Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮತ ಎಣಿಕೆ : ಸಂಚಾರ ವ್ಯವಸ್ಥೆ ಬಗ್ಗೆ ಮಹತ್ವದ ಸೂಚನೆ

ಬೆಳಗಾವಿ : ದಿನಾಂಕ: 04/06/2024 ರಂದು ಬೆಳಗಾವಿ ನಗರದ ಆರ್‌ಪಿಡಿ ಕಾಲೇಜಿನಲ್ಲಿ ಬೆಳಗಾವಿ ಲೋಕಸಭೆ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಜರುಗಲಿದೆ.

ಮತ ಎಣಿಕೆ ಕಾರ್ಯಕ್ಕೆ ಬರುವ ಅಧಿಕಾರಿ ಮತ್ತು ಸಿಬ್ಬಂದಿ, ಅಭ್ಯರ್ಥಿಗಳು, ಏಜೆಂಟರು, ವರದಿ ಮಾಡಲು ಬರುವ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ಕುರಿತು ಈ ಕೆಳಗಿನಂತೆ ವ್ಯವಸ್ಥೆ ಮಾಡಲಾಗಿದೆ.

1) ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಹಾಗೂ ಸಿಬ್ಬಂದಿ & ಮಾಧ್ಯಮ ಪ್ರತಿನಿಧಿಗಳು: ಭಾಗ್ಯ ನಗರ 2ನೇ ಕ್ರಾಸ್ ಮೂಲಕ ಲೋಕಮಾನ್ಯ ಮಲ್ಟಿಪರ್ಪೋಸ್ ಕೋ-ಆಪರೇಟಿವ್ ಸೊಸಾಯಟಿ ದಾಟಿ ಎಡತಿರುವು ಪಡೆದುಕೊಂಡು ಮಾವಿನ ತೋಟದ ಗೇಟ ಮೂಲಕ ಆರ್‌ಪಿಡಿ ಕಾಲೇಜ್ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು.

2) ಅಭ್ಯರ್ಥಿಗಳು: ಆರ್‌ಪಿಡಿ ಕಾಲೇಜ್‌ನ 1ನೇ ಗೇಟ್ ಮೂಲಕ ಪ್ರವೇಶಿಸಿ ತಮ್ಮ ವಾಹನಗಳನ್ನು ಕೆಎಲ್‌ಎಸ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು.

3) ಏಜೆಂಟರು: ತಮ್ಮ ವಾಹನಗಳನ್ನು ಗೋಮಟೇಶ್ ಹೈಸ್ಕೂಲ್, ಹಿಂದವಾಡಿ ಶಾಲಾ ಮೈದಾನದಲ್ಲ ನಿಲುಗಡೆ ಮಾಡುವುದು, ಅಲ್ಲಿಂದ ನಡೆದುಕೊಂಡು ಬರುವುದು.

4) ಸಾರ್ವಜನಿಕರು: ಮತ ಎಣಿಕೆ ದಿನದಂದು ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಕೆಳಗೆ ನಮೂದಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡುವುದು.

1. ಗೋಕಾಕ, ಅರಭಾವಿ, ಭಾಗಗಳಿಂದ ಬರುವ ಸಾರ್ವಜನಿಕರು ಲೇಲೆ ಮೈದಾನ ಹಾಗೂ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದು.

11. ಬೈಲಹೊಂಗಲ, ರಾಮದುರ್ಗ, ಸೌಂದತ್ತಿ ಯಲ್ಲಮ್ಮಗುಡ್ಡ ಭಾಗಗಳಿಂದ ಬರುವ ಸಾರ್ವಜನಿಕರು ಹಳೆ ಪಿಬಿ ರಸ್ತೆ, ನಾಥಪೈ ಸರ್ಕಲ್ ಮೂಲಕ ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಎಡಬದಿಯ ಆದರ್ಶ ನಗರ ಶಾಲೆ ಮೈದಾನ ಹಾಗೂ ಆದರ್ಶ ನಗರ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಒಂದು ಲೇನ್‌ದಲ್ಲಿ ನಿಲುಗಡೆ ಮಾಡುವುದು

III. ಬೆಳಗಾವಿ ಉತ್ತರ. ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಭಾಗಗಳಿಂದ ಬರುವ ಸಾರ್ವಜನಿಕರು 3ನೇ ರೇಲ್ವೆ ಗೇಟ ದಿಂದ ಪೀರನವಾಡಿ ವರೆಗಿನ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಒಂದು ಲೇನ್‌ದಲ್ಲಿ ನಿಲುಗಡೆ ಮಾಡುವುದು.

ಟಿಳಕವಾಡಿ ಪ್ರದೇಶದಲ್ಲಿ ರೇಲ್ವೆ ಸಂಚಾರದಿಂದಾಗಿ 1ನೇ ರೇಲ್ವೆ ಗೇಟ ಹಾಗೂ 2ನೇ ರೇಲ್ವೆ ಗೇಟ್ ಇವುಗಳನ್ನು ಮೇಲಿಂದ ಮೇಲೆ ಬಂದ ಮಾಡಲಾಗುವುದರಿಂದ ಕಾಂಗ್ರೆಸ್ ರಸ್ತೆಯಲ್ಲಿ ಆ ದಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಕಾರಣ ಸಾರ್ವಜನಿಕರು ಬದಲಿ ಮಾರ್ಗ ಬಳಸುವುದು.

5) ಡೈವರ್ಶನ್:

1) ಗೋವಾವೇಸ್.

2) ಆರ್‌ಪಿಡಿ ರಸ್ತೆ 3

) ಗುರುದೇವ

ರಾನಡೆ ರಸ್ತೆ

) 1ನೇ & 2ನೇ ರೇಲ್ವೆ

ಗೇಟ್ ರಸ್ತೆ,

5) ಅನಗೋಳ

ರಸ್ತೆ ಮತ್ತು 6

) ಭಾಗ್ಯನಗರ ರಸ್ತೆ

4

ಈ ಮೇಲಿನ ರಸ್ತೆಗಳಲ್ಲಿ ಜನದಟ್ಟನೆ ಇರುವುದರಿಂದ, ಮುಂಜಾನೆ 07.00 ಗಂಟೆಯಿಂದ ಮತ ಎಣಿಕೆ ಮುಕ್ತಾಯದವರೆಗೆ ಸಾರ್ವಜನಕರು ಈ ಕೆಳಗಿನ ರಸ್ತೆಗಳಲ್ಲಿ ಸಂಚರಿಸುವಂತೆ ಕೋರಿದೆ.

1. ಗೋವಾವೇಸ್ ಸರ್ಕಲ್ ಕಡೆಯಿಂದ ಆರ್‌ಪಿಡಿ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳ ಸಂಚರಣೆಯನ್ನು ನಿರ್ಬಂಧಿಸಿದ್ದು, ಸದರಿ ವಾಹನಗಳು ಮಹಾವೀರ ಭವನ ಹತ್ತಿರ ಎಡತಿರುವ ತೆಗೆದುಕೊಂಡು ಗುರುದೇವ ರಾನಡೆ ರಸ್ತೆ, ಭಗತ ಸಿಂಗ್ ಗಾರ್ಡನ ಪಕ್ಕದ ರಸ್ತೆಯ ಮೂಲಕ ಆದರ್ಶ ನಗರ, ವಡಗಾವಿ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಮುಂದಿನಿಂದ ಭಾಗ್ಯ ನಗರ 10ನೇ ಕ್ರಾಸ್ ಮುಖಾಂತರ ಅನಗೋಳ ಹರಿ ಮಂದಿರ ಕ್ರಾಸ್ ಸೇರಿ ಮುಂದೆ ಸಾಗುವುದು.

II.

3ನೇ ರೇಲ್ವೆ ಗೇಟ್ ಮೂಲಕ ಗೋವಾವೇಸ್ ಸರ್ಕಲ್ ಕಡೆಗೆ ಸಂಚರಿಸುವವರು
ಅನಗೋಳ ಕ್ರಾಸ್, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಹತ್ತಿರ ಎಡ ತಿರುವು
ಪಡೆದುಕೊಂಡು 2ನೇ ರೇಲ್ವೆ ಗೇಟ್ ಮೂಲಕ ಕಾಂಗ್ರೆಸ್ ರಸ್ತೆ ಸೇರಿ ಮುಂದೆ ಸಾಗುವುದು.

III. ಶಹಾಪುರ ಕಡೆಯಿಂದ ನಗರಕ್ಕೆ ಬರುವ ಎಲ್ಲ ಮಾದರಿ ವಾಹನಗಳು ಗೋವಾವೇಸ್ ಸರ್ಕಲ್ ಹತ್ತಿರ ಬಲ ತಿರುವ ಪಡೆದು ಮಹಾತ್ಮಾ ಫುಲೆ ರಸ್ತೆ, ಕಪಿಲೇಶ್ವರ ಟ್ರೈ ಓವರ್. ಶನಿಮಂದಿರ ಮೂಲಕ ಅಥವಾ ಹಳೆ ಪಿ.ಬಿ. ರಸ್ತೆ ಮೂಲಕ ಸಂಚರಿಸುವುದು.

6) ನೋ-ಪಾರ್ಕಿಂಗ್ : ಗೋವಾವೇಸ್ ಸರ್ಕಲ್‌ದಿಂದ ಅನಗೋಳ ಕ್ರಾಸ್ ವರೆಗಿನ ಖಾನಾಪುರ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡದೇ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಕೋರಿದೆ.

7) ಮತ ಎಣಿಕೆ ಸಮಯದಲ್ಲಿ ಬರುವ ಅಧಿಕಾರಿ, ಸಿಬ್ಬಂದಿಯವರು ಹಾಗೂ ಏಜೆಂಟರು ತಮ್ಮ ಜೊತೆಗೆ ಮೊಬೈಲ್ ಫೋನ, ಪಾನ್ ಬೀಡಾ/ಗುಟಖಾ ಪಾಕೇಟ್, ಇಂಕ್ ಪೆನ್, ಕ್ಯಾಮೆರಾ. ಬೆಂಕಿಪೊಟ್ಟಣ, ಲೈಟರ್, ಪ್ಲಾಸ್ಟಿಕ್ ವಸ್ತು ಅಗ್ನಿಕಾರಕ ಹಾಗೂ ಇನ್ನಿತರೆ ನಿಷೇಧಿತ ವಸ್ತುಗಳನ್ನು ಜೊತೆಗೆ ತರುವುದನ್ನು ನಿಷೇಧಿಸಲಾಗಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ