Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚಿಕ್ಕೋಡಿ-ನಿಪ್ಪಾಣಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ಯುವಕರಿಬ್ಬರು ಸಾವು

ಬೆಳಗಾವಿ: ಚಿಕ್ಕೋಡಿ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಚಿಂಚಣಿ ಟೋಲ್ ನಾಕಾ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಟ್ರಕ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.​ಅಪಘಾತದಲ್ಲಿ ಮೃತಪಟ್ಟ ಯುವಕರನ್ನು ಚಿಕ್ಕೋಡಿಯ ಓತಾರಿ ಗಲ್ಲಿಯ ನಿವಾಸಿಗಳಾದ ಸಿದ್ದು ಕುರಳೆ ಮತ್ತು ಸ್ವರೂಪ್ ಮಾಳವದೆ ಎಂದು ಗುರುತಿಸಲಾಗಿದೆ. 

ಮೃತ ಯುವಕರು ತಮ್ಮ ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ಮನೆಗೆ ಮರಳುತ್ತಿದ್ದರು. ಚಿಂಚಣಿ ಟೋಲ್ ಗೇಟ್ ತಲುಪುತ್ತಿದ್ದಂತೆ, ಇವರ ಬೈಕ್ ಚಿಕೋಡಿ ಕಡೆಗೆ ಸಾಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

​ಡಿಕ್ಕಿಯ ರಭಸಕ್ಕೆ ಯುವಕರಿಬ್ಬರು ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳಿಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕ ವಿಧಾನಸಭೆಗೆ ಆಗಸ್ಟ್ 14 ರಂದು ನೂತನ ಸ್ಪೀಕರ್ ಆಯ್ಕೆಹೋಟೆಲ್‌, ರೆಸ್ಟೋರೆಂಟ್‌ಗಳು, ಧಾಬಾಗಳಿಗೆ ಖಡಕ್‌ ಸೂಚನೆ ; ಆಹಾರ ಸುರಕ್ಷತೆಗೆ ಸರ್ಕಾರದಿಂದ 12 ಅಂಶಗಳ ಮಾರ್ಗಸೂಚಿಬೆಳಗಾವಿಗೆ 9 ಕಿ.ಮೀ. ಎಲಿವೇಟೆಡ್ ರೈಲು ಮಾರ್ಗ: ಕೇಂದ್ರದ ಗಮನ ಸೆಳೆಯಲು ಸಿಟಿಜನ್ ಫೋರಂ ಆಗ್ರಹಶಿವಂ ಅಸೋಸಿಯೇಟ್ಸ್‌ ಮೇಲೆ ಇ.ಡಿ. ದಾಳಿ : ₹1,777 ಕೋಟಿ ಲೆಕ್ಕಕ್ಕೆ ಸಿಗದ ಹಣ ಪತ್ತೆಮೂರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!ಮಗನ ಅಪಘಾತದಿಂದ ನೊಂದು ದಂಪತಿಯ ದುರಂತ ಅಂತ್ಯ ; ತಾಯಿ-ತಂದೆ ಕಳೆದುಕೊಂಡ 10 ವರ್ಷದ ಬಾಲಕ ಅನಾಥಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; 132 ಮಂದಿ ಸಾವುಕೆಸರು ಮಿಶ್ರಿತ ನೀರಿನ ರಭಸಕ್ಕೆ ಕ್ಷಣಾರ್ಧದಲ್ಲೇ ಕೊಚ್ಚಿಹೋದ ನೀತಿ ಕಣಿವೆ ಸೇತುವೆಪಂಚತಾರಾ ಹೊಟೇಲ್‌ನಲ್ಲಿ ರೂಂ ಬುಕ್ ಮಾಡಿ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ?ನರೇಂದ್ರ ಹೆಸರೇ ನನಗೆ ಆಗ್ಬರಲ್ಲ ; ಪಾಕ್ ಬಾಕ್ಸರ್ ಹೇಳಿದ್ದನ್ನು ಮೋದಿಗೆ ಹೇಳಿದ ಭಾರತದ ಬಾಕ್ಸರ್; ಮೋದಿ ಪ್ರತಿಕ್ರಿಯೆ ನೋಡಿ