Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಒಂದು ತಿಂಗಳಲ್ಲಿ ಅತಿಥಿ ಗೃಹ ಉದ್ಘಾಟನೆ – ಎಪಿಎಂಸಿ ಅಧಿಕಾರಿಗಳ ಭರವಸೆ

[contact-form][contact-field label="Name" type="name" required="true" /][contact-field label="Email" type="email" required="true" /][contact-field label="Website" type="url" /][contact-field label="Message" type="textarea" /][/contact-form]

 

ಮೂಡಲಗಿ – ಹಾಳು ಬಿದ್ದಂತಾಗಿರುವ ಅತಿಥಿ ಗೃಹವನ್ನು ಇನ್ನೊಂದು ತಿಂಗಳಲ್ಲಿ ಸ್ವಚ್ಛ ಮಾಡಿ ಉದ್ಘಾಟನೆ ಮಾಡಿ ಉಪಯೋಗಕ್ಕೆ ಬರುವಂತೆ ಮಾಡಲಾಗುವುದು ಎಂದು ಗೋಕಾಕದ ಎಪಿಎಮ್ ಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.

ಮೂಡಲಗಿ ಎಪಿಎಮ್ ಸಿ ಆವರಣದಲ್ಲಿರುವ ಅತಿಥಿ ಗೃಹ ನಿರ್ಮಾಣವಾಗಿ ಮೂರು ವರ್ಷವಾದರೂ ಉದ್ಘಾಟನೆಯಾಗದೇ ಉಳಿದು ಅನೈತಿಕ ಚಟುವಟಿಕೆಗಳ ತಾಣವಾಗಿ ಉಳಿದಿದೆ ಎಂಬ ಬಗ್ಗೆ ಜನಜೀವಾಳ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸುದ್ದಿಯ ಹಿನ್ನೆಲೆಯಲ್ಲಿ ರವಿವಾರ ಅತಿಥಿ ಗೃಹದ ಪುನರುತ್ಥಾನ ಹಾಗೂ ಉದ್ಘಾಟನೆಗೆ ಅವರು ತೆರಳಿದ್ದ ಸಂದರ್ಭದಲ್ಲಿ ಮಾತನಾಡಿದರು.

ಮುಖಂಡ ಲಕ್ಕಣ್ಣ ಸವಸುದ್ದಿ ಹಾಗೂ ಸಾಮಾಜಿಕ ಕಾರ್ಯಕರ್ತ ಗುರು ಗಂಗಣ್ಣವರ ತಂಡದವರಿಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆಂಬುದಾಗಿ ಅವರು ತಿಳಿಸಿದರು.

ಇದರ ಜೊತೆಗೆ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ದನಗಳ ಪೇಟೆಯನ್ನೂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಪಿಎಂಸಿ ಅಧಿಕಾರಿಗಳು ಕೆಲಸ ಮಾಡಬೇಕು. ಸ್ಥಳೀಯ ಶಾಸಕರೂ ಕೂಡ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು ಎಂದ ಅವರು, ಎಪಿಎಂಸಿಗೆ ಬರುವ, ಹೋಗುವ ವಾಹನಗಳಿಗೆ ತಲಾ ನೂರು ರೂಪಾಯಿ ವಸೂಲು ಮಾಡಲಾಗುತ್ತಿದೆ ಈ ಬಗ್ಗೆ ಹೋರಾಟ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದರು.

ಸುಮಾರು ೪೪ ಲಕ್ಷ ರೂ. ಗಳಲ್ಲಿ ಈ ಅತಿಥಿ ಗೃಹ ಕಟ್ಟಲಾಗಿದೆ. ಪೀಠೋಪಕರಣಕ್ಕಾಗಿ ಬಂದಿರುವ ೧೦ ಲಕ್ಷ ರೂ. ಗಳನ್ನು ಎಪಿಎಂಸಿ ಅಧಿಕಾರಿಗಳೇ ಇಟ್ಟುಕೊಂಡಿದ್ದಾರೆ. ಅದನ್ನೂ ಕೂಡ ಕಟ್ಟಡದ ಅಭಿವೃದ್ಧಿ ಗೆ ಬಳಸಿಕೊಳ್ಳಬೇಕು. ಇಂದು ಅನೌಪಚಾರಿಕವಾಗಿ ಈ ಅತಿಥಿ ಗೃಹವನ್ನು ಉದ್ಘಾಟನೆ ಗೊಳಿಸಲು ನಾವು ಬಂದಿದ್ದೆವು. ಆದರೆ ಎಪಿಎಂಸಿ ಅಧಿಕಾರಿಗಳು ಇದೇ ದಿ. ೨೪ ರಂದು ಸಭೆ ಕರೆದು ಮಾತನಾಡಿ ಒಂದು ತಿಂಗಳಲ್ಲಿ ಅತಿಥಿ ಗೃಹ ಪುನರುತ್ಥಾನ ಮಾಡಿ ಉದ್ಘಾಟನೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರಿಂದ ನಮ್ಮ ಕಾರ್ಯಕ್ರಮ ಹಿಂತೆಗೆದುಕೊಂಡಿದ್ದೇವೆ ಎಂಬುದಾಗಿ ಲಕ್ಕಣ್ಣ ಸವಸುದ್ದಿ ಹೇಳಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಗುರುನಾಥ ಗಂಗನ್ನವರ, ಸುರೇಶ ನಾಯ್ಕ, ಸುಭಾಸ ಲೋಕನ್ನವರ, ಮಹಾದೇವ ಬಂಗೆನ್ನವರ, ಸದಾಶಿವ ನಾವಿ, ಕಲೋಳಪ್ಪಾ ಗಸ್ತಿ, ಹಣಮಂತ ನಾವಿ, ಶಂಕರ ಸಣ್ಣಕ್ಕಿ, ಶಿವಬಸು ರಡರಟ್ಟಿ, ಭೀಮಶೆಪ್ಪಾ ಯಲ್ಲಟ್ಟಿ, ಬಾಲಪ್ಪಾ ರಾಜಾಪೂರ, ಹಣಮಂತ ಮುಗಳಖೋಡ, ಅನೇಕರು ಇದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ