Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕೊನೆಗೂ ಬುಡಾ ಆಯುಕ್ತರ ಎತ್ತಂಗಡಿ !

ಬೆಳಗಾವಿ :ಆರೋಪ ಹೊತ್ತು ವರ್ಗಾವಣೆ ಆಗಿರುವ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಅವರ ಜಾಗಕ್ಕೆ; ಹೊಸ ಕಮಿಷ್ನರ್ ಆಗಿ ರಾಜಶೇಖರ್ ಡಂಬಳ ಅಧಿಕಾರ ವಹಿಸಿಕೊಂಡಿದ್ದಾರೆ.ಬುಡಾ ಸೈಟ್ ಹಂಚಿಕೆ ದಂಧೆಯಲ್ಲಿ ಸಿಕ್ಕಿಬಿದ್ದು, ಅದರ ವಿಚಾರಣೆ ಜಿಲ್ಲಾಡಳಿತ ಆರಂಭಿಸುವ ಮುನ್ನವೇ ಪ್ರೀತಂ ನಸಲಾಪುರೆ ಆಗಲೇ 'ಬುಡಾ' ಬಿಟ್ಟು 'ಬಿಮ್ಸ್'ಗೆ ಹೋಗಿದ್ದಾರೆ.

ಬುಡಾ ಬರ್ಖಾಸ್ತ್ ವ್ಯವಹಾರದಲ್ಲಿ ಹಲವು ಉನ್ನತಾಧಿಕಾರಿಗಳು, ರಾಜಕೀಯ ಪುಢಾರಿಗಳು ಮತ್ತಿತರರು ಸೈಟ್ ಪಡೆದ ಫಲಾನುಭವಿಗಳಾಗಿದ್ದು, ಗುಪ್ತವಾಗಿರುವ ಅವರ ಹೆಸರು ಇನ್ನಷ್ಟೇ ಬೆಳಕಿಗೂ ಬರಲಿದೆ.‌.!
ಜನರ ಮೇಲೆ ಆಡಳಿತ ನಡೆಸುವ, ಸಮಾಜವನ್ನು ರಾಜಕೀವಾಗಿ ಮುನ್ನಡೆಸುವ, ಸಮಾಜ ಮತ್ತು ಸರಕಾರದ ಅಂಕುಡೊಂಕು ವಿಮರ್ಷೆ ಮಾಡುವ ವೃತ್ತಿಯವರೇ ಬುಡಾ ಬುಡಕ್ಕೆ ಕೈ ಹಾಕಿ ಸೈಟ್ ಸೆಳೆದಿರುವ ಪ್ರಕರಣದ ವಿಚಾರಣೆಗೆ ಜಿಲ್ಲಾಡಳಿತ ಇನ್ನೂ ಮುಂದಾಗಿಲ್ಲ.

ಸರಕಾರಕ್ಕೆ ಲಾಸ್ ಮಾಡಿರುವ ಪ್ರಕರಣ ಬೆಳಕಿಗೆ ಬಂದು, ಸಾರ್ವಜನಿಕವಾಗಿ ಜಗಜ್ಜಾಹೀರಾಗಿ ಅರ್ಧ ತಿಂಗಳು ಕಳೆದರೂ ಇನ್ನೂ ಜಿಲ್ಲಾಧಿಕಾರಿ ಸುಮ್ಮನಿರುವುದು ಸಂಶಯ ಮೂಡಿಸಿದೆ.ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು 'ಬುಡಮೇಲು' ವರದಿ ಪಡೆಯುವುದಾಗಿ ಹೇಳಿ ಹೋದವರು ಮತ್ತೆ ಆ ಬಗ್ಗೆ ಚಕಾರ ಎತ್ತಿಲ್ಲ.

ಸಾರ್ವಜನಿಕರು ಮತ್ತು ಸಾಮಾಜಿಕ ಸಂಘಟನೆಗಳು ಡಿಸಿ ಎಡೆಗೆ ನೆಟ್ಟ ನೋಟ ನೆಟ್ಟಿದ್ದು ಪ್ರಕರಣ ಮುಚ್ಚುವುದೋ ಹೊರಬರುವುದೋ ಕಾಯ್ದು ನೋಡಬೇಕಿದೆ.ಬೆಳಗಾವಿಯಲ್ಲಿ ಹಲವು ಅಧಿಕಾರಿಗಳು ತನ್ನ ಮೇಲಾಧಿಕಾರಿಗೆ ಗೌರವವಾದರ ಕೊಡದೇ, ರಾಜಕೀಯ ಪುಢಾರಿಗಳ ಗುಲಾಮರಾಗಿ ಸಾರ್ವಜನಿಕ ಅಧಿಕಾರ ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವುದು ವಿಷಾದನೀಯ.ಕಳೆದ 10-15ವರ್ಷ ಮೇಲ್ಪಟ್ಟು ಬೆಳಗಾವಿಯಲ್ಲಿಯೇ ಲಫಡಾ ಮಾಡುತ್ತ ಬಿಡಾರ ಹೂಡಿರುವ ಮೂರು ಬಿಟ್ಟ ಹಲವು ಬ್ಯೂರೊಕ್ರಾಟ್ಸ್ ಗಳ ಮುಖ ನೋಡಿ- ನೋಡಿ ಜನ ಬೇಸತ್ತಿದ್ದಾರಾದರೂ, ಅವರ ಮುಖಕ್ಕೆ ಮಾತ್ರ ಮಜುಗುರವಾಗಿಲ್ಲ ಎನ್ನುತ್ತಿದೆ ಬೆಳಗಾವಿ ಜನತೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ