Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವೈದ್ಯಕೀಯ ವೃತ್ತಿ ಸಮಾಜಮುಖಿಯಾಗಿರಬೇಕು: ಡಾ. ಬಸವರಾಜ ಜಗಜಂಪಿ

 

ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆದ ಪ್ರತಿಭಾ ಅಂತ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಅರ್ಪಣೆ

ಬೆಳಗಾವಿ :
ವೈದ್ಯಕೀಯ ವೃತ್ತಿಯು ಒಂದು ಪವಿತ್ರವಾದ ಸೇವೆಯಾಗಿದೆ. ಅದನ್ನು ಸಮಾಜಮುಖಿಯಾಗಿ ಅರ್ಪಣೆ ಮಾಡಿದಾಗ ಅದರ ಪವಿತ್ರ್ಯಾತೆ ಹೆಚ್ಚಾಗುತ್ತದೆ ಎಂದು ಖ್ಯಾತ ಸಾಹಿತಿ ಡಾ. ಬಸವರಾಜ ಜಗಜಂಪಿ ಹೇಳಿದರು.
ಬಸವನ ಕುಡಚಿ ದೇವರಾಜ ಅರಸು ಕಾಲೋನಿಯಲ್ಲಿ ಶ್ರೀ ಶಿವಬಸವೇಶ್ವರ ಟ್ರಸ್ಟ್ ಲಿಂಗೈಕ್ಯ ಚಿನ್ನಮ್ಮ ಹಿರೇಮಠ ವೃದ್ರಾಶ್ರಮದಲ್ಲಿ ಡಾ. ರಾಮಣ್ಣವರ ಟ್ರಸ್ಟ್, ಮಹಾಂತ ಟ್ರೇಡರ್ಸ್, ಜನನಿ ಟ್ರಸ್ಟ್ ಬೈಲಹೊಂಗಲ ಇವರ ಸಂಯುಕ್ತ ಆಶ್ರಯದಲ್ಲಿ ನೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ವೈದ್ಯಕೀಯ ಪ್ರವೇಶವನ್ನು ಪಡೆದ ಬೈಲಹೊಂಗಲ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಮವಸ್ತ್ರ ಮತ್ತು ಪುಸ್ತಕ ದಾಸೋಹ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ತಂದೆ- ತಾಯಿಯ ಕನಸನ್ನು ನೀವು ನನಸಾಗಿದ್ದೀರಿ. ಈ ಭರವಸೆ ಹೆಜ್ಜೆಗಳನ್ನು ಮುಂದಿನ ವೈದ್ಯಕೀಯ ಶಿಕ್ಷಣದಲ್ಲಿಯೂ ಮುಂದುವರಿಸಬೇಕು. ವೈದ್ಯರಾದರೆ ಮಾತ್ರ ಸಾಲುವುದಿಲ್ಲ. ಮಾನವೀಯ ಮೌಲ್ಯಗಳನ್ನು ಕೂಡ ಹೊಂದುವುದು ಅಷ್ಟೇ ಮಹತ್ವಪೂರ್ಣವಾದದ್ದು. ಜನಸಾಮಾನ್ಯರ ಸೇವೆ ಮಾಡುವುದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಆದರ್ಶ ವೈದ್ಯರ ಬದುಕನ್ನು ಅರಿಯಬೇಕು. ಗುರು ಹಿರಿಯರ ಮಾರ್ಗದರ್ಶನ ಪಡೆಯಬೇಕು. ಒಬ್ಬ ಹೃದಯವಂತ ವೈದ್ಯ ಸಮಾಜಕ್ಕೆ ಸಂಜೀವಿನಿ ಆಗಿರುತ್ತಾನೆ ಎಂದು ಹೇಳಿದರು.
ಖ್ಯಾತ ಸ್ತ್ರೀರೋಗ ತಜ್ಞ ಡಾ. ದತ್ತಾತ್ರೇಯ ಬಿಜರೆ ಮಾತನಾಡಿ, ವೈದ್ಯಕೀಯ ಸೀಟು ದೊರೆತ ಮಾತ್ರಕ್ಕೆ ನಾವು ವೈದ್ಯರಾಗಲಿಲ್ಲ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು. ದುಷ್ಟ ಹವ್ಯಾಸಗಳಿಗೆ ಒಳಗಾಗದೆ ನಿಷ್ಠೆ- ಬದ್ಧತೆಯಿಂದ ಕಲಿಕೆಯಲ್ಲಿ ಹೊಸ ತನವನ್ನು ಹೊಂದಬೇಕು. ಸಮಯ ಹಾಗೂ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ವೈದ್ಯರಾದ ಮಾತ್ರಕ್ಕೆ ದೇವರು ಆಧ್ಯಾತ್ಮವನ್ನು ದೂರ ಸರಿಸುವುದಲ್ಲ. ಅದರ ಹತ್ತಿರವಾಗುವುದು. ಅಂತಹ ಒಂದು ಶಕ್ತಿ ನಮ್ಮನ್ನು ಸದಾ ಆವರಿಸಿಕೊಂಡಿರುತ್ತದೆ. ಸಮಾಜದ ಆದರ್ಶ ವೈದ್ಯರಾಗಿ ಈ ಮಣ್ಣಿನ ಈ ದೇಶದ ಋಣವನ್ನು ತೀರಿಸಬೇಕು. ವೈದ್ಯ ದೇವೋಭವ ಎಂಬ ಮಾತಿನಂತೆ ಬದುಕನ್ನು ಅನ್ವರ್ಥಗೊಳಿಸಿಕೊಳ್ಳಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳೆಲ್ಲ ವೈದ್ಯಕೀಯ ವೃತ್ತಿಗೆ ಪ್ರವೇಶ ಪಡೆದು ನಾಡಿನ ಹೆಮ್ಮೆಯನ್ನು ಹೆಚ್ಚಿಸಿದ್ದೀರಿ. ಭವಿಷ್ಯತ್ತಿನಲ್ಲಿಯು ಈ ಅಕ್ಷರ ಜ್ಞಾನದ ಯಾತ್ರೆ ಮುಂದುವರಿಯಲಿ. ಶಿಸ್ತು- ಸೌಜನ್ಯಗಳು ನಿಮ್ಮ ಬದುಕಿನ ಮೌಲ್ಯಗಳಾಗಲಿ. ಗುರು ಹಿರಿಯರ ಆಶೀರ್ವಾದದೊಂದಿಗೆ ಸಮಾಜಕ್ಕಾಗಿ ಅಹರ್ನಿಶಿಯಾಗಿ ದುಡಿಯಿರಿ. ವೈದ್ಯಕೀಯ ವೃತ್ತಿಯನ್ನು ಹಣ ಗಳಿಸುವ ವೃತ್ತಿಯನ್ನಾಗಿ ಮಾಡಿಕೊಳ್ಳದೆ ಸಮಾಜ ಸೇವೆ ಮಾಡುವ ಪವಿತ್ರ ಕರ್ತವ್ಯವೆಂದು ಹೇಳಿದರು.

ರಾಮಣ್ಣವರ ಟ್ರಸ್ಟ್ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆದ ಬೈಲಹೊಂಗಲ ತಾಲೂಕಿನ ವಿದ್ಯಾರ್ಥಿಗಳನ್ನು ಗುರುತಿಸುವ ಮೂಲಕ ಟ್ರಸ್ಟ್ ಅವರನ್ನು ವೈದ್ಯಕೀಯ ಅಧ್ಯಯನಕ್ಕೆ ಬೇಕಾದ ಪಠ್ಯ ಹಾಗೂ ಉಪಕರಣಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಿ ಅವರ ನೈತಿಕ ಜವಾಬ್ದಾರಿಗಳನ್ನು ಹೆಚ್ಚಿಸುತ್ತಿದೆ. ನಮ್ಮ ಸಮಾಜದ ಆದರ್ಶ ವೈದ್ಯರಾಗಿ ಗ್ರಾಮೀಣ ಭಾಗದಲ್ಲಿ ಸೇವೆಯನ್ನು ಸಲ್ಲಿಸುವಂತಾಗಲಿ ಎಂದು ಹೇಳಿದರು.
ವೈದ್ಯ ಡಾ. ಮಹಾಂತೇಶ ಶೆಟ್ಟಿ, ವೃದ್ರಾಶ್ರಮದ ಸಂಯೋಜಕ ಎಸ್. ಎಂ. ಚೌಗಲಾ, ಲಿಂಗರಾಜ ಕಾಲೇಜಿನ ಪ್ರಾಧ್ಯಾಪಕ ಡಾ. ಮಹೇಶ ಗುರನಗೌಡರ ಉಪಸ್ಥಿತರಿದ್ದರು. 22 ವೈದ್ಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ನೀಡಲಾಯಿತು. ಡಾ. ಮಹಾಂತೇಶ ರಾಮಣ್ಣವರ ಸ್ವಾಗತಿಸಿ ವಂದಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ