Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

IPL ಟ್ರೋಫಿ ಗೆದ್ದ RCBಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ, ಅದೊಂದು ದುಡ್ಡಿನ ಆಟ ಎಂದು ಬಿಂಬಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ, ಇಲ್ಲಿನ ಜಾಹಿರಾತು, ನೇರಪ್ರಸಾರ, ಸ್ಪಾನ್ಸರ್‌ಶಿಪ್ ಸೇರಿದಂತೆ ಇತರೆ ಮೂಲಗಳಿಂದ ಕೋಟಿ ಕೋಟಿ ಹಣ ಹರಿದು ಬರುತ್ತದೆ.

ಸದ್ಯ, 19ನೇ ಆವೃತ್ತಿಯ ಐಪಿಎಲ್ ಪ್ರಶಸ್ತಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಜೊತೆ ₹20 ಕೋಟಿ ನಗದು ಬಹುಮಾನ ಗೆದ್ದುಕೊಂಡಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧರಿಸಿದಂತೆ, ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡವು ₹20 ಕೋಟಿ ಪಡೆದುಕೊಂಡರೆ, ರನ್ನರ್ ಅಪ್ ಗುಜರಾತ್ ಟೈಟನ್ಸ್ ತಂಡವು ₹13 ಕೋಟಿ ಪಡೆಯಲಿದೆ. ಕ್ವಾಲಿಫೈಯರ್ 2ರಲ್ಲಿ ಸೋತಿರುವ ರಾಜಸ್ಥಾನ ರಾಯಲ್ಸ್ ತಂಡವು ₹7 ಕೋಟಿ ಪಡೆದರೆ, ಎಲಿಮಿನೇಟರ್ ಪಂದ್ಯದಿಂದ ಹೊರಬಿದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ₹6.5 ಕೋಟಿ ಪಡೆದುಕೊಳ್ಳಲಿದೆ.

ಅಗ್ರ 4ರಲ್ಲಿ ಸ್ಥಾನ ಪಡೆಯುವ ತಂಡಗಳು ಸುಮಾರು ₹46.5 ಕೋಟಿಯಲ್ಲಿ ಹಂಚಿಕೆ ಮಾಡಿಕೊಳ್ಳಲಿವೆ. ಇನ್ನೂ ತಂಡಗಳು ಪಡೆಯುವ ಪ್ರಶಸ್ತಿ ಮೊತ್ತದಲ್ಲಿ ಅರ್ಧದಷ್ಟು ಹಣವನ್ನು ತಂಡದ ಆಟಗಾರರಿಗೆ ಹಂಚಿಕೆ ಮಾಡಬೇಕು ಎಂಬ ನಿಯಮ ಕೂಡ ಇದೆ.

ಐಪಿಎಲ್ ಪ್ರಾರಂಭಿಕ ಆವೃತ್ತಿಯಲ್ಲಿ ಈ ಬಹುಮಾನದ ಮೊತ್ತವು ವಿಜೇತ ತಂಡಕ್ಕೆ ₹4.8 ಕೋಟಿ ಸಿಗುತ್ತಿತ್ತು. ಆ ಮೊತ್ತವು ಪ್ರಸ್ತುತ ನಾಲ್ಕು ಪಟ್ಟು ಅಧಿಕವಾಗಿದೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳಿಗೆ ನಿಷೇಧಭಾರತದ ನೂತನ ಸಿಡಿಎಸ್ ಆಗಿ ಜನರಲ್ ರಾಜಾ ಸುಬ್ರಮಣಿ ಅಧಿಕಾರ ಸ್ವೀಕಾರಹಿಮಾಚಲಪ್ರದೇಶ ಮಹಾನಗರ ಪಾಲಿಕೆ ಚುನಾವಣೆ: ಆಡಳಿತಾರೂಢ ಕಾಂಗ್ರೆಸ್ಸಿಗೆ ಮುಖಭಂಗ, ಬಿಜೆಪಿಗೆ ಭರ್ಜರಿ ಜಯತೆರೆಯ ಮರೆಯಲ್ಲಿ ಸಂಪುಟ ರಚನೆ ಜೋರು : ಯಾರು ಸಚಿವರಾಗಬಹುದು ?ಧೋನಿ, ರೋಹಿತ್ ಸಾಲಿಗೆ ಸೇರಿದ ಪಾಟಿದಾರ್IPL ಟ್ರೋಫಿ ಗೆದ್ದ RCBಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?ಆರೆಂಜ್ ಕ್ಯಾಪ್, ಸರಣಿಶ್ರೇಷ್ಠ ಹಲವು ಪ್ರಶಸ್ತಿ ಗೆದ್ದ ವೈಭವಐಪಿಎಲ್ 2026 ಫೈನಲ್ : ಬೌಲರ್‌ಗಳ ಕರಾಮತ್ತು, ಕೊಹ್ಲಿ ಅಬ್ಬರ; ಸತತ 2ನೇ ಬಾರಿ ಐಪಿಎಲ್ ಚಾಂಪಿಯನ್‌ ಆದ ಆರ್‌ಸಿಬಿಸತತ ಎರಡನೇ ಬಾರಿಗೆ ಐಪಿಎಲ್  ಚಾಂಪಿಯನ್ ಆದ ಆರ್‌ಸಿಬಿಅಭಿನವ ಸಿದ್ಧಲಿಂಗ ಶ್ರೀ ಜನ್ಮದಿನ ನಾಳೆ ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ