಲೂ ಬಂಧಿಸಿದರು. ಹೋರಾಟ ವಿಚಾರದಲ್ಲಿ ನಾನು ಯಾರಿಗೂ ಹೊಂದಾಣಿಕೆ ಆಗಲ್ಲ. ಕನ್ನಡದ ಸುದ್ದಿಗೆ ಬಂದರೆ ಸಿದ್ದರಾಮಯ್ಯ ಅವರೇ ಮಾನ ಉಳಿಸಾಂಗಿಲ್ಲಾ ಎಂದು ಸಾರಿ ಸಾರಿ ಹೇಳುವುದಕ್ಕೆ ಬರುವುದು ರಕ್ಷಣಾ ವೇದಿಕೆಗೆ ಮಾತ್ರ ಎಂದರು.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಸುರೇಶ ಗವಣ್ಣವರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ