Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೆ ಟ್ವಿಸ್ಟ್: ಅನನ್ಯ ಭಟ್ ಕತೆ ಸುಳ್ಳು, ಫೋಟೋ ನಕಲಿ ಎಂದು ಬಾಯ್ಬಿಟ್ಟ ಸುಜಾತ ಭಟ್

ಬೆಂಗಳೂರು: ಧರ್ಮಸ್ಥಳದಲ್ಲಿ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂಬ ಕತೆ ಸುಳ್ಳು. ಕೆಲವರ ಒತ್ತಡದಿಂದ ಈ ಕತೆ ಕಟ್ಟಿ ಹೇಳಿದ್ದೇನೆ. ಆಸ್ತಿ ವಿಚಾರಕ್ಕಾಗಿ ಈ ಸುಳ್ಳು ಹೇಳಿದೆ ಎಂದು ಸುಜಾತ್ ಭಟ್ ಖಾಸಗಿ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಮಗಳು ಅನ್ನೋ ಕತೆ ಸತ್ಯವೇ ಅಥವಾ ಸುಳ್ಳೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, ಅನನ್ಯಾ ಭಟ್ ಅನ್ನೋ ಮಗಳು ಸುಳ್ಳು ಕತೆ, ಗಿರೀಶ್ ಮಟ್ಟೆಣ್ಣನವ‌ರ್, ಜಯಂತ್ ಟಿ ಹೇಳಿದ ಹಾಗೇ ನಾನು ಹೇಳಿದೆ. ಆಸ್ತಿ ವಿಚಾರವಾಗಿ ಈ ಕತೆ ಹೇಳಿಕೊಟ್ಟಿದ್ದರು. ಹೀಗಾಗಿ ಈ ಕತೆ ಹೇಳಿದೆ. ನನಗೆ ದುಡ್ಡಿಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೂ ಯಾರೂ ಆಫರ್ ಕೊಟ್ಟಿಲ್ಲ. ಆದರೆ ನನ್ನ ತಾತನ ಆಸ್ತಿಯನ್ನು ಧರ್ಮಸ್ಥಳಕ್ಕೆ ದಾನವಾಗಿ ಹೇಗೆ ಕೊಟ್ಟರು ಅನ್ನೋದು ನನ್ನ ಪ್ರಶ್ನೆ. ಅದು ನನಗೂ ಸಿಗಬೇಕಿತ್ತು. ಆದರೆ ನನಗೆ ಪಾಲು ಸಿಗಲಿಲ್ಲ ಎಂದು ಸುಜಾತ್ ಭಟ್ ನೋವು ತೋಡಿಕೊಂಡಿದ್ದಾರೆ.

ಮಗಳು ಫೋಟೋ ಬಿಡುಗಡೆ ಮಾಡಿದ್ದು ಸುಳ್ಳು, ಅದು ಖಂಡಿತ ಸುಳ್ಳು ಫೋಟೋ ಎಂದು ಸುಜಾತಾ ಭಟ್ ಹೇಳಿದ್ದಾರೆ. ಇದೇ ವೇಳೆ ತಾನು ಧರ್ಮಸ್ಥಳದ ಜನರ ನಂಬಿಕೆ, ಜನರ ಭಾವನೆ ಜೊತೆ ಆಟವಾಡಿಲ್ಲ. ಆದರೆ ನನ್ನನ್ನು ಜನರ ಭಾವನೆ ಜೊತೆ ಆಟವಾಡುವಂತೆ ಕೆಲವರು ಪ್ರಚೋದಿಸಿದರು ಎಂದು ಸುಜಾತಾ ಭಟ್ ಹೇಳಿದ್ದಾರೆ.

ನಾನು ಧರ್ಮಸ್ಥಳ ದೇವಸ್ಥಾನಕ್ಕೆ ಧಕ್ಕೆ ತಂದಿಲ್ಲ. ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಗೆ ಧಕ್ಕೆ ತಂದಿಲ್ಲ. ಧರ್ಮಸ್ಥಳ ಗ್ರಾಮದಲ್ಲಿ ಎಂದು ಹೇಳಿದ್ದೇನೆ ಎಂದು ಸುಜಾತ್ ಭಟ್ ತಮ್ಮ ಸುಳ್ಳಿನ ಅಸಲಿ ಕತೆಯನ್ನು ಬಹಿರಂಗಪಡಿಸಿದ್ದು, ದೇಶದ ಜನರ ಹತ್ತಿರ ಮತ್ತು ಧರ್ಮಸ್ಥಳ ದವರ ಹತ್ತಿರ ಕ್ಷಮೆ ಯಾಚಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ