Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಲ್ಯುಡೊ ಆಟದ ಕಾಯಿನ್ ನುಂಗಿ ಬಾಲಕಿ ಸಾವು

Advertisement
ಉಳ್ಳಾಲ: ಮನೆಯಲ್ಲಿ ಲ್ಯುಡೊ ಆಟದಲ್ಲಿ ತೊಡಗಿದ್ದ ಎಂಟು ವರ್ಷದ ಬಾಲಕಿ ಆಟಕ್ಕೆ ಬಳಸುವ ಶಂಕಾಕೃತಿಯ ಪ್ಲಾಸ್ಟಿಕ್ ಕಾಯಿನ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕೊಲ್ಯ ಎಂಬಲ್ಲಿ ಶನಿವಾರ ನಡೆದಿದೆ.

ಕಾಸರಗೋಡು ಜಿಲ್ಲೆಯ ಮಧೂರು ಉಳಿಯತಡ್ಕ ನಿವಾಸಿ ರಾಜೇಶ್ ಗಟ್ಟಿ ಮತ್ತು ರಾಜೇಶ್ವರಿ ದಂಪತಿಯ ಎರಡನೇ ಪುತ್ರಿ ತನುಷ್ಕಾ ಮೃತ ದುರ್ದೈವಿ.

ತನುಷ್ಕಾ ತಾಯಿ ಉಳ್ಳಾಲದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು ಉದ್ಯೋಗಕ್ಕೆ ತೆರಳಲು ಅನುಕೂಲವಾಗುವಂತೆ ಕೊಲ್ಯದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶನಿವಾರ ಮಧ್ಯಾಹ್ನ ಶಾಲೆಗೆ ರಜೆ ಕಾರಣ ತನುಷ್ಕಾ ಅಣ್ಣ ಮತ್ತು ತಂಗಿಯರ ಜೊತೆ ಆಟವಾಡುತ್ತಿದ್ದಾಗ, ಪ್ಲಾಸ್ಟಿಕ್ ಕಾಯಿನ್ ನುಂಗಿದ್ದಾಳೆ. ಏಕಾಏಕಿ ಉಸಿರುಗಟ್ಟಿದಾಗ ತಕ್ಷಣ ಆಕೆಯನ್ನು ಸ್ಥಳೀಯ ಸಹಕಾರದೊಂದಿಗೆ ತೊಕ್ಕೊಟ್ಟಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ತನುಷ್ಕಾ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆಯ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಕಾಯಿನ್ ಇರುವುದು ಕಂಡುಬಂದಿದೆ. ಈಕೆ ತೊಕ್ಕೊಟ್ಟುವಿನ ಸಂತ ಸೆಬೆಸ್ಟಿಯನ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ