Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

‘ವೃತ್ತಿಯ ಆಚೆಗೂ ಬಂಧುತ್ವ ಗಟ್ಟಿಯಾಗಲಿ’-ಹೃಷಿಕೇಶ ಬಹದ್ದೂರ ದೇಸಾಯಿ

ಬೆಳಗಾವಿ: ‘ಪತ್ರಕರ್ತರಲ್ಲಿ ವೃತ್ತಿಪರ ಸ್ಪರ್ಧೆ ಇರುವುದು ಸಹಜ ಮತ್ತು ಆರೋಗ್ಯಕರ ಬೆಳವಣಿಗೆ. ವೃತ್ತಿಯ ಆಚೆಗೆ ನಾವೆಲ್ಲರೂ ಒಂದೇ ಎಂಬ ಭಾವತೋರಣದಲ್ಲಿ ಬಂಧಿಯಾಗಬೇಕು. ಆಗ ಮಾತ್ರ ಸಕಾರಾತ್ಮಕ ಬೆಳವಣಿಗೆಗಳು ಸಾಧ್ಯ’ ಎಂದು ಹಿರಿಯ ಪತ್ರಕರ್ತ ಹೃಷಿಕೇಶ ಬಹದ್ದೂರ ದೇಸಾಯಿ ಕಿವಿಮಾತು ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ 2024ನೇ ಸಾಲಿನ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ, ಬೆಳಗಾವಿ ಪತ್ರಕರ್ತರ ಬಳಗದಿಂದ ಇಲ್ಲಿನ ವಾರ್ತಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ನಡುವೆ ಸಾಕಷ್ಟು ಪ್ರತಿಭಾವಂತ, ಸೃಜನಾತ್ಮಕ ಬರವಣಿಗೆ ರೂಢಿಸಿಕೊಂಡ ಯುವ ಪತ್ರಕರ್ತರಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಬೆಂಗಳೂರು, ಮಂಗಳೂರು, ಮೈಸೂರು ಮಾತ್ರವಲ್ಲ; ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಲು ಮುಂದೆ ಬರಬೇಕು. ಅದಕ್ಕೆ ಪ್ರೋತ್ಸಾಹದಾಯಕ ಹೆಜ್ಜೆ ಇಡುವ ಯತ್ನಗಳು ಪತ್ರಕರ್ತರಿಂದಲೇ ಮೊದಲಾಗಬೇಕು’ ಎಂದೂ ಹೇಳಿದರು.

‘ಪತ್ರಕರ್ತರು ಸರಿಯಾದ ಪಥದಲ್ಲಿ ತಮ್ಮ ವೃತ್ತಿ ನಿಭಾಯಿಸುವ ಜತೆಗೆ, ಸಂಕಷ್ಟದಲ್ಲಿ ಇರುವ ಪತ್ರಕರ್ತರ ನೆರವಿಗೂ ಧಾವಿಸಬೇಕು. ಮಾಧ್ಯಮ ಮಿತ್ರರನ್ನು ಅಭದ್ರತೆ ಭಾವದಲ್ಲಿ ಇರುತ್ತಾರೆ. ಅನಾರೋಗ್ಯ, ಅಪಘಾತ ಮತ್ತಿತರ ಗಂಭೀರ ಸಮಸ್ಯೆಗೆ ಸಿಲುಕಿದರೆ ಮಾನಸಿಕವಾಗಿ ಕುಗ್ಗುತ್ತಾರೆ. ಕೆಲವೊಮ್ಮೆ ಪತ್ರಕರ್ತರನ್ನೇ ನೆಚ್ಚಿಕೊಂಡಿದ್ದ ಅವರ ಕುಟುಂಬಗಳು ನಾನಾ ಸಮಸ್ಯೆ ಎದುರಿಸುತ್ತವೆ. ಆಗ ಪ್ರತಿಯೊಬ್ಬರೂ ಸಣ್ಣ–ಸಣ್ಣ ಸಹಾಯವನ್ನಾದರೂ ಮಾಡಬೇಕು. ಸಂಘಟನೆಯೇ ನಮ್ಮ ಬಲವಾಗಬೇಕು. ಎಲ್ಲರೂ ಒಂದಾಗಿ, ನೊಂದವರಿಗೆ ಬೆನ್ನಿಗೆ ನಿಲ್ಲಬೇಕಿದೆ’ ಎಂದು ತಿಳಿಸಿದರು.

‘ನನಗೆ ಸಂದ ಪ್ರಶಸ್ತಿ ನನಗಷ್ಟೇ ಅಲ್ಲ; ಇಡೀ ಬೆಳಗಾವಿ ಜಿಲ್ಲೆಗೆ ಸೇರಿದ್ದು’ ಎಂದೂ ಹೇಳಿದರು.

ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿಯ ಸದಸ್ಯರಾಗಿ ನೇಮಕಗೊಂಡ ಶ್ರೀಕಾಂತ ಕುಬಕಡ್ಡಿ, ‘ರಾಜಕೀಯ, ಶಿಕ್ಷಣ, ಪತ್ರಿಕೋದ್ಯಮ ಮಾತ್ರವಲ್ಲ; ಎಲ್ಲ ರಂಗಗಳಲ್ಲೂ ದೊಡ್ಡ ಸದ್ದು ಮಾಡುವ ಜಿಲ್ಲೆ ಬೆಳಗಾವಿ. ಇಲ್ಲಿನ ಪತ್ರಿಕಾ ರಂಗದ ಹಿರಿಯರು ಕಿರಿಯರನ್ನು ಬೆಳೆಸುತ್ತ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಪತ್ರಕರ್ತರನ್ನೂ ಸರ್ಕಾರ ಗುರುತಿಸುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದರು.

ಅಕಾಡೆಮಿಯಿಂದ ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿ ಹಿರಿಯ ಪತ್ರಕರ್ತೆ ಕೀರ್ತಿ ಶೇಖರ ಕಾಸರಗೋಡು, ‘ಹೊಸ ವರ್ಷದ ಆರಂಭದಲ್ಲೇ ಸಾಲು ಸಾಲಾಗಿ ಪುರಸ್ಕಾರ ಸಿಕ್ಕಿದ್ದಷ್ಟೇ ಖುಷಿಯಾಗಿದೆ. ಬೆಳಗಾವಿಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂವರು ಪತ್ರಕರ್ತರಿಗೆ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸಬೇಕು. ಈ ಪೈಕಿ ಒಂದು ಪ್ರಶಸ್ತಿಯನ್ನು ಮಹಿಳೆಗೆ ಮೀಸಲಿರಿಸಬೇಕು. ಅದಕ್ಕೆ ನಾನು ವೈಯಕ್ತಿಕವಾಗಿ ದತ್ತಿನಿಧಿ ಕೊಡುವೆ’ ಎಂದು ತಿಳಿಸಿದರು.

ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಪಡೆದ ಪತ್ರಕರ್ತ ಪುಂಡಲೀಕ ಬಾಳೋಜಿ, ‘ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಅದನ್ನು ನಿಭಾಯಿಸಲು ಪ್ರಯತ್ನಿಸುವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಮಾತನಾಡಿದರು. ಹಿರಿಯ ಪತ್ರಕರ್ತ ಕೆ.ಸುರೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಮೆಹಬೂಬ್‌ ಮಕಾನದಾರ, ಮುನ್ನಾ ಬಾಗವಾನ, ಬ್ರಹ್ಮಾನಂದ ಹಡಗಲಿ, ಮಲ್ಲಿಕಾರ್ಜುನ ಮುಗಳಿ, ಮುರುಗೇಶ ಶಿವಪೂಜಿ, ಶ್ರೀಶೈಲ ಮಠದ, ಲೂಯಿಸ್‌ ರಾಡ್ರಿಗ್ಸ್‌, ಭೈರೋಬಾ ಕಾಂಬಳೆ, ಕುಂತಿನಾಥ ಕಲಮನಿ ಮತ್ತಿತರರು ಮಾತನಾಡಿದರು. ರವಿ ಉಪ್ಪಾರ ನಿರೂಪಿಸಿದರು.

---

ಉತ್ತರ ಕರ್ನಾಟಕ ಪತ್ರಕರ್ತರು ಸರ್ಕಾರಿ ಪುರಸ್ಕಾರ ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಪತ್ರಕರ್ತರಿಗಾಗಿ ಇರುವ ಪ್ರಶಸ್ತಿ– ಪುರಸ್ಕಾರ– ಫೆಲೊಷಿಪ್‌ಗಳ ಬಗ್ಗೆ ಮಾಹಿತಿ ಹಂಚಿಕೆ ಆಗಬೇಕಿದೆ

ಗುರುನಾಥ ಕಡಬೂರ-

ಉಪನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ