Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರೈತರ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್ ಪರಿವರ್ತಕ: ಡಿಸಿ ನಿತೇಶ್ ಪಾಟೀಲ

 

ಬೆಳಗಾವಿ :
ರೈತರ ಕೃಷಿ ಪಂಪ್‌ ಸೆಟ್ ಶೀಘ್ರವಾಗಿ ವಿದ್ಯುತ್ ಸಂಪರ್ಕವನ್ನು ಒದಗಿಸುವ ದೃಷ್ಟಿಯಿಂದ, ಶೀಘ್ರ-ಸಂಪರ್ಕ ಯೋಜನೆಯನ್ನು ಪರಿಚಯಿಸಲಾಗಿದ್ದು, ಸದರಿ ಯೋಜನೆಯಲ್ಲಿ ರೈತರು 10000 ರೂಗಳ ಸೌಕರ್ಯ ಅಭಿವೃದ್ದಿ ಶುಲ್ಕ ಹಾಗೂ ವಿದ್ಯುತ್ ಭಾರಕ್ಕೆ ತಕ್ಕಂತೆ ಭದ್ರತಾ ಠೇವಣಿಯನ್ನು ಭರಿಸಿ, ಎಚ್.ಟಿ., ಎಲ್.ಟಿ. ಹಾಗೂ ಡಿ.ಟಿ.ಸಿ. ಕಾಮಗಾರಿಯ ಕಾರ್ಯವನ್ನು “ಸ್ವಯಂ ಕಾರ್ಯ ಯೋಜನೆ”ಯಡಿಯಲ್ಲಿ ಪೂರ್ಣಗೊಳಿಸಿದಲ್ಲಿ, ಸದರಿ ಕಾಮಗಾರಿಗೆ ಪರಿವರ್ತಕವನ್ನು ಹೆಸ್ಕಾಂ ಕಂಪನಿಯು ಉಚಿತವಾಗಿ ನೀಡುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಪರಿವರ್ತಕ ವಿಫಲಗೊಂಡ ಸಮಯದಲ್ಲಿ ಗ್ರಾಹಕರು 1912 ಗೆ ದೂರು ದಾಖಲಿಸಿದಾಗ, ಗ್ರಾಹಕರ ಪ್ರತಿನಿಧಿಯು ಸಂಬಂಧಪಟ್ಟ ಕಾರ್ಯ ವ್ಯಾಪ್ತಿಯ ಶಾಖಾಧಿಕಾರಿ/ಸಹಾಯಕ ಕಾರ್ಯನಿರ್ವಾಹಕ/ ಕಾರ್ಯನಿವಾಹಕ ಅಭಿಯಂತರರು ರವರಿಗೆ ಮಾಹಿತಿಯನ್ನು ನೀಡುತ್ತಾರೆ. ಈ ಮೂಲಕ ಕಂಪನಿಯ ಸಿಬ್ಬಂದಿಯವರು ವಿಫಲಗೊಂಡ ಪರಿವರ್ತಕವನ್ನು 24 ಗಂಟೆಯೊಳಗೆ ಬದಲಾಯಿಸಲು ಕ್ರಮವಹಿಸಲಾಗುವುದು.

ವಿಫಲಗೊಂಡ ಪರಿವರ್ತಕಗಳ ಬದಲಾವಣೆ:

ಪರಿವರ್ತಕಗಳು ವಿಫಲಗೊಂಡ ಸಮಯದಲ್ಲಿ, 24 ಗಂಟೆಗಳೊಳಗಾಗಿ ಪರಿವರ್ತಕಗಳ ಬದಲಾಯಿಸುವ ಉದ್ದೇಶಕ್ಕಾಗಿ ಹೆಸ್ಕಾಂ ಕಂಪನಿಯು ಬೆಳಗಾವಿ ಜಿಲ್ಲೆ ವ್ಯಾಪ್ತಿಯ ಎಲ್ಲ ಕಾರ್ಯ ಮತ್ತು ಪಾಲನೆ ವಿಭಾಗಗಳ ಉಗ್ರಾಣಗಳಲ್ಲಿ ಉತ್ತಮವಾದ ಪರಿವರ್ತಕಗಳ ದಾಸ್ತಾನು ಹೊಂದಿರುತ್ತದೆ. ಇದರಿಂದ ಗ್ರಾಹಕರಿಗೆ 24 ಗಂಟೆಯ ಅವಧಿಯೊಳಗೆ ಪರಿವರ್ತಕವನ್ನು ಬದಲಾಯಿಸಲಾಗುವುದು.

ವಿಭಾಗವಾರು ಅಧಿಕಾರಿಗಳ ವಿವರ:

ಬೆಳಗಾವಿ ನಗರದ ಕಾರ್ಯನಿರ್ವಾಹಕ ಅಭಿಯಂತರರ ದೂರವಾಣಿ ಸಂಖ್ಯೆ 9448370241 ಅಥವಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ದೂರವಾಣಿ ಸಂಖ್ಯೆ 9480881987, 9448370244, 9448094489 ಹಾಗೂ ಬೆಳಗಾವಿ ಗ್ರಾಮೀಣದ ಖಾನಾಪೂರ ಕಾರ್ಯನಿರ್ವಾಹಕ ಅಭಿಯಂತರರ ದೂರವಾಣಿ ಸಂಖ್ಯೆ
9448370243 ಅಥವಾ ಗ್ರಾಮೀಣ ಉಪ ವಿಭಾಗಗಳ ದೂರವಾಣಿ ಸಂಖ್ಯೆ 9448370242 ಹಾಗೂ 9480882087 9448472224 ಯನ್ನು ಸಂಪರ್ಕಿಸಬಹುದು.

ಅದೇ ರೀತಿಯಲ್ಲಿ ಬೈಲಹೊಂಗಲ, ಕಿತ್ತೂರು, ಸವದತ್ತಿ ಕಾರ್ಯನಿರ್ವಹಕ ಅಭಿಯಂತರರ ದೂರವಾಣಿ ಸಂಖ್ಯೆ
9448370268 ಹಾಗೂ ರಾಮದುರ್ಗ 9480883886,
ಘಟಪ್ರಭಾ, ಗೋಕಾಕ, ಮೂಡಲಗಿ ದೂರವಾಣಿ ಸಂಖ್ಯೆ
9448370247, ಚಿಕ್ಕೋಡಿ, ನಿಪ್ಪಾಣಿ 9448370245, ರಾಯಬಾಗ 9483507199 ಹಾಗೂ ಅಥಣಿ ಕಾಗವಾಡ ದೂರವಾಣಿ ಸಂಖ್ಯೆ 9449017644 ಗೆ ಸಂಪರ್ಕಿಸಬಹುದಾಗಿದೆ.

ಹೆಸ್ಕಾಂ ಕಂಪನಿಯು ಶುಲ್ಕ ರಹಿತ ದೂರವಾಣಿ 1912 ಸಂಖ್ಯೆಯ ಮೂಲಕ ಗ್ರಾಹಕರುಗಳು ವಿದ್ಯುತ್ ಸರಬರಾಜಿನಲ್ಲಿ ಅಡಚಣೆ, ವಿಫಲಗೊಂಡ ಪರಿವರ್ತಕಗಳ ಬದಲಾವಣೆ ಹಾಗೂ ಇತರೇ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ