Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಏಕಮುಖ ರಸ್ತೆ: ವಾಹನ ಸವಾರರಿಗೆ ಮಹತ್ವದ ಸೂಚನೆ

 

ಬೆಳಗಾವಿ :
ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುವಂತಹ ಪಾದಚಾರಿ ರಸ್ತೆಗಳಲ್ಲಿ ಕಾನೂನು ಬಾಹಿರವಾಗಿ ವಾಹನ ಚಾಲನೆ, ನಿಲುಗಡೆ ಮಾಡುವ ವಾಹನಗಳ ವಿರುದ್ದ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಕ್ರಮಗಳನ್ನು ಕೈಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ನಗರ ಪ್ರದೇಶದಲ್ಲಿರುವ ಎಲ್ಲ ಪಾದಚಾರಿ (ಫುಟ್ಪಾತ್) ಮಾರ್ಗಗಳನ್ನು ಮುಕ್ತವಾಗಿರಿಸಿ, ಜಾಗೃತರಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ ಕೋರಲಾಗಿದೆ.

ಒಂದು ವೇಳೆ ನಿಯಮ ಉಲ್ಲಂಘಿಸಿದಲ್ಲಿ ತಪ್ಪಿತಸ್ಥರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ-1963 ರ ಕಲಂ, 92(ಬಿ); ಯಾವುದೇ ಪಾದಚಾರಿ ಮಾರ್ಗದಲ್ಲಿ ವಾಹನವನ್ನು ಬಿಡುವುದು ಅಥವಾ ಓಡಿಸುವುದು, ಯಾವುದೇ ವಾಹನವನ್ನು ಅಲ್ಲಿಗೆ ಎಳೆಯುವುದು ಅಥವಾ ತಳ್ಳುವುದು. ಭಾರತೀಯ ದಂಡ ಸಂಹಿತೆ ಕಲಂ:283 ರಡಿಯಲ್ಲಿ ಯಾವನೇ ವ್ಯಕ್ತಿ ಸಾರ್ವಜನಿಕ ಮಾರ್ಗದಲ್ಲಿ ಅಥವಾ ಸ್ಥಳದಲ್ಲಿ ಯಾವುದೇ ಸಾರ್ವಜನಿಗೆ ವ್ಯಕ್ತಿಗೆ ಅಪಾಯದ ಅಡಚಣೆ ಉಂಟು ಮಾಡುವುದು. ಪಾದಚಾರ ರಸ್ತೆಗಳಲ್ಲಿ ಕಾನೂನು ಬಾಹಿರವಾಗಿ ವಾಹನ ಚಾಲನೆ, ನಿಲುಗಡೆ ಮಾಡಿದಲ್ಲಿ,
ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾರಣ ಪಾದಚಾರಗಳ ಹಿತದೃಷ್ಟಿಯಿಂದ ಯಾವುದೇ ವಾಹನ ಚಾಲಕರು/ ವ್ಯಾಪಾರಸ್ಥರು ಪಾದಚಾರಿ ಮಾರ್ಗಗಳಲ್ಲಿ ಅಡಚಣೆ ಉಂಟು ಮಾಡದಂತೆ ಎಚ್ಚರವಹಿಸಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ ಕೋರಲಾಗಿದೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂದಭರ್ನುಸಾರವಾಗಿ ಕಾಲಕಾಲಕ್ಕೆ ಆಯ್ದ ಮಾರ್ಗದ ರಸ್ತೆಗಳನ್ನು ಏಕಮುಖ ಸಂಚಾರ ಅಂತ ಪರಿಗಣಿಸಲಾಗಿರುತ್ತದೆ. ಸದರಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ನಗರ ಪ್ರದೇಶದಲ್ಲಿರುವ ಏಕಮುಖ ಸಂಚಾರ ಮಾರ್ಗಗಳ ಬಗ್ಗೆ ಜಾಗೃತರಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ ಕೋರಲಾಗಿದೆ.

ಏಕಮುಖ ಸಂಚಾರ ಮಾರ್ಗಗಳು
1) ಕಿರ್ಲೋಸ್ಕರ ರಸ್ತೆ : ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.
2) ಕೇಳಕರಬಾಗ ರಸ್ತೆ:ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.
3) ಅನಸೂರಕರ ಗಲ್ಲಿ ರಸ್ತೆ‌ : ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಸಂಚರಿಸುವುದು. 4) ರಾಮದೇವ ಗಲ್ಲಿ ರಸ್ತೆ : ದಕ್ಷಿಣ ದಿಂದ ಉತ್ತರ ದಿಕ್ಕೆಗೆ ಸಂಚರಿಸುವುದು. 5) ನೆಹರು ನಗರ 2ನೇ ಕ್ರಾಸ್ ಕೆಎಲ್‌ಇ ಆಸ್ಪತ್ರೆ ರಸ್ತೆಯಿಂದ ತಟ್ಟೆ ಇಡ್ಲಿ ಹೊಟೇಲ್ ಮುಖಾಂತರ ಆಜಮ್ ನಗರ ರಸ್ತೆಯನ್ನು ಪೂರ್ವ ದಿಂದ ಪಶ್ಚಿಮ ದಿಕ್ಕಿಗೆ ಸಂಚರಿಸುವುದು. 6) ನೆಹರು ನಗರ 3 ನೇ ಕ್ರಾಸ್ : ಆಜಮ್ ನಗರ ಸೇರುವ ನೆಹರು ನಗರ 3ನೇ ಕ್ರಾಸ್ ರಸ್ತೆ ಯಿಂದ ಕೆಎಲ್‌ಇ ರಸ್ತೆ ಸೇರುವ ಮಾರ್ಗ (ಮುಜಾವರ್ ಆರ್ಕೇಡ್ ಬದಿಗೆ) ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.
7) ಕಲ್ಮಠ ರೋಡ್ : ಪಶ್ಚಿಮ ದಿಂದ ಪೂರ್ವ ದಿಕ್ಕಿಗೆ ಸಂಚರಿಸುವುದು.
8) ಗಣಪತಿ ಗಲ್ಲಿ:ಉತ್ತರ ದಿಂದ ದಕ್ಷಿಣ ದಿಕ್ಕಿಗೆ ಸಂಚರಿಸುವುದು.

ಸಾರ್ವಜನಿಕರು ತಮ್ಮ ಮಕ್ಕಳನ್ನು ಶಾಲಾ ವಾಹನ/ಆಟೋರಿಕ್ಷಾಗಳಲ್ಲಿ ಕಳುಹಿಸುವಾಗ ಮಕ್ಕಳ ಹಿತದೃಷ್ಟಿಯ ಬಗ್ಗೆ ಎಚ್ಚರವಹಿಸುವುದು. ಶಾಲಾ ವಾಹನ/ ಆಟೋರಿಕ್ಷಾ ಚಾಲಕರು ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಸಾಗಿಸಬಾರದೆಂದು ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುವಂತೆ
ಬೆಳಗಾವಿ ನಗರ
ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ