ಬೆಳಗಾವಿ: ಹುಕ್ಕೇರಿ ತಾಲೂಕು ಬೆನಕನಹೊಳಿ ಬಳಿಯ ಘಟಪ್ರಭಾ ನದಿ ಹಿನ್ನಿರಿನ ಪ್ರದೇಶದಲ್ಲಿ ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲಾಗಿರುವ ಭೀಕರ ದುರ್ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಬೆನಕನಹೊಳಿ ಗ್ರಾಮದ ಲಕ್ಷ್ಮಣ ರಾಮ ಅಂಬಲಿ (49)ಮತ್ತು ಅವರ ಮಕ್ಕಳಾದ ರಮೇಶ (14), ಯಲ್ಲಪ್ಪ (12) ಮೃತ ಪಟ್ಟವರು. ಲಕ್ಷ್ಮಣ ಹಾಗೂ ಅವರ ಮಕ್ಕಳು ಭಾನುವಾರ ಸಂಜೆ ಬೈಕ್ ನಿಲ್ಲಿಸಿ ಮೀನು ಹಿಡಿಯಲು ನದಿಯ ನೀರಿಗೆ ಇಳಿದಿದ್ದರು. ಸೋಮವಾರ ಬೆಳಗ್ಗೆ ವರೆಗೂ ಮನೆಗೆ ವಾಪಸ್ಸು ಬಾರದೇ ಇರುವುದರಿಂದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ದುರ್ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಎನ್ ಡಿ ಆರ್ ಎಫ್ ತಂಡ ಹಾಗೂ ಯಮಕನಮರಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.