Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಒಂದೇ ಮದುವೆ, ಎರಡೇ ಮಕ್ಕಳನ್ನು ಹೆರಬೇಕು ಎಂಬ ಕಾನೂನು ಜಾರಿ

ಬಾಗಲಕೋಟೆ :
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೊಳ್ಳುತ್ತದೆ. ಅದರ ಪ್ರಕಾರ ಎಲ್ಲರೂ ಒಂದೇ ಮದುವೆಯಾಗಬೇಕು, ಎರಡೇ ಮಕ್ಕಳನ್ನು ಹೆರಬೇಕು ಎಂಬ ಕಾನೂನು ಜಾರಿಯಾಗುತ್ತದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿ,
ವಕ್ಫ್ ಕಾನೂನನ್ನು ರದ್ದು ಮಾಡಿದಂತೆ ದೇಶದಲ್ಲಿ ಒಂದೇ ಕಾಮನ್ ಸಿವಿಲ್ ಕೋಡ್ ಜಾರಿಗೆ ತರುತ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ, ಮಥುರಾದಲ್ಲಿ ಕೃಷ್ಣ ಮಂದಿರವನ್ನು ಕಟ್ಟುತ್ತೇವೆ. ಈಗ ನಮ್ಮ ದೇಶಕ್ಕೆ ಒಳ್ಳೆ ಪ್ರಧಾನಿ ಸಿಕ್ಕಿದ್ದಾರೆ. ದೇಶ ಇಂದು ಬಹಳ ಸದೃಢವಾಗಿದ್ದು ಜಗತ್ತಿನ ಐದನೇ ಸದೃಢ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಮೂಲಕ ಇಂಗ್ಲೆಂಡ್ ಅನ್ನು ಹಿಂದೆ ಹಾಕಿ ನಾವು ಆರ್ಥಿಕತೆಯಲ್ಲಿ ಈಗ ಮುಂದೆ ಬಂದಿದ್ದೇವೆ ಎಂದು ಹೇಳಿದರು.

ಪಿಎಫ್ ಐ ನಿಷೇಧ ಕುರಿತು ಪ್ರತಿಕ್ರಿಯಿಸಿದ ಅವರು ಪಿಎಫ್ ಐ ನಿಷೇಧ ಆಗಿರುವ ಬಗ್ಗೆ ಕಾಂಗ್ರೆಸ್‌ಗೆ ಒಳಗಿಂದ ಒಳಗೆ ಸಂತೋಷವಾಗಿದೆ. ದುರ್ದೈವ ಎಂದರೆ ದೇಶಕ್ಕಿಂತ ಮುಸ್ಲಿಂ ಓಟುಗಳಿಗಾಗಿ ಟೀಕೆ ಮಾಡುತ್ತಿದ್ದಾರೆ. ಪಿಎಫ್ ಐನಿಂದ ಕಾಂಗ್ರೆಸ್ ಮತ ಬ್ಯಾಂಕ್ ಒಡೆದು ಹೋಗಿತ್ತು. ಕಾಂಗ್ರೆಸ್ಸಿಗೆ ಈಗ ಜೀವನ ಬಂದಂತಾಗಿದೆ. ಪಿಎಫ್ ಐ ಜತೆಗೆ ಆರೆಸ್ಸೆಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಆರೆಸ್ಸೆಸ್ ದೇಶಭಕ್ತ ಸಂಘಟನೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ದೇಶಭಕ್ತರನ್ನು ತಯಾರಿಸುವ ಕಾರ್ಖಾನೆ ಆರೆಸ್ಸೆಸ್ ಆಗಿದೆ. ಆದರೆ ಪಿಎಫ್ಐ ದೇಶದಲ್ಲಿ ಹಿಂದುಗಳ ಹತ್ಯೆಗೈಯುವುದು, ಹಿಂದೂ ನಾಯಕರ ಕೊಲೆಗೈಯುವುದು, ಲವ್ ಜಿಹಾದ್ ಕುತಂತ್ರಗಳಿಗೆ ಸಾಕ್ಷಿಯಾಗಿದೆ. ಸುಮ್ಮನೆ ನಿಷೇಧ ಹೇರುವಂತಹ ಕೆಲಸ ಮಾಡಿಲ್ಲ. ಸಾವಿರಾರು ಕೋಟಿ₹ಹಣವನ್ನು ಅರಬ್ ದೇಶಗಳಿಂದ ತಂದು ಇಲ್ಲಿ ದೇಶದ್ರೋಹಿ ಚಟುವಟಿಕೆಗಳಿಗೆ ಪಿಎಫ್ಐ ತೊಡಗಿಸಿರುವ ಬಗ್ಗೆ ದಾಖಲೆ ಸಿಕ್ಕಿದೆ ಎಂದು ಅವರು ಹೇಳಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ