Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

೭೭ನೇ ಹುಟ್ಟುಹಬ್ಬದ ನಿಮಿತ್ತ ದೇವರ ದರ್ಶನ ಪಡೆದ ಡಾ.ಪ್ರಭಾಕರ ಕೋರೆ

ಜನ ಜೀವಾಳ ಜಾಲ ಬೆಳಗಾವಿ: ೭೭ನೇ ಜನ್ಮ ದಿನದ ನಿಮಿತ್ತ ಡಾ: ಪ್ರಭಾಕರ ಕೋರೆ ಅವರು ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ಔಂದಾ ಶ್ರೀ ನಾಗನಾಥ ಜ್ಯೋತಿರ್ಲಿಂಗ ಹಾಗೂ ಭೀಡ ಜಿಲ್ಲೆಯ ಪರಳಿ ಶ್ರೀ ವೈಜನಾಥ ಜ್ಯೋತಿರ್ಲಿಂಗ ರುದ್ರಾಭಿಷೇಕ ನೆರವೇರಿಸಿ ಕುಟುಂಬ ಸಮೇತ ದರ್ಶನ ಪಡೆದ ಕ್ಷಣ. ಶ್ರೀಮತಿ ಆಶಾ ಕೋರೆ, ಡಾ.ಪ್ರೀತಿ ಕೋರೆ ದೊಡವಾಡ ಅವರನ್ನು ಕಾಣಬಹುದು. ಇದೇ ಸಂದರ್ಭದಲ್ಲಿ ಎರಡು ದೇವಾಲಯಗಳ ಟ್ರಸ್ಟ್ ಕಮೀಟಿಯ ಸದಸ್ಯರು ಡಾ.ಪ್ರಭಾಕರ ಕೋರೆಯವರನ್ನು ಸತ್ಕರಿಸಿ ಶುಭಕೋರಿದರು.

*Lingaraj college*
ಲಿಂಗರಾಜ ಕಾಲೇಜಿನ ವತಿಯಿಂದ ವನ ಮಹೋತ್ಸವ ಹಾಗೂ ಹಣ್ಣುಹಂಪಲ ವಿತರಣೆ
ಲಿಂಗರಾಜ ಕಾಲೇಜಿನ ವಿದ್ಯಾರ್ಥಿಗಳು ಡಾ.ಪ್ರಭಾಕರ ಕೋರೆಯವರ ೭೭ನೇ ಹುಟ್ಟಹಬ್ಬದ ನಿಮಿತ್ತವಾಗಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದರು. ಅಂತೆಯೆ ಬೆಳಗಾವಿ ಸ್ವಾಮೀ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕರ ಕೇಂದ್ರಕ್ಕೆ ಭೇಟಿ ನೀಡಿ ಹಣ್ಣುಹಂಪಲ ಹಾಗೂ ಸಿಹಿ ತಿಂಡಿಯನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿಯವರು ಡಾ.ಕೋರೆಯವರದು ಅನನ್ಯ ಸಾಧನೆ. ಸಾಮಾಜಿಕವಾಗಿ ಅವರು ನೀಡಿರುವ ಕೊಡುಗೆ ಬೆಲೆಕಟ್ಟಲಾರದ್ದು. ಅವರು ಶತಾಯುಷಿಗಳಾಗಿ ಇನ್ನಷ್ಟು ಸೇವೆಗಳನ್ನು ನೀಡಲೆಂದು ಹೇಳಿದರು. ಪದವಿಪೂರ್ವ ಪ್ರಾ.ಗಿರಿಜಾ ಹಿರೇಮಠ, ಡಾ.ಜಿ.ಎನ್.ಶೀಲಿ, ಡಾ.ಎಚ್.ಎಸ್.ಚೆನ್ನಪ್ಪಗೋಳ, ಡಾ.ಸಿ.ರಾಮರಾವ್, ಡಾ.ನಂದಿನಿ, ಡಾ.ಮಲ್ಲಣ್ಣ, ಡಾ.ರಾಘವೇಂದ್ರ ಹಜಗೋಳ್ಕರ್ ಮೊದಲಾದವರು ಉಪಸ್ಥಿತರಿದ್ದರು.

 

*BVB Law College*
ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ
ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ರಕ್ತಭಂಡಾರಕ್ಕೆ ರಕ್ತದಾನವನ್ನು ಮಾಡುವುದರ ಮೂಲಕ ವಿಶಿಷ್ಠವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಜ್ಯೋತಿ ಹಿರೇಮಠ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಆಲಪ್ಪನವರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆ: ಪ್ರಧಾನಿ ಮೋದಿಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ? ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಿ ಎಲ್ ಒ ಗಳ ವಿರುದ್ಧ ಕ್ರಮಕ್ಕೆ ಅಗ್ರಹಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ?ದೇಶಾದ್ಯಂತ ಆವರಿಸಿದ ಮೋಡಗಳು ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ; ಮುಂಗಾರು ಬಲಗೊಳ್ಳುತ್ತಿದೆ ಎಂದ ಹವಾಮಾನ ಇಲಾಖೆನೀಟ್‌ ಹೋರಾಟ : ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಭರವಸೆ ನೀಡಿದ್ರೆ ಉಪವಾಸ ಅಂತ್ಯ ; ಕೇಂದ್ರಕ್ಕೆ ವಾಂಗ್ಚುಕ್ ಷರತ್ತುಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆ