Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಾರ್ಡ್ ಸಮಿತಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನ

 

ಬೆಳಗಾವಿ :
ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರದೇಶ ಸಭಾ ಮತ್ತು ವಾರ್ಡ್ ಸಮಿತಿಗಳನ್ನು ರಚಿಸುವ ಸಂಬಂಧ ರೂಪಿಸಲಾಗಿರುವ ಅಧಿನಿಯಮದನ್ವಯ ಹಾಗೂ ಕರ್ನಾಟಕ ಪೌರ ನಿಗಮಗಳ ಅಧಿನಿಯಮ ೧೯೭೬ರ ಕಲಂ ೧೩ ರನ್ವಯ ಷರತ್ತುಗಳನ್ನೊಳಗೊಂಡು ಪ್ರತಿಯೊಂದು ವಾರ್ಡ್ಗಳಿಗೆ (ಒಟ್ಟು ೫೮ ವಾರ್ಡ್ಗಳಿಗೆ) ವಾರ್ಡ್ ಸಮಿತಿ ರಚಿಸುವ ಕುರಿತು ಆಸಕ್ತ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ
ಆಯಾ ಸಂಬಂಧಿಸಿದ ವಾರ್ಡಿನ ನಗರ ಸೇವಕರು ಸದರಿ ವಾರ್ಡ್ ಕಮೀಟಿಯ ಅಧ್ಯಕ್ಷರಾಗಿರುತ್ತಾರೆ, ಇತರ ಹತ್ತು ಸದಸ್ಯರು ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶಿತರಾಗಿರತಕ್ಕದ್ದು. ಅವರ ಪೈಕಿ,
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಸದಸ್ಯರು, ಮೂರು ಜನ ಮಹಿಳಾ ಸದಸ್ಯರು, ಷರತ್ತಿಗೊಳಪಟ್ಟು ಆಯಾ ವಾರ್ಡಿನ ರಹವಾಸಿ ಸಂಘಕ್ಕೆ ಸಂಬಂಧಿಸಿದ ಇಬ್ಬರು ಸದಸ್ಯರು, ಸದರಿ ರಹಿವಾಸಿ ಸಂಘದ ಕಾರ್ಯಾಲಯವು ವಾರ್ಡಿನ ವ್ಯಾಪ್ತಿಯಲ್ಲಿರಬೇಕು, ಅದು ಬಹುತೇಕ ನಿವಾಸಿಗಳು ಅಥವಾ ಪೌರಸಂಬAಧಿ ಗುಂಪು ಅಥವಾ ವಾಣಿಜ್ಯ ಗುಂಪು ಅಥವಾ ಕೈಗಾರಿಕಾ ಗುಂಪುಗಳನ್ನು ಪ್ರತಿನಿಧಿಸುತ್ತಿರತಕ್ಕದ್ದು, ಅದು ಕನಿಷ್ಠ ಮೂರು ವರ್ಷ ಕಾಲ ತನ್ನ ಕಾರ್ಯಚಟುವಟಿಕೆಯಲ್ಲಿ ನಿರತವಾಗಿರತಕ್ಕದ್ದು
ಅದು ಯಾವುದೇ ಹೆಸರಿನಿಂದ ನೋಂದಾಯಿಸಲ್ಪಟ್ಟಿದ್ದು, ಧರ್ಮದರ್ಶಿತ್ವದ ಮಟ್ಟದಲ್ಲಿ ಕಾರ್ಯ ನಿರ್ವಹಿಸುವಂತಹ ವ್ಯಕ್ತಿಗಳನ್ನು ಒಳಗೊಂಡಿರತಕ್ಕದ್ದು.
ಮಹಾನಗರ ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಲು ಅನರ್ಹನಾಗಿರತಕ್ಕ ವ್ಯಕ್ತಿಯು ವಾರ್ಡ ಸಮಿತಿಯ ಸದಸ್ಯನಾಗಿ ನಾಮನಿರ್ದೇಶಿತನಾಗತಕ್ಕದ್ದಲ್ಲ (ಮೂರು ಸದಸ್ಯರು),ಅರ್ಜಿ ನಮೂನೆಯನ್ನು ಮಹಾನಗರ ಪಾಲಿಕೆಯ ಪರಿಷತ್ ಶಾಖೆಯಿಂದ ಕಚೇರಿ ಸಮಯದಲ್ಲಿ ಪಡೆಯತಕ್ಕದ್ದು ಅಥವಾ ಪಾಲಿಕೆಯ ವೆಬ್‌ಸೈಟ್ ದಲ್ಲಿ ಇತ್ತೀಚಿನ ಸುದ್ದಿಗಳು ಕಾಲಂನಲ್ಲಿ ಡೌನಲೋಡಮಾಡಿಕೊಳ್ಳಬಹುದಾಗಿದೆ.
ಜಾತಿ ಪ್ರಮಾಣ ಪತ್ರ (ಮೀಸಲಾತಿ ಕ್ಲೇಮ್ ಮಾಡಿದ್ದಲ್ಲಿ ತಹಶೀಲ್ದಾರರವರಿಂದ ಪಡೆದ ಪ್ರಮಾಣ ಪತ್ರ ಲಗತ್ತಿಸುವುದು),ಆರ್‌ಡಬ್ಲೂಎ/ಎನ್‌ಜಿಓ ವರ್ಗದಲ್ಲಿ ಮೀಸಲಾತಿ ಕೋರಿದ್ದಲ್ಲಿ ಅಧ್ಯಕ್ಷರು/ಸಂಘ-ಸಂಸ್ಥೆಯ ಕಾರ್ಯದರ್ಶಿಯವರಿಂದ ಶಿಫಾರಸ್ಸು ಪತ್ರ ಲಗತ್ತಿಸಬೇಕು, ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿ ಬಗ್ಗೆ ಪ್ರಶಸ್ತಿ/ಮನ್ನಣೆ ಪಡೆದಿರುವ ಕುರಿತು ಸಮರ್ಥಿಸುವಂತಹ ದಾಖಲೆಗಳು, ವರ್ಗ ಆಧಾರಿತ ದಾಖಲೆಗಳು ಆಸಕ್ತಿ/ಅನುಭವ ಹೊಂದಿದ ಕ್ಷೇತ್ರಗಳಿಂದ ಪ್ರಮಾಣ ಪತ್ರ ಆ. ೨೯ ೨೦೨೩ ರೊಳಗಾಗಿ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿರುವ ಪರಿಷತ್ ಶಾಖೆಯಲ್ಲಿ ಸಲ್ಲಿಸಬಹುದಾಗಿದೆ, ವಾರ್ಡ್ ಸಮಿತಿ ಸದಸ್ಯನಾಗಿ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ವಾರ್ಡ್ ವ್ಯಾಪ್ತಿಯಲ್ಲಿ ಮತದಾರನಾಗಿ ನೋಂದಾಯಿತನಾಗಿರಬೇಕು, ಚುನಾವಣಾ ಗುರುತಿನ ಚೀಟಿಯ ಪ್ರತಿ ಲಗತ್ತಿಸಬೇಕು,ಆಧಾರ್ ಕಾರ್ಡ್ನ ನಕಲು ಪ್ರತಿ ಲಗತ್ತಿಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ