ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ, ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ ಅವರಿಗೆ ಬೆಳಗಾವಿ ಕೆಎಲ್‌ಇ ಕಾಹೆರ್ ಹಾಗೂ ಹುಬ್ಬಳ್ಳಿ ತಾಂತ್ರಿಕ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಪ್ರಭಾಕರ ಕೋರೆಯವರು ಬೆಂಗಳೂರಿನಲ್ಲಿ ಭೇಟಿಯಾಗಿ ಹಾರ್ದಿಕವಾಗಿ ಅಭಿನಂದಿಸಿದರು. ನಿಮ್ಮ ಆಡಳಿತದ ಸಂದರ್ಭದಲ್ಲಿ ರಾಜ್ಯವು ಸರ್ವಾಂಗೀಣ ಅಭಿವೃದ್ಧಿ ಕಾಣಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಮಾಜಿ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿಯವರು ಜೊತೆಗಿದ್ದರು.
