Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶಿಕ್ಷಣ ಮತ್ತು ಉದ್ಯೋಗದ ಸೇತುವೆ ಇಂಟರ್ನ್ ಶಿಪ್ : ಪ್ರೊ. ಬಿ.ಎಸ್. ನಾವಿ

ಬೆಳಗಾವಿ :ವಿದ್ಯಾರ್ಥಿ ಪಡೆದ ಶಿಕ್ಷಣ ಮತ್ತು ಮುಂದೆ ಪಡೆಯಲಿರುವ ಉದ್ಯೋಗದ ಸೇತುವೆಯಾಗಿ ಇಂಟರ್ನ್ ಶಿಪ್ ಇರಲಿದೆ. ಇದರಲ್ಲಿ ಸರಿಯಾದ ಪ್ರಾಯೋಗಿಕ ತರಬೇತಿ ಪಡೆದವನಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳಿವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಶೇಷ ಅಧಿಕಾರಿ ಪ್ರೊ. ಬಿ. ಎಸ್. ನಾವಿ ಅಭಿಪ್ರಾಯಪಟ್ಟರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕೆ.ಎಲ್.ಎಸ್. ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ “ಪ್ರಧಾನಮಂತ್ರಿ ಉಷಾ (ಮೇರು) ಘಟಕ–9ರ ಅಡಿಯಲ್ಲಿ ಬುಧವಾರದಂದು ಕಾಲೇಜಿನ ಕೆ.ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇಂಟರ್ನ್‌ಶಿಪ್ ಅಥವಾ ಅಪ್ರೆಂಟಿಸ್‌ಶಿಪ್ ಆಧಾರಿತ ಪದವಿ ಕಾರ್ಯಕ್ರಮ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಿಎಂ ಉಷಾ (ಎಂಇಆರ್ ಯು) ಘಟಕದ ಉದ್ದೇಶಗಳು, ರಚನೆ ಮತ್ತು ಅನುಷ್ಠಾನ ಕಾರ್ಯತಂತ್ರಗಳ ಬಗ್ಗೆ ವಿವರಿಸಿದರು, ಇದು ರಚನಾತ್ಮಕ ಇಂಟರ್ನ್ ಶಿಪ್ ಮತ್ತು ಅಪ್ರೆಂಟಿಸ್ಶಿಪಗಳ ಮೂಲಕ ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ನಿವಾರಿಸಲಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ವೃತ್ತಿ ಪೂರ್ವ ತರಬೇತಿಯನ್ನು ಪಡೆದುಕೊಳ್ಳಬೇಕು. ಇದು ಆತ್ಮವಿಶ್ವಾಸ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇಲ್ಲಿ ಪಡೆದ ಅನುಭವದಿಂದ ವೃತ್ತಿಯಲ್ಲಿ ವಿಶೇಷ ನಾವೀನ್ಯತೆಯನ್ನು ತರಲು ಸಹಾಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೆಣುಗೋಪಾಲ ಜಾಲಿಹಾಳ ಅವರು ಇಂಟರ್ನ್ ಶಿಪ್ ಲ್ಲಿ ಸಿಗುವ ಪ್ರಾಯೋಗಿಕ ಅನುಭವ ಮತ್ತು ಕೌಶಲ್ಯಗಳು ಹೆಚ್ಚಿನ ಉದ್ಯೋಗಾವಕಾಶಗಗಳನ್ನು ಒದಗಿಸಿಕೊಡುತ್ತದೆ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿರ್ವಹಣಾ ವಿಭಾಗದ ಪ್ರೊ. ಬಸವರಾಜ ಕುಡಚಿಮಠ ಅವರು ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿ, ಪರಿಣಾಮಕಾರಿ ಇಂಟರ್ನ್‌ಶಿಪ್ ಮಾದರಿಗಳ, ಮೌಲ್ಯಮಾಪನ ಕಾರ್ಯವಿಧಾನಗಳ ಮತ್ತು ಉದ್ಯಮದ ಕಾರ್ಯತಂತ್ರಗಳ ಕುರಿತು ಒಳನೋಟಗಳನ್ನು ಒದಗಿಸಿದರು.

ಉಪನ್ಯಾಸಕ ಅಪೇಕ್ಷಾ ಬೈಲಪ್ಪಗೋಳ ನಿರೂಪಿಸಿದರು. ಮಹೇಶ ಪೂಜಾರಿ ವಂದಿಸಿದರು. ವಿದ್ಯಾರ್ಥಿನಿ ಸ್ವಾತಿ ಸುತಾರ ಪ್ರಾರ್ಥಿಸಿದರು,

ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಬೋಧಕವರ್ಗ, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಂಗ್ಲಾದೇಶದ ಹೆಸರಲ್ಲಿ ವಿದೇಶಿ ಅಡಕೆ ಅಕ್ರಮ ಆಮದು ಪತ್ತೆ ; ₹2500 ಕೋಟಿ ನಷ್ಟದ ಶಂಕೆ : ನಮ್ಮ ಬೆಳೆಗಾರರ ಮೇಲೆ ಪರಿಣಾಮ ಏನು..?ಅಮೆರಿಕ ಸೈನಿಕನನ್ನು ಕೊಂದ್ರೆ ಅಥವಾ ಸೆರೆ ಹಿಡಿದ್ರೆ 30 ಸಾವಿರ ಡಾಲರ್ ಬಹುಮಾನ : ಮಹಿಳೆಯರಿಗೆ ದುಪ್ಪಟ್ಟು ಹಣ; ಇರಾನ್‌ ಘೋಷಣೆನಾಲ್ಸಾರ್‌ ನಂತರ ಬೆಂಗಳೂರಿನ ಪ್ರತಿಷ್ಠಿತ ಕಾನೂನು ಕಾಲೇಜಿನಿಂದಲೂ ಘಟಿಕೋತ್ಸವಕ್ಕೆ ಸಿಜೆಐ ಆಹ್ವಾನಕ್ಕೆ ವಿರೋಧದೇವಸ್ಥಾನದಲ್ಲಿ ಕಾಲ್ತುಳಿತ : 7 ಮಂದಿ ಸಾವು, ಹಲವರಿಗೆ ಗಾಯವಂದೇ ಮಾತರಂಗೆ ಅಪಮಾನ ಆರೋಪ ; ಸೋನಿಯಾ ಗಾಂಧಿ ವಿರುದ್ಧ ದೂರುಒಳಚರಂಡಿ ಕಾಮಗಾರಿ ವೇಳೆ 18 ವರ್ಷದ ಕಾರ್ಮಿಕನಿಗೆ ಸಿಕ್ಕಿತು 98 ಕೋಟಿ ರೂ. ಮೌಲ್ಯದ ನಿಧಿ….!ಕರ್ನಾಟಕದ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕ ಹೆಚ್ಚಳ46 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಬಂಧನಕನ್ನಡ ಸಾಹಿತ್ಯ ಕಣಜವನ್ನು ಶ್ರೀಮಂತಗೊಳಿಸಿದವರು ಡಾ. ಸರಜೂ ಕಾಟ್ಕರ್ : ಡಾ. ಬಸವರಾಜ ಜಗಜಂಪಿಮೇಕೆ ಬೇಟೆಗೆ ಮಾಂಸದ ಅಂಗಡಿಗೆ ನುಗ್ಗಿದ ಹೆಬ್ಬಾವು; ಕುತ್ತಿಗೆಗೆ ಸುತ್ತಿಕೊಂಡು ಆಟವಾಡಿದ ಕುಡುಕ!