Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇಂಗ್ಲೆಂಡ್ ಎದುರು ಗೆದ್ದು ಬೀಗಿದ ಭಾರತ

ಲಂಡನ್‌: ಆತಿಥೇಯ ಇಂಗ್ಲೆಂಡ್‌ ವಿರುದ್ಧದ 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ, ಕೈಜಾರಿದ್ದ ಗೆಲುವನ್ನು ಕೊನೇ ಕ್ಷಣದಲ್ಲಿ ಬಾಚಿಕೊಂಡಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–2 ಅಂತರದ ಸಮಬಲ ಸಾಧಿಸಿತು.

ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ನೀಡಿದ್ದ 374 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆಂಗ್ಲರ ಪಡೆ, 367 ರನ್‌ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಇದರೊಂದಿಗೆ, ಭಾರತ 6 ರನ್‌ ಅಂತರದ ಜಯ ಸಾಧಿಸಿತು.

ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್‌, 106 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ 'ಟೆಸ್ಟ್‌ ಪರಿಣತ' ಬ್ಯಾಟರ್‌ಗಳಾದ ಜೋ ರೂಟ್‌ (105 ರನ್‌) ಮತ್ತು ಹ್ಯಾರಿ ಬ್ರೂಕ್‌ (111 ರನ್‌), ಟೀಂ ಇಂಡಿಯಾವನ್ನು ಅಕ್ಷರಶಃ ಕಾಡಿದರು. 4ನೇ ವಿಕೆಟ್‌ ಪಾಲುದಾರಿಕೆಯಲ್ಲಿ 195 ರನ್‌ ಕೂಡಿಸಿದ ಈ ಇಬ್ಬರೂ, ಪ್ರವಾಸಿ ಪಡೆಗೆ ಸೋಲಿನ ಭೀತಿ ಮೂಡಿಸಿದ್ದರು. ಶುಭಮನ್‌ ಗಿಲ್‌ ಪಡೆ ನೀಡಿದ ಜೀವದಾನಗಳೂ ಅವರಿಗೆ ನೆರವಾದವು.

ಆದರೂ ಛಲ ಬಿಡದ ಟೀಂ ಇಂಡಿಯಾ ಬೌಲರ್‌ಗಳು, ಶತಕ ಗಳಿಸಿದ್ದ ಇವರಿಬ್ಬರು ಹಾಗೂ ಜೇಕಬ್‌ ಬೆಥೆಲ್‌ (5 ರನ್‌) ಅವರಿಗೆ ನಾಲ್ಕನೇ ದಿನದಾಟದ ಕೊನೆಯಲ್ಲಿ ಪೆವಿಲಿಯನ್‌ ದಾರಿ ತೋರಿದರು. ಆ ಮೂಲಕ, ಪಂದ್ಯವನ್ನು ತಮ್ಮತ್ತ ಎಳೆದುಕೊಂಡರು.

ಮಂದ ಬೆಳಕಿನ ಕಾರಣ ದಿನದಾಟ ಬೇಗನೆ ನಿಂತಾಗ ಆಂಗ್ಲರ ತಂಡದ ಮೊತ್ತ 6 ವಿಕೆಟ್‌ಗೆ 339 ರನ್‌ ಆಗಿತ್ತು. ಹೀಗಾಗಿ, ಪಂದ್ಯ ಗೆಲ್ಲಲು ಅಂತಿಮ ದಿನ ಆತಿಥೇಯರಿಗೆ 35 ರನ್‌ ಮತ್ತು ಭಾರತಕ್ಕೆ 4 ವಿಕೆಟ್‌ ಅವಶ್ಯಕತೆ ಇತ್ತು.

ಈ ಹೋರಾಟದಲ್ಲಿ ಭಾರತ ಮೇಲುಗೈ ಸಾಧಿಸಿತು.

ದಿನದಾಟದ ಆರಂಭದಲ್ಲೇ ಜೆಮೀ ಸ್ಮಿತ್‌ ಹಾಗೂ ಜೆಮೀ ಓವರ್ಟನ್ ಅವರನ್ನು ಸಿರಾಜ್‌ ಪೆವಿಲಿಯನ್‌ಗೆ ಅಟ್ಟಿದರು. ಜೋಶ್‌ ಟಂಗ್‌ ಅವರನ್ನು ಪ್ರಸಿದ್ಧ ಕೃಷ್ಣ ಕ್ಲೀನ್‌ ಬೌಲ್ಡ್‌ ಮಾಡಿದರು. ಹೀಗಾಗಿ, ಗಾಯಾಳು ಕ್ರಿಸ್‌ ವೋಕ್ಸ್‌ ಕ್ರೀಸ್‌ಗಿಳಿಯಬೇಕಾಯಿತು. ಅವರು 'ಒಂಟಿ' ಕೈಯಲ್ಲಿ ಬ್ಯಾಟ್‌ ಹಿಡಿದು ಒಂದು ತುದಿಯಲ್ಲಿ ನಿಂತರೂ ಬೇಕಿದ್ದ ಎಲ್ಲ ರನ್‌ಗಳನ್ನು ಗಳಿಸಲು ಗಸ್‌ ಅಟ್ಕಿನ್‌ಸನ್‌ ಅವರಿಗೆ ಸಾಧ್ಯವಾಗಲಿಲ್ಲ.

ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್‌ 5 ವಿಕೆಟ್‌ ಕಬಳಿಸಿದರೆ, ಪ್ರಸಿದ್ಧ ಕೃಷ್ಣ ನಾಲ್ಕು ಮತ್ತು ಆಕಾಶ್ ದೀಪ್‌ ಒಂದು ವಿಕೆಟ್‌ ಪಡೆದರು.

 

ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ 2025
ಸರಣಿಯೊಂದರಲ್ಲಿ ಒಟ್ಟು ರನ್‌ಗಳು (7187)
ಸರಣಿಯೊಂದರಲ್ಲಿ ಜಂಟಿಯಾಗಿ ಅತಿ ಹೆಚ್ಚು 300+ ತಂಡಗಳನ್ನು ಗಳಿಸಿದ ಆಟಗಾರ (14)

ಸರಣಿಯೊಂದರಲ್ಲಿ 400+ ತಂಡಗಳನ್ನು ಗಳಿಸಿದ ಆಟಗಾರ (9)

ಜಂಟಿಯಾಗಿ ಅತಿ ಹೆಚ್ಚು ವೈಯಕ್ತಿಕ 50+ ತಂಡಗಳನ್ನು ಗಳಿಸಿದ ಆಟಗಾರ (50)

ಜಂಟಿಯಾಗಿ ಅತಿ ಹೆಚ್ಚು ವೈಯಕ್ತಿಕ ಶತಕಗಳನ್ನು ಗಳಿಸಿದ ಆಟಗಾರ (21)

ಜಂಟಿಯಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರ (19)

ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಅತಿ ಹೆಚ್ಚು ವಿಕೆಟ್‌ಗಳು
23 - ಜಸ್ಪ್ರಿತ್ ಬುಮ್ರಾ, 2021-22
23 - ಮೊಹಮ್ಮದ್ ಸಿರಾಜ್, 2025*
19 - ಭುವನೇಶ್ವರ್ ಕುಮಾರ್, 2014
ಇಂಗ್ಲೆಂಡ್‌ಗೆ ಅತಿ ಕಡಿಮೆ ಸೋಲಿನ ಅಂತರ (ರನ್)
1 vs NZ, ವೆಲ್ಲಿಂಗ್ಟನ್, 2023
3 vs AUS, ಮ್ಯಾಂಚೆಸ್ಟರ್, 1902
6 vs AUS, ಸಿಡ್ನಿ, 1885
6 vs IND, ದಿ ಓವಲ್, 2025*
ಇದು ಮೊದಲ ಬಾರಿಗೆ ಭಾರತವು ತವರಿನಿಂದ ಹೊರಗೆ ನಡೆದ ಟೆಸ್ಟ್ ಸರಣಿಯ 5 ನೇ ಪಂದ್ಯವನ್ನು ಗೆದ್ದಿದೆ.
ಭಾರತಕ್ಕೆ ಅತಿ ಕಡಿಮೆ ಗೆಲುವಿನ ಅಂತರ (ರನ್ಗಳು)
6 vs ENG, ದಿ ಓವಲ್, 2025*
13 vs AUS, ವಾಂಖೆಡೆ, 2004
28 vs ENG, ಕೋಲ್ಕತ್ತಾ, 1972
31 vs AUS ಅಡಿಲೇಡ್, 2018
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ