Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶಾಲೆಗಳಲ್ಲಿ ಶನಿವಾರದ ಶಾಲಾ ವೇಳಾಪಟ್ಟಿ ಬದಲಾಯಿಸಲು ಸರ್ಕಾರ ಸಮ್ಮತಿ ?

Advertisement

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ಶಾಲಾ ವೇಳಾಪಟ್ಟಿಯನ್ನು ಬದಲಾಯಿಸಲು ಸರ್ಕಾರ ಸಮ್ಮತಿಸಿದೆ ಎಂದು ತಿಳಿದುಬಂದಿದೆ.

ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್, ಐಎಎಸ್ ಅವರೊಂದಿಗೆ ನಡೆಸಿದ ಚರ್ಚೆಯ ಬಳಿಕ ಶನಿವಾರದ ಶಾಲಾ ಸಮಯವನ್ನು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 12.30 ರವರೆಗೆ ನಿಗದಿಪಡಿಸಲು ಒಪ್ಪಿಗೆ ದೊರೆತಿದೆ ಎನ್ನಲಾಗಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಈ ಹಿಂದೆ ಶನಿವಾರದ ಶಾಲಾ ಸಮಯ ಬೆಳಿಗ್ಗೆ 7.45 ರಿಂದ 11.45 ರವರೆಗೆ ನಿಗದಿಯಾಗಿತ್ತು. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಲವು ತೊಂದರೆಗಳನ್ನು ಎದುರಿಸುತ್ತಿದ್ದರು. ವಿಶೇಷವಾಗಿ ಗ್ರಾಮೀಣ ಭಾಗದ ಶಿಕ್ಷಕರಿಗೆ ಬೆಳಿಗ್ಗೆ ಬೇಗನೆ ಶಾಲೆಗೆ ತಲುಪಲು ಸೂಕ್ತ ಬಸ್ ಸೌಲಭ್ಯ ಲಭ್ಯವಾಗುತ್ತಿರಲಿಲ್ಲ. ಚಳಿಗಾಲ ಹಾಗೂ ಮಳೆಗಾಲದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದರು.
ಹೀಗಾಗಿ ಶಾಲಾ ಸಮಯವನ್ನು ಬದಲಾಯಿಸುವಂತೆ ಶಿಕ್ಷಕರ ಸಂಘಗಳು ಬಹುಕಾಲದಿಂದ ಒತ್ತಾಯಿಸುತ್ತಿದ್ದವು. ಇದೀಗ ಸರ್ಕಾರ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಯ ಬದಲಾವಣೆಗೆ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲೆಗಳಲ್ಲಿ ಶನಿವಾರದ ಶಾಲಾ ವೇಳಾಪಟ್ಟಿ ಬದಲಾಯಿಸಲು ಸರ್ಕಾರ ಸಮ್ಮತಿ ?ತೋತಾಪುರಿ ಮಾವು ಬೆಳೆಗಾರರಿಗೆ ಸಿಹಿ ಸುದ್ದಿ ; ಕರ್ನಾಟಕದ 1.3 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್‌ಕೇಂದ್ರದಿಂದ ಗುಡ್‌ನ್ಯೂಸ್ ; ವಾಣಿಜ್ಯ ಬಳಕೆ ಎಲ್‌ಪಿಜಿ ಮೇಲಿನ ನಿರ್ಬಂಧ ತೆಗೆದುಹಾಕಿದ ಸರ್ಕಾರ ; ಪೂರೈಕೆ ಸಹಜ ಸ್ಥಿತಿಗೆಇಡಿ ದಾಳಿ ವೇಳೆ ಮಂಜುನಾಥ ಮತ್ತು ಆಪ್ತರ ಬಳಿ ಸಿಕ್ಕಿದ್ದೆಷ್ಟು ಗೊತ್ತೇ ?ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ; ಯಾರಿಗೆ ಯಾವ ಜಿಲ್ಲೆ ; ಇಲ್ಲಿದೆ ವಿವರಉದ್ಯಮಿ ರಾಜಾಭಾವು ಶಿರಗಾಂವಕರ ನಿಧನಪಾಸ್‌ಪೋರ್ಟ್‌ ಪೌರತ್ವದ ದಾಖಲೆಯಲ್ಲ : ವಿದೇಶಾಂಗ ಸಚಿವಾಲಯ ಸ್ಪಷ್ಟನೆಬೆಳಗಾವಿಯಲ್ಲಿ ‘ಖೇಲೋ ಇಂಡಿಯಾ’ ಯೋಜನೆಯಡಿ ಭವ್ಯ ಹಾಕಿ ಮೈದಾನ ನಿರ್ಮಾಣಕ್ಕೆ ವೇಗ: ಸಂಸದ ಜಗದೀಶ್ ಶೆಟ್ಟರ್ ಭರವಸೆ; ಕ್ಯಾಂಟೋನ್ಮೆಂಟ್ ಮಂಡಳಿಯಿಂದ ಸಕಾರಾತ್ಮಕ ಸ್ಪಂದನೆಎನ್‌ಸಿಇಆರ್‌ಟಿ ಮಹತ್ವದ ನಿರ್ಧಾರ; 9ನೇ ತರಗತಿ ಪಠ್ಯಪುಸ್ತಕದಲ್ಲಿ ‘ತುರ್ತು ಪರಿಸ್ಥಿತಿ’ ವಿಷಯ ಸೇರ್ಪಡೆಬೆಳಗಾವಿಯಲ್ಲಿ ‘ಜಿನ ದೀವಿಗೆ’ ಮತ್ತು ‘ಮರಾಠಿಯೊಳಗೊಂದು ಕನ್ನಡ ಗತವೈಭವ’ ಕೃತಿಗಳ ಲೋಕಾರ್ಪಣೆ ಸಮಾರಂಭ