Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪ್ರಧಾನಿಯವರ ಆತ್ಮ ನಿರ್ಭರ ಯೋಜನೆಯಿಂದ ಕುಂಬಾರಿಗೆ ಹೆಚ್ಚಿದ ಬೇಡಿಕೆ

ಬೆಳಗಾವಿ : ಖಾನಾಪುರ ತಾಲೂಕಿನಲ್ಲಿರುವ ಕುಂಬಾರರು ಕುಶಲಕರ್ಮಿಗಳು. ಇಲ್ಲಿಯ ಕುಂಬಾರರು ಉತ್ಪಾದಿಸುವ ಮಣ್ಣಿನ ಉತ್ಪನ್ನಗಳು ಮಹಾನಗರಗಳಿಗೆ ಸರಬರಾಜಾಗುತ್ತಿವೆ. ಪರಿಣಾಮ ಸ್ಥಳೀಯ ವೃತ್ತಿಪರ ಕುಂಬಾರರು ವಾರ್ಷಿಕ ಹತ್ತಾರು ಕೋಟಿ ವಹಿವಾಟು ನಡೆಸುವ ಮೂಲಕ ಸ್ಥಳೀಯವಾಗಿ ಉದ್ಯೋಗ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ ಎಂದು ಶಾಸಕ ವಿಠ್ಠಲ ಹಲಗೇಕರ ಸಂತಸ ವ್ಯಕ್ತಪಡಿಸಿದರು.

ಖಾನಾಪುರ ಕುಂಬಾರಿಕೆ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಜರುಗಿದ ತರಬೇತಿ ಪಡೆದ ಕುಂಬಾರರಿಗೆ ವಿದ್ಯುತ್ ಚಾಲಿತ ಕುಂಬಾರಿಕೆ ಯಂತ್ರಗಳ ವಿತರಣೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ಸ್ಥಳೀಯ ಕುಂಬಾರಿಕೆ ಸಂಸ್ಥೆಯಿಂದ ತರಬೇತಿ ಪಡೆದ ಫಲಾನುಭವಿಗಳಿಗೆ 360 ವಿದ್ಯುತ್ ಚಾಲಿತ ಕುಂಬಾರಿಕಾ ಯಂತ್ರಗಳನ್ನು ವಿತರಿಸಲಾಗುತ್ತಿದೆ, ಇದರ ಪೈಕಿ ಅರ್ಧದಷ್ಟು ಫಲಾನುಭವಿಗಳು
ಮಹಿಳೆಯರೇ ಆಗಿರುವುದು ವಿಶೇಷವಾಗಿದೆ ಎಂದರು.

ನಿಗಮದ ಅಧ್ಯಕ್ಷ ಮನೋಜ್‌ಕುಮಾರ ಮಾತನಾಡಿ, ಕೇಂದ್ರ ಸರ್ಕಾರದ ಅಧೀನ ಸಂಸ್ಥೆ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದಿಂದ (ಕೆವಿಎಸಿ) ವಾರ್ಷಿಕ 10 ಲಕ್ಷ ಜನರಿಗೆ ಉದ್ಯೋಗ ಲಭಿಸುತ್ತಿದೆ. ನಿಗಮದಲ್ಲಿ ಲಕ್ಷ ಉದ್ಯೋಗಿಗಳಿದ್ದು, ಅವರಲ್ಲಿ ಶೇ.80ರಷ್ಟು ಮಹಿಳೆಯರಿದ್ದಾರೆ. ಕುಂಬಾರಿಕೆಯನ್ನು ಮುಖ್ಯ
ಉದ್ಯೋಗವಾಗಿ ಕೈಗೊಂಡವರಿಗೆ ಕೆವಿಐಸಿಯಿಂದ ಆರ್ಥಿಕ ನೆರವು ಮತ್ತು ಸುಧಾರಿತ ಯಂತ್ರೋಪಕರಣ ಒದಗಿಸಲಾಗುತ್ತದೆ. ಇದುವರೆಗೂ ದೇಶಾದ್ಯಂತ 30 ಸಾವಿರಕ್ಕೂ ಅಧಿಕ ವಿದ್ಯುತ್ ಚಾಲಿತ ಕುಂಬಾರಿಕೆ ಯಂತ್ರ ವಿತರಿಸಲಾಗಿದೆ. ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದ ಕರೆಯಿಂದಾಗಿ ಇಂದು ಕುಂಬಾರರ ಉತ್ಪನ್ನಗಳು ಮಹಾನಗರಗಳಲ್ಲಿ ಬಹುಬೇಡಿಕೆ ಪಡೆದಿವೆ. ಫೈವ್ ಸ್ಟಾರ್ ಹೋಟೆಲ್ ಕುಂಬಾರರ ಉತ್ಪನ್ನಗಳು ಅಲಂಕರಿಸುತ್ತಿವೆ. ನಿರುದ್ಯೋಗಿಗಳು ಕುಂಬಾರಿಕೆ ಹಾಗೂ ಇತರೆ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಸಾವಿರ ಕೋಟಿ ಸಾಲ ಸೌಲಭ್ಯ ಒದಗಿಸಿ ₹25 ಸಾವಿರ ಕೋಟಿ ಸಹಾಯಧನ
ನೀಡಲಾಗಿದೆ. ಗ್ರಾಮೀಣ ಭಾಗದ ಯುವಕರು, ಮಹಿಳೆಯರು ಕೆವಿಐಸಿ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, ಕೆವಿಐಸಿ ದಕ್ಷಿಣ ಮಧ್ಯ ಭಾರತದ ಸಿಇಒ ಮದನಕುಮಾರ ರೆಡ್ಡಿ, ಖಾದಿ ಬೋರ್ಡ್ ಅಭಿವೃದ್ಧಿ ಅಧಿಕಾರಿ ಸಾವಿತ್ರಮ್ಮ ದಳವಾಯಿ, ಡಿಬಿಸಿ ಹುಬ್ಬಳ್ಳಿ ವಿಭಾಗ ದ ಪ್ರಮುಖ ಈ ಮೋಹನ ರೆಡ್ಡಿ, ಪ್ರಿಯಾ ಪುರಾಣಿಕ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಫಲಾನುಭವಿಗಳು, ಕುಂಬಾರ ಸಮಾಜದ ಮುಖಂಡರು ಇದ್ದರು. ಸಿವಿಪಿಐಪ್ರಾಚಾರ್ಯ ವಿಜಯೇಂದ್ರ ಸಿಂಗ್ ಸ್ವಾಗತಿಸಿದರು. ಎಸ್.ಎನ್ ದೇಶಪಾಂಡೆ ವಂದಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ