Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಬಿ.ಎಸ್.ಗವಿಮಠರಿಗೆ ಡಾ.ಪ್ರಭಾಕರ ಕೋರೆ ಅಭಿನಂದನೆ

ಬೆಳಗಾವಿ : ನಾಡಿನ ಹಿರಿಯ ಸಾಹಿತಿ, ಕೆಎಲ್‌ಇ ಇತಿಹಾಸಕಾರ, ಕೆಎಲ್‌ಇ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಪ್ರಾ.ಬಿ.ಎಸ್.ಗವಿಮಠ ಅವರು ಗಡಿನಾಡ ಚೇತನ ಪ್ರಶಸ್ತಿಗೆ ಪುರಸ್ಕೃತರಾಗಿರುವುದಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರು ಹಾರ್ದಿಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಅವರಿಗೆ ಸರ್ಕಾರ ನೀಡುವ ‘ಗಡಿನಾಡ ಚೇತನ ಪ್ರಶಸ್ತಿ’ಗೆ ಭಾಜನರಾಗಿರುವುದು ಸಮಸ್ತ ಕೆಎಲ್‌ಇ ಸಂಸ್ಥೆಗೆ ಅಭಿಮಾನವನ್ನುಂಟುಮಾಡಿದೆ. ಗಡಿಭಾಗದಲ್ಲಿ ಕೆಎಲ್‌ಇ ಸಂಸ್ಥೆ ಮಾಡಿರುವ ಕನ್ನಡ ಸೇವೆಗೆ ದೊರೆತ ಗೌರವವೆನಿಸಿದೆ. ಕನ್ನಡಿಗರಲ್ಲಿ ನಾಡುನುಡಿಗಳ ಬಗ್ಗೆ ಪ್ರಜ್ಞೆ ಹುಟ್ಟುಹಾಕಿದ ಕವಿ ಡಾ. ಡಿ.ಎಸ್.ಕರ್ಕಿ, ಎಸ್.ಡಿ.ಇಂಚಲ, ಡಾ.ಬಿ.ಎ.ಸನದಿ, ಬ.ಗಂ.ತುರಮರಿ ಮುಂತಾದ ದಿಗ್ಗಜರ ಪರಂಪರೆಯಲ್ಲಿ ಬೆಳೆದು ಬಂದವರು ಬಿ.ಎಸ್.ಗವಿಮಠರು. ಅವರ ವಾರಸುದಾರರಂತೆ, ಬೆಳಗಾವಿಯಲ್ಲಿ ನೆಲೆನಿಂತು ಕಳೆದ 50 ವರ್ಷಗಳಿಗೂ ಅಧಿಕ ಕಾಲ ಸಾಹಿತ್ಯ ಸೃಷ್ಟಿ ಮಾಡಿ 50 ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ರಂಗಭೂಮಿಯ ಅಭಿವೃದ್ಧಿಗೆ ನಾಟಕ ಅಕೆಡಮಿ ಸದಸ್ಯರಾಗಿ ಮತ್ತು ರಂಗಭೂಮಿ ಸಹಕಾರಿ ಸಂಘದ ನಿರ್ದೇಶಕರಾಗಿ ಶ್ರಮಿಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಪ್ರಸಾರಾಂಗದ ನಿರ್ದೇಶಕರಾಗಿ, ವಾರ್ತಾಪತ್ರಿಕೆಯ ಸಂಪಾದಕರಾಗಿ ಸೇವೆ ನೀಡಿದ್ದಾರೆ. ವಚನ ಪಿತಾಮಹ ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಬೆಳಕಿಗೆ ತಂದಂತೆ ಪ್ರತಿಷ್ಠಿತ ಕೆಎಲ್‌ಇ ಸಂಸ್ಥೆಯ ನೂರು ವರ್ಷಗಳ ಇತಿಹಾಸವನ್ನು ರಚಿಸಿ ಬೆಳಕಿಗೆ ತಂದಿದ್ದಾರೆ. ಏಕಕಾಲಕ್ಕೆ ನೂರು ಪುಸ್ತಕಗಳ ಪ್ರಕಟಣೆಯ ಕೀರ್ತಿಗೆ ಭಾಜನರಾದ ಗವಿಮಠರ ಯೋಗದಾನ ಮೌಲಿಕವೆನಿಸಿದೆ. ಬೆಳಗಾವಿಯಲ್ಲಿ 1980 ರಲ್ಲಿ ಅಖಿಲ ಭಾರತ 52 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಂಟಿ ಕಾರ್ಯದರ್ಶಿಯಾಗಿ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಹಳೆಯ ಕನ್ನಡ ಸಾಹಿತ್ಯ ಭವನ ಮತ್ತು ನೂತನ ಕನ್ನಡ ಭವನಗಳ ನಿರ‍್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಗವಿಮಠರು ಬೆಳಗಾವಿಯ ಹತ್ತು ಹಲವಾರು ಸಂಘ-ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಿ ಆದರ್ಶಪ್ರಾಯರಾಗಿದ್ದಾರೆ.

ನೇರ ನಡೆನುಡಿಯ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಆಡಳಿತಗಾರರಾಗಿ, ಶಿಕ್ಷಣ ತಜ್ಞರಾಗಿ, ಲೇಖಕರಾಗಿ, ಕವಿಗಳಾಗಿ ಗುರುತಿಸಿಕೊಂಡಿರುವ 77 ರ ಪ್ರಾಯದ ಗವಿಮಠರು ಇಂದಿಗೂ ಕ್ರಿಯಾಶೀಲರಾಗಿ, ಸಾರಸ್ವತಲೋಕದಲ್ಲಿ ಹಿರಿಯ ಸಾಹಿತಿಯಾಗಿ, ಕನ್ನಡ ನಾಡು ನುಡಿಗಳ ಸೇವೆ ಮಾಡುತ್ತಿದ್ದಾರೆ. ಅವರಿಗೆ ರಾಜ್ಯ ಸರ್ಕಾರದ “ಗಡಿನಾಡ ಚೇತನ” ಬಂದಿರುವದು ಅರ್ಹತೆಗೆ ಸಂದ ಪುರಸ್ಕಾರವಾಗಿದೆ. ಸರಿಯಾದ ವ್ಯಕ್ತಿಗೆ ಪ್ರಶಸ್ತಿ ಬಂದಿರುವುದಕ್ಕೆ ಸಾರಸ್ವತ ಲೋಕ ಹೆಮ್ಮೆ ಪಡುತ್ತಿದೆ ಎಂದು ಅವರಿಗೆ ಸಮಸ್ತ ಕೆಎಲ್‌ಇ ಸಂಸ್ಥೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ರಾ. ಬಿ.ಎಸ್.ಗವಿಮಠರಿಗೆ ಬೆಳಗಾವಿ ಸಾಹಿತ್ಯ ವಲಯದಿಂದ ಅಭಿನಂದನೆ ಮಹಾಪೂರ:
ಪ್ರಾ.ಬಿ.ಎಸ್.ಗವಿಮಠರು ಇದೇ ತಿಂಗಳು ಸೆಪ್ಟೆಂಬರ್ 30 ರಂದು ಕರ್ನಾಟಕ ಸರ್ಕಾರದ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ನೀಡುವ ‘ಗಡಿಚೇತನ ಪ್ರಶಸ್ತಿ’ ಪ್ರದಾನ ಸಮಾರಂಭವು ಮಹಾರಾಷ್ಟ್ರದ ಜತ್ತ ತಾಲೂಕಿನ ಮಹಾಕ್ಷೇತ್ರ ದಾನಮ್ಮದೇವಿಯ ಪುಣ್ಯನೆಲೆ ಗುಡ್ಡಾಪುರದಲ್ಲಿ ಜರುಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಗಡಿ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಡಾ. ಸಿ.ಸೋಮಶೇಖರ, ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ವಿಶ್ರಾಂತ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಹಿರಿಯ ಸಾಹಿತಿಗಳಾದ ಡಾ.ಸರಜೂ ಕಾಟ್ಕರ, ಡಾ.ಬಸವರಾಜ ಜಗಜಂಪಿ, ಡಾ.ರಾಮಕೃಷ್ಣ ಮರಾಠೆ, ಡಾ.ಡಿ.ಎಸ್.ಚೌಗಲೆ, ಡಾ.ವಿ.ಎಸ್.ಮಾಳಿ, ಡಾ.ಗುರುದೇವಿ ಹುಲೆಪ್ಪನವರಮಠ, ಡಾ.ವೈ.ಬಿ.ಹಿಮ್ಮಡಿ, ಡಾ.ಮಹೇಶ ಗುರನಗೌಡರ, ಡಾ.ಪಿ.ಜಿ.ಕೆಂಪಣ್ಣವರ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ಎಲ್.ಎಸ್.ಶಾಸ್ತ್ರಿ, ಡಾ.ಎಸ್.ಎಸ್.ಅಂಗಡಿ, ಏಣಗಿ ಸುಭಾಷ, ಪ್ರೊ.ಎಂ.ಎಸ್.ಇಂಚಲ, ಪ್ರೊ.ಎಲ್.ವ್ಹಿ.ಪಾಟೀಲ, ಪ್ರಕಾಶ ಗಿರಿಮಲ್ಲನವರ, ನೀಲಗಂಗಾ ಚರಂತಿಮಠ ಮೊದಲಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ