Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

5 ರಿಂದ 8 ರವರೆಗೆ ಡಾ. ಶಿವಬಸವ ಸ್ವಾಮೀಜಿ 134 ನೇ ಜಯಂತಿ ಮಹೋತ್ಸವ

 

ಬೆಳಗಾವಿ:
ಡಿಸೆಂಬರ್ ತಿಂಗಳ 5 ರಿಂದ 8 ರವರೆಗೆ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಕಾಯಕಯೋಗಿ, ಮಹಾಪ್ರಸಾದಿ, ಡಾ.ಶಿವಬಸವ ಮಹಾಸ್ವಾಮಿಗಳವರ 134 ನೆಯ ಜಯಂತಿ
ಮಹೋತ್ಸವ ಆಚರಿಸಲಾಗುತ್ತಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಜಿವರ
ಸನ್ನಿಧಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ನೇತೃತ್ವವನ್ನು ಬೆಳಗಾವಿ ನಾಗನೂರು
ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿಯವರು ವಹಿಸಲಿದ್ದಾರೆ.

ಬೆಳಗಾವಿ ಶಿವಬಸವ ನಗರದಲ್ಲಿರುವ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ
ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಂಗಳವಾರ ದಿನಾಂಕ 5 ರಂದು ಮುಂಜಾನೆ
9.30 ಗಂಟೆಗೆ ಶೇಗುಣಸಿ ವಿರಕ್ತಮಠದ ಮಹಾಂತ ಪ್ರಭು ಮಹಾಸ್ವಾಮೀಜಿಯವರು ಷಟಸ್ಥಲ
ಧ್ವಜಾರೋಹಣ ನೆರವೇರಿಸುವುದರೊಂದಿಗೆ ನಾಲ್ಕು ದಿನಗಳ ಕಾರ್ಯಕ್ರಮಗಳಿಗೆ ಚಾಲನೆ
ನೀಡಲಿದ್ದಾರೆ.
ಅದೇ ದಿವಸ ಸಂಜೆ 6 ಗಂಟೆಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜರುಗಲಿದ್ದು
ಸಾನಿಧ್ಯವನ್ನು ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ
ವಹಿಸಲಿದ್ದು ಅಧ್ಯಕ್ಷತೆಯನ್ನು ಹುಕ್ಕೇರಿ ವಿರಕ್ತಮಠದ ಶ್ರೀ.ಶಿವಬಸವ
ಮಹಾಸ್ವಾಮೀಜಿ ವಹಿಸಲಿದ್ದಾರೆ. ಸಮ್ಮುಖದಲ್ಲಿ ಶಿವಪುರ ಕೆ.ಎಚ್. ನ
ಶಿವಲಿಂಗೇಶ್ವರ ಮಠದ ಶ್ರೀ.ಅಭಿನವ ಶಿವಲಿಂಗ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.
ಮುದುಗಲ್ ತಿಮ್ಮಾಪೂರದ ಕಲ್ಯಾಣಾಶ್ರಮದ ಶ್ರೀ. ಮಹಾಂತ ಸ್ವಾಮೀಜಿ ಅವರಿಗೆ ಗೌರವ
ಸನ್ಮಾನ ನೀಡಲಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ
ವಿಜಯಪುರದ ಶ್ರೀ ಫ.ಗು. ಸಿದ್ದಾಪುರ, ಇಳಕಲ್ಲದ ಡಾ. ಶಂಭು ಬಳಿಗಾರ, ಎಂ.ಕೆ.
ಹುಬ್ಬಳ್ಳಿಯ ಡಾ.ಬಾಳೇಶ ಭಜಂತ್ರಿ ಅವರನ್ನು ಸನ್ಮಾನಿಸಲಾಗುತ್ತಿದೆ.

ಶ್ರೀಮಠದಿಂದ ಕೊಡ ಮಾಡುವ "ಕನ್ನಡ ನುಡಿಶ್ರೀ" ಪ್ರಶಸ್ತಿಯನ್ನು ನಿಪ್ಪಾಣಿಯ
ಮಿಥುನ್ ಅಂಕಲಿ , ಅಥಣಿಯ ಚನ್ನಯ್ಯ ಹಿಟ್ನಾಳಮಠ, ಬೆಳಗಾವಿಯ ಮಹಬೂಬ್ ಮಕಾಂದರ್, ಸಂಕ ಗ್ರಾಮದ ಆರ್. ಜಿ. ಬಿರಾದಾರ ಅವರಿಗೆ
ಪ್ರದಾನ ಮಾಡಲಾಗುವುದು.

ಎರಡನೇ ದಿನವಾದ ಡಿ.6 ಬುಧವಾರದಂದು ಸಂಜೆ 6 ಗಂಟೆಗೆ ಸಿದ್ದರಾಮೇಶ್ವರ ಶಿಕ್ಷಣ
ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಆತ್ಮ ಸ್ವಾಸ್ಥ್ಯ ಶ್ರೀ ಪ್ರಶಸ್ತಿ
ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಸಾನ್ನಿಧ್ಯವನ್ನು ಅರಭಾವಿ- ಕಡೋಲಿಯ
ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು
ವಹಿಸಲಿದ್ದು, ಸಮಾರಂಭದ ನೇತೃತ್ವವನ್ನು ಅಥಣಿಯ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ
ಮಹಾಸ್ವಾಮಿಗಳು ವಹಿಸಲಿದ್ದಾರೆ. ರಾವೂರ್ ವಿರಕ್ತ ಮಠದ ಶ್ರೀ
ಸಿದ್ದಲಿಂಗ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ. ಅಧ್ಯಕ್ಷತೆಯನ್ನು ನಾಗನೂರು
ರುದ್ರಾಕ್ಷಿ ಮಠದ ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ
ರೊಟ್ಟಿ ವಹಿಸಲಿದ್ದಾರೆ.

ಮುಂಬೈನ ಆಧ್ಯಾತ್ಮ ಕೇಂದ್ರ ಭಕ್ತಿ ವೇದಾಂತ ಆಸ್ಪತ್ರೆಯ ಪ್ರಾಧ್ಯಾಪಕಿ
ಡಾ.ಕೋಮಲ್ ದಲಾಲ ಅವರಿಗೆ "ಆತ್ಮ ಸ್ವಾಸ್ಥ್ಯ ಶ್ರೀ" ಪ್ರಶಸ್ತಿಯನ್ನು ನೀಡಿ
ಗೌರವಿಸಲಾಗುವುದು.

ಶ್ರೀಮಠದಿಂದ ಕೊಡ ಮಾಡುವ "ಪ್ರಸಾದ ಶ್ರೀ ಗೌರವ"
ಪ್ರಶಸ್ತಿಯನ್ನು ಬೆಳಗಾವಿಯ ವೈ .ಎನ್. ಶಿಂತ್ರೆ , ಶೇಗುಣಸಶಿಯ
ಮಲ್ಲಪ್ಪ ಬಸಗೌಡ ಗೌಡಪ್ಪನವರ್, ಬೆಳಗಾವಿಯ ಬಸಲಿಂಗಪ್ಪ ರುದ್ರಪ್ಪ ಮೆಳವಂಕಿ,
ಬೆಳಗಾವಿಯ ಜಿ.ಎನ್. ಪಾಟೀಲ್ ಇವರಿಗೆ ನೀಡಿ ಗೌರವಿಸಲಾಗುತ್ತಿದೆ.
ಮೂರನೇ ದಿನವಾದ ಗುರುವಾರ ಡಿ. 7ರಂದು 1969 ರಲ್ಲಿ ಲಿಂಗೈಕ್ಯ ಡಾ. ಶಿವಬಸವ
ಮಹಾಸ್ವಾಮಿಗಳವರಿಂದ ಸ್ಥಾಪಿತಗೊಂಡ ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಹಾಗೂ
ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.

 

ನಿವೃತ್ತ ಐಎಎಸ್ ಅಧಿಕಾರಿ ಎಸ್. ಎಂ.ಜಾಮದಾರ ಉದ್ಘಾಟಿಸಲಿದ್ದಾರೆ. ಸಾನ್ನಿಧ್ಯವನ್ನು
ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು
ವಹಿಸಲಿದ್ದು, ಅಧ್ಯಕ್ಷತೆಯನ್ನು ಹಂದಿಗುಂದ ವಿರಕ್ತಮಠದ ಶ್ರೀ ಶಿವಾನಂದ
ಮಹಾಸ್ವಾಮಿಗಳು ವಹಿಸಲಿದ್ದು, ನೇತೃತ್ವವನ್ನು ಚನ್ನಮ್ಮನ ಕಿತ್ತೂರಿನ ರಾಜಗುರು
ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಪಿಜಿ ಹುಣಶ್ಯಾಳದ ಸಿದ್ಧಲಿಂಗ ಕೈವಲ್ಯಾಶ್ರಮದ ಶ್ರೀ ನಿಜಗುಣ
ದೇವರಿಗೆ ಷಷ್ಟಿಪೂರ್ತಿ ಅಭಿನಂದನೆ ಸಲ್ಲಿಸಲಾಗುತ್ತಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ.ಗುಡಸಿ ಸ್ಮರಣ ಸಂಚಿಕೆಯನ್ನು
ಲೋಕಾರ್ಪಣೆಗೊಳಿಸಲಿದ್ದಾರೆ, ವಿಧಾನ ಪರಿಷತ್ ಸದಸ್ಯ
ಶರಣಗೌಡ ಬಯ್ಯಾಪುರ, ಬಾಗಲಕೋಟೆಯ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ
ಶಶಿಧರ ಬಗಲಿ, ಪುಣೆಯ ಉದ್ಯಮಿ ಅಣ್ಣಾರಾಯ ಬಿರಾದಾರ, ವಿಜಯಪುರದ
ಕೈಗಾರಿಕಾ ಇಲಾಖೆ ವಿಶೇಷ ಕರ್ತವ್ಯಾಧಿಕಾರಿ ಮಹಾಂತೇಶ ಬಿರಾದಾರ, ಬೆಳಗಾವಿಯ
ಹಿರಿಯ ನ್ಯಾಯವಾದಿ ದಿನೇಶ ಪಾಟೀಲ, ಶಿವಾನಂದ
ಮೂಲಿಮನಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಮಲ್ಲನಗೌಡ ಪಾಟೀಲ,
ಮುಂಡರಗಿಯ ಎಇಇ ಅಶೋಕ ಕಣವಿ ಮತ್ತು ವೈದ್ಯ ಡಾ.ಈಶ್ವರ ಕಣಬೂರ
ಆಗಮಿಸಲಿದ್ದಾರೆ.

ನಾಲ್ಕನೆಯ ದಿನವಾದ ಶುಕ್ರವಾರ ಡಿ.8 ರಂದು ಮುಂಜಾನೆ 10.30 ಗಂಟೆಗೆ ಲಿಂಗೈಕ್ಯ
ಡಾ.ಶಿವಬಸವ ಮಹಾಸ್ವಾಮಿಗಳವರ 134 ನೇ ಜಯಂತಿ ಮಹೋತ್ಸವ ಮತ್ತು ಸೇವಾ ರತ್ನ ಪ್ರಶಸ್ತಿ
ಪ್ರದಾನ ಸಮಾರಂಭ, ಶ್ರೀಸಿದ್ದರಾಮೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ
ಹಾಗೂ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ವಿಭಾಗದ ನೂತನ ಕಟ್ಟಡದ
ಉದ್ಘಾಟನೆ ನಡೆಯಲಿದೆ.

ಸಾನ್ನಿಧ್ಯವನ್ನು ಗದುಗಿನ ತೋಟದಾರ್ಯ ಮಠದ ಜಗದ್ಗುರು ಡಾ.ತೋಂಟದ
ಸಿದ್ದರಾಮ ಮಹಾಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ಬೈಲೂರು ನಿಷ್ಕಲ ಮಂಟಪದ
ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ವಹಿಸಲಿದ್ದಾರೆ, ನೇತೃತ್ವವನ್ನು ಕಲಬುರ್ಗಿ
ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ವಹಿಸಲಿದ್ದು ಸಮ್ಮುಖದಲ್ಲಿ ಕಲಬುರ್ಗಿ
ಗದ್ದುಗೆ ಮಠದ ಶ್ರೀ.ಚರಲಿಂಗ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.
ಶ್ರೀ ಮಠದಿಂದ ಕೊಡ ಮಾಡುವ ಸೇವಾರತ್ನ ಪ್ರಶಸ್ತಿಯನ್ನು ಗದುಗಿನ ತೋಂಟದಾರ್ಯ
ವಿದ್ಯಾಪೀಠದ ಆಡಳಿತಾಧಿಕಾರಿ ಸಿದ್ದಲಿಂಗ ಪಟ್ಟಣಶೆಟ್ಟಿ, ಗೋಕಾಕದ ವಿಶ್ರಾಂತ
ಪ್ರಾಧ್ಯಾಪಕ ಸಿ. ಕೆ ನಾವಲಗಿ , ಬೈಲಹೊಂಗಲದ ಮುರಿಗೆಪ್ಪ ಜಿಗಿಜಿನ್ನಿ,
ಘಟಪ್ರಭಾದ ಜಿ.ಎ. ಪತ್ತಾರ , ಗದುಗಿನ ಅನರ್ಘ್ಯ ಸಂಗೀತ ಪಾಠಶಾಲೆಯ
ವನಮಾಲಾ ಮಾನಶೆಟ್ಟಿ, ಬೆಳಗಾವಿಯ ಸಿ .ಎಂ. ಬೂದಿಹಾಳ ಇವರಿಗೆ ನೀಡಿ
ಗೌರವಿಸಲಾಗುವುದು. ಹಲವು ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ