Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿಜ್ಞಾನ-ತಂತ್ರಜ್ಞಾನ ಬಿಟ್ಟು ಬದುಕಲು ಸಾಧ್ಯವಿಲ್ಲ - ಡಾ. ಪ್ರವೀಣ ಎಚ್. ಎಸ್

 

ಬೆಳಗಾವಿ :
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರಕಾರ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ನವ ದೆಹಲಿ ಇವರಿಂದ ಪ್ರಾಯೋಜಿತ ಡಿಜಿಟಲ್ ಸಾಮಾಜಿಕ ಮಾಧ್ಯಮಗಳ ಮೂಲಕ ವಿಜ್ಞಾನ ಸಂವಹನ ಕಾರ್ಯಾಗಾರವು ಬಿ.ವಿ.ವಿ. ಶಿಕ್ಷಣ ಮಹಾ ವಿದ್ಯಾಲಯ ಬಾಗಲಕೋಟೆ ಮತ್ತು ಸೇವಕ ಬೆಳಗಾವಿ ಇವರ ಆಶ್ರಯದಲ್ಲಿ ಬಾಗಲಕೋಟದ ಬಿ. ವಿ. ವಿ. ಶಿಕ್ಷಣ ಮಹಾವಿದ್ಯಾಲಯದ ಸಭಾ ಭವನದಲ್ಲಿ ಇಂದು ಉದ್ಘಾಟನೆಯಾಯಿತು.

ಸಸಿಗೆ ನೀರು ಎರೆಯುವ ಮೂಲಕ ಡಾ. ಪ್ರವೀಣ ಡಿ.ಎಸ್ ಉದ್ಘಾಟಿಸಿದ ಅವರು "ಸಾಮಾಜಿಕ ಮಾಧ್ಯಮದ ಮೂಲಕ ನಾವು ಇಂದು ಬದುಕು ಸಾಗಿಸುತ್ತಿದ್ದೇವೆ. ಇಂದಿನ ಕಾಲದಲ್ಲಿ ತಂತ್ರಜ್ಞಾನವನ್ನು ಬಿಟ್ಟು ಜೀವನ ಸಾಗಿಸುವುದು ಅಸಾಧ್ಯವಾಗಿದೆ. ಶಿಕ್ಷಕರಾದವರು ಸಾಮಾಜಿಕ ಮಾಧ್ಯಮದವನ್ನು ವಿವಿಧ ರೀತಿಯಲ್ಲಿ ಹೇಗೆ ಬಳಸಬಹುದು ಎಂಬುವುದನ್ನು ಕಲಿತುಕೊಳ್ಳಬೇಕು. ಆನ್ಲೈನ್ ಮೂಲಕ ವಿವಿಧ ಕೋರ್ಸ್ ಗಳನ್ನು ಉಚಿತವಾಗಿ ಕಲಿತುಕೊಳ್ಳಬೇಕು. ಉದಾಹರಣೆಗೆ MOOCS ಮತ್ತು ಸ್ವಯಂ ಉಚಿತ ಆನ್ಲೈನ್ ಕೋರ್ಸ್ ಗಳು. ತಂತ್ರಜ್ಞಾನ ಬದಲಾದಂತೆ ನಾವು ಅವುಗಳನ್ನು ಕಲಿತುಕೊಂಡು ಬದುಕುತ್ತಾ ಹೋಗಬೇಕು. ಮುಂದೆ ಶಿಕ್ಷಕರು ಧ್ವನಿ ಮತ್ತು ಛಾಯಾಗ್ರಹಣದ ಮೂಲಕ ಶಿಕ್ಷಣ ಹೇಗೆ ಶಿಕ್ಷಣ ನೀಡಬಹುದು ಎಂಬುದನ್ನು ಪ್ರಾತ್ಯಕ್ಷಿಕವಾಗಿ ಈ ಕಾರ್ಯಾಗಾರದಲ್ಲಿ ಕಲಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ. ರಾಜೇಶ್ವರಿ ತೆಗ್ಗಿ " ಯಾವುದೇ ವಿಷಯ ಕಲಿಯುವಾಗ ಮತ್ತು ಕೆಲಸ ಮಾಡುವಾಗ ನಮ್ಮ ತಲೆ, ಹೃದಯ ಮತ್ತು ಕೈಗಳನ್ನು ಸರಿಯಾಗಿ ಇಟ್ಟುಕೊಂಡು ಕಲಿತದ್ದೆ ಆದರೆ ಮತ್ತು ಕೆಲಸ ಮಾಡಿದ್ದೆ ಆದರೆ ನಾವು ಇಂದಿನ ತಂತ್ರಜ್ಞಾನ ಯುಗದಲ್ಲಿ ಯಶಸ್ವಿಯಾಗಬಹುದು. ಸಮೂಹ ಮಾಧ್ಯಮಗಳು ಇಲ್ಲದೇ ಇದ್ದರೆ ಒಂದು ಕ್ಷಣ ಕೂಡ ಇರಲು ಸಾಧ್ಯವಿಲ್ಲ. ಅತ್ಯುತ್ತಮ ಶಿಕ್ಷಕರು ಆಗ ಬೇಕಾದರೆ ಈ ಕಾರ್ಯಾಗಾರದಲ್ಲಿ ಕಲಿಸುವ ಡಿಜಿಟಲ್ ಸಾಮಾಜಿಕ ಮಾಧ್ಯಮಗಳನ್ನು ಶಿಕ್ಷಕರ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಕಾರ್ಯಾಗಾರದಲ್ಲಿ ಕಲಿತಂತಹ ವಿಷಯಗಳನ್ನು ಸರಿಯಾಗಿ ಅನುಷ್ಠಾನ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಭರ್ಮಾ ಗುಡುಂಕೇರಿ, ಸಂಯೋಜಕರು ಸೇವಕ ಬೆಳಗಾವಿ ಮಾತನಾಡಿದರು. ಸೇವಕ ಸಂಸ್ಥೆ ಬೆಳಗಾವಿ ಬೆಳೆದು ಬಂದ ಹಾದಿ, ಮಾಡುತ್ತಿರುವ ಕಾರ್ಯಚಟುವಟಿಕೆಗಳು ಹಾಗೂ ಈ ಕಾರ್ಯಾಗಾರದ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಈ ಕಾರ್ಯಾಗಾರದಲ್ಲಿ ಅತಿಥಿಗಳಾಗಿ ರಮೇಶ ಯಮನ ಶೆಟ್ಟಿ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳು ಆಗಿ ಡಾ. ಪ್ರವೀಣ ಡಿ‌ . ಎಸ್, ವಿನೋದ ರಾವ್ ಮತ್ತು ರಮ್ಯಾ ಎಚ್. ಎಸ್ ಇವರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಸುಮಿತ್ರಾ ಕುಂಬಾರ ನಿರೂಪಿಸಿದರು. ರಮೇಶ ಯಮನಶೆಟ್ಟಿ ಉಪನ್ಯಾಸಕರು ಬಿ.ವಿ.ವಿ. ಶಿಕ್ಷಣ ಮಹಾವಿದ್ಯಾಲಯ ಸ್ವಾಗತಿಸಿದರು. ಆರ್ ಕೆ. ಕುಲಕರ್ಣಿ ವಂದಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ