ಬೆಳಗಾವಿ : ಇಲ್ಲಿಯ ಶಿವಂ ಅಸೋಸಿಯೇಟ್ಸ್ ಮಾಲಿಕ ಶಿವಾನಂದ ನೀಲಣ್ಣನವರ ಅವರಿಗೆ ನ್ಯಾಯಾಲಯ ಕೊನೆಗೂ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಶಿವಂ ಅಸೋಸಿಯೇಟ್ಸ್ ಮೂಲಕ ಠೇವಣಿ ಸಂಗ್ರಹಿಸಿದ ಬಗ್ಗೆ ಅವರನ್ನು ಬಂಧಿಸಲಾಗಿತ್ತು. ಇದೀಗ ನ್ಯಾಯಾಲಯ ಅವರಿಗೆ ಷರತ್ತು ಬದ್ದ ಜಾಮೀನು ನೀಡಿರುವುದರಿಂದ ಅವರು ನಿಟ್ಟುಸಿರು ಬಿಡುವಂತಾಗಿದೆ. ಬೆಳಗಾವಿಯ ತರುಣ ನ್ಯಾಯವಾದಿಗಳು ಅವರ ಪರವಾಗಿ ವಾದ ಮಂಡಿಸಿ ಅವರಿಗೆ ಜಾಮೀನು ಮಂಜೂರು ಕೊಡಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.
