Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಾಹಿತ್ಯ ಶ್ರಮ ಸಂಸ್ಕೃತಿಯ ಪ್ರತಿನಿಧಿಯಾಗಬೇಕು- ಗಾರ್ಗಿ

ಬೆಳಗಾವಿ: ಸಾಹಿತ್ಯ ರಚನೆ ಜನಪರವಾಗಿರಬೇಕು ಸಾಮಾನ್ಯ ಓದುಗನಿಗೂ ಅರ್ಥವಾಗಬೇಕು ಬೆರೆಸಿ ಬರೆಯದೆ ಬೆರೆತು ಬರೆಯಬೇಕು. ಜೀವನಾನುಭವದಿಂದ ರಚಿತವಾದ ಸಾಹಿತ್ಯ ಅನುಗಾಲವೂ ಜೀವಂತವಾಗಿರುತ್ತದೆ ಎಂದು ಸಾಹಿತಿ ಸಂಘಟಕ ಜನಸಾಹಿತ್ಯಪೀಠದ ಅಧ್ಯಕ್ಷ ಬಸವರಾಜ ಗಾರ್ಗಿ ಹೇಳಿದರು ಅವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಇತ್ತಿತ್ತಲಾಗಿ ಸಾಕಷ್ಟು ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ ಅದಕ್ಕೆ ಬೆಳಗಾವಿ ಜಿಲ್ಲೆಯೂ ಹೊರತಲ್ಲ. ಕತೆ ಕಾವ್ಯ ಕಾದಂಬರಿ ಹಾಸ್ಯ ವಿಡಂಬನೆ ಮಕ್ಕಳ ಸಾಹಿತ್ಯದಲ್ಲಿ ಮೊದಲಾದ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿದ್ದು ಸತ್ವಯುತ ರಚನೆಗಳು ಹೊರಬರಬೇಕಾಗಿದೆ. ಈ ನಿಟ್ಟಿನಲ್ಲಿ ಲೇಖಕಿಯರು ಪ್ರಯತ್ನ ಮಾಡಬೇಕಾದ ಅಗತ್ಯವಿದೆ. ಲೇಖಕಿಯರು ಲೇಖಕರಿಗಿಂತ ಉತ್ತಮವಾದ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ .

ಲೇಖಕ ಸಮಾಜದ ಅನಧಿಕೃತ ಶಾಸಕ ಜನಸಾಮಾನ್ಯರ ತವಕ ತಲ್ಲಣಗಳು ಕೃತಿಯಲ್ಲಿ ಅನಾವರಣಗೊಳ್ಳಬೇಕೆಂದರು. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ರಾಜ್ಯಕ್ಕೆ ಮಾದರಿಯಾಗಿದ್ದು ರಜತಮಹೋತ್ಸವದತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯ ೨೫ ರ ಸಂಭ್ರಮ ಅರ್ಥಪೂರ್ಣವಾಗಲೆಂದರು.
ದತ್ತಿ ದಾನಿಗಳಾದ ಜ್ಯೋತಿ ಬದಾಮಿ, ಇಂದಿರಾ ಮೋಟೆಬೆನ್ನೂರ, ಡಾ.ಹೇಮಾ ಸೋನೊಳ್ಳಿ, ರೋಹಿಣಿ ಯಾದವಾಡ, ಸುಧಾ ಪಾಟೀಲ, ಪ್ರಭಾ ಪಾಟೀಲ ಹುಂಡೇಕಾರ ಮಾತನಾಡಿದರು.
ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ ಅಧ್ಯಕ್ಷತೆ ವಹಿಸಿ ಸಂಘದ ಚಟುವಟಿಕೆಗಳಿಗೆ ಸದಸ್ಯರೆ ಜೇವಾಳ ಮುಂಬರುವ ದಿನಗಳಲ್ಲಿ ರಾಜ್ಯ ಮಟ್ಟದ ಕಾರ್ಯಗಳನ್ನು ಸಂಘದಿಂದ ಹಮ್ಮಿಕೊಂಡು ಕಾರ್ಯವ್ಯಾಪ್ತಿ ವಿಸ್ತರಿಸುವ ಕುರಿತು ಯೋಚಿಸಲಾಗುತ್ತಿದೆ. ಮತ್ತಷ್ಟು ದತ್ತಿಗಳನ್ನು ಸ್ಥಾಪಿಸಿ ಉದಯೋನ್ಮುಖ ಲೇಖಕಿಯರನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಸಂಘದ ಸಂಸ್ಥಾಪಕ ಅಧ್ಯಕ್ಷೆ ಆಶಾ ಕಡಪಟ್ಟಿ ಮತ್ತು ಲಿಂಗಾಯತ ಮಹಿಳಾ ಸಂಘದ ಅಧ್ಯಕ್ಷೆ ಶೈಲಜಾ ಭಿಂಗೆ ಆಕಾಶವಾಣಿ ಕಲಾವಿದ ಶ್ರೀರಂಗ ಜೋಶಿ ಸಂತೋಷ ನಾಯ್ಕ ಉಪಸ್ಥಿತರಿದ್ದರು. ಡಾ. ಭಾರತಿ ಮಠದ ಸ್ವಾಗತಿಸಿದರು. ಲೀಲಾ ಚೌಗಲೆ
ವಂದಿಸಿದರು. ಅನ್ನಪೂರ್ಣ ಹಿರೇಮಠ ನಿರೂಪಿಸಿದರು. ಹೀರಾ ಚೌಗಲೆ ದತ್ತಿ ಪ್ರಶಸ್ತಿಗಳನ್ನು ಪರಿಚಯಿಸಿದರು.
ದೀಪಿಕಾ ಚಾಟೆ, ವಿದ್ಯಾ ಹುಂಡೇಕರ, ಡಾ. ಗುರುದೇವಿ ಹುಲೆಪ್ಪನವರಮಠ, ರಂಜಿತಾ ಮಹಾಜನ, ಪದ್ಮಜಾ ಉಮರ್ಜಿ, ಪಾರ್ವತಿ ಪಿಟಗಿ, ರಾಜೇಶ್ವರಿ ಹೆಗಡೆ ವಿವಿದ ದತ್ತಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ