Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಚಿವ ಆಕಾಂಕ್ಷಿಗಳ ಅತೃಪ್ತಿ; ರಾಜೀನಾಮೆ ನೀಡಿದರೆ ಕ್ಷಣದಲ್ಲಿ ಅಂಗೀಕಾರ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು:

"ರಾಜೀನಾಮೆ ಕೊಡುವವರನ್ನು ಯಾರೂ ತಡೆಯೋಕೆ ಆಗುವುದಿಲ್ಲ. ರಾಜೀನಾಮೆ ‌ನೀಡಿದ ಕೆಲವೇ ಕ್ಷಣಗಳಲ್ಲಿ ಅಂಗೀಕರಿಸುತ್ತೇನೆ. ಇದೆಲ್ಲ ರಾಜಕೀಯದಲ್ಲಿ ನಡೆಯೊದೇ. ಈ ಹಿಂದೆ ನಾನು, ಪರಮೇಶ್ವರ್ ಮಂತ್ರಿ ಸ್ಥಾನ ಸಿಗದಿದ್ದಾಗ ತಾಳ್ಮೆಯಿಂದ ಇರಲಿಲ್ಲವೇ? ರಾಜಕೀಯ ಭವಿಷ್ಯ ಬೇಕು ಎಂದರೆ ಪಕ್ಷ ಮುಖ್ಯ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. 

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಕೆಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರಲ್ಲ ಎಂದು ಕೇಳಿದಾಗ, "ನನಗೆ ಹಾಗೂ ಪರಮೇಶ್ವರ್ ಅವರಿಗೆ ಧರಂಸಿಂಗ್, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವ ಸ್ಥಾನ ತಪ್ಪಿಸಿದರು. ಆಗ ನಾನೂ ರಾಜಿನಾಮೆ ಕೊಡಬಹುದಿತ್ತಲ್ಲವೇ? ವೀರೇಂದ್ರ ಪಾಟೀಲ್ ಕಾಲದಲ್ಲಿ ಬಂಗಾರಪ್ಪ ಅವರಿಗೇ ಮಂತ್ರಿಸ್ಥಾನ ನೀಡಿರಲಿಲ್ಲ. ನಂತರ ಬಂಗಾರಪ್ಪ ಅವರು, ಧರಂಸಿಂಗ್ ಅವರು ಮುಖ್ಯಮಂತ್ರಿಗಳಾಗಲಿಲ್ಲವೇ? ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸ್ಥಾನ ನೀಡಿರಲಿಲ್ಲ‌‌" ಎಂದು ಹೇಳಿದರು.

"ಇಂತಹ ಸಂದರ್ಭದಲ್ಲಿ ತಾಳ್ಮೆಯಿಂದ ಇರಬೇಕು.‌ ಎಲ್ಲದಕ್ಕಿಂತ ಪಕ್ಷ ಮುಖ್ಯ. ಎಲ್ಲಾ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಸೇರಿದಂತೆ ಇತರೇ ಹುದ್ದೆಗಳಿಗೆ ರಾಜಿನಾಮೆ ನೀಡಿ ಎಂದು ಸೂಚಿಸುತ್ತೇನೆ. ಎಲ್ಲರಿಗೂ ಮುಂಚಿತವಾಗಿ ಎರಡುವರೆ ವರ್ಷ ಎಂದು ಸೂಚನೆ ನೀಡಿದ್ದೆವು. ಶಾಸಕರು, ಮಂತ್ರಿಗಳಿಗೂ ಇದನ್ನು ತಿಳಿಸಿದ್ದೆವು. ಮೊದಲು ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು. ನಂತರ ಶಾಸಕರನ್ನು ಕರೆದು ಚರ್ಚಿಸಲಾಗುವುದು. ಹೊಸವಿಚಾರ ಇದ್ದರೇ ನಾನೇ ಮಾಧ್ಯಮಗಳನ್ನು ಕರೆದು ಮಾತನಾಡುತ್ತೇನೆ" ಎಂದರು.

"ಎಲ್ಲ ನೂತನ ಸಚಿವರಿಗೆ ಕೂಡಲೇ ತಮಗೆ ಜವಾಬ್ದಾರಿ ನೀಡಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಅತಿವೃಷ್ಟಿ, ಅನಾವೃಷ್ಟಿ ಪರಿಸ್ಥಿತಿಯ ಬಗ್ಗೆ ಅವಲೋಕಿಸ ಬೇಕು ಎಂದು ಹೇಳಿದ್ದೇನೆ. ಜೊತೆಗೆ ಸ್ಥಳ ವೀಕ್ಷಣೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ" ಎಂದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿಬಹುಕೋಟಿ ರೂ.ವಂಚನೆ ಪ್ರಕರಣ: ಆರೋಪಿಯ ಬಂಧನಶಾಲಾ ಹಾಸ್ಟೆಲ್‌ನಲ್ಲಿ ಮಲಗಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಡಿತ; ಮೂವರು ಸಾವು, ಮೂವರು ಗಂಭೀರಬೆಳಗಾವಿಗೆ ಮತ್ತೆ ಅನ್ಯಾಯ : ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಸಿದ್ಧತೆ : ಪ್ರಯಾಣದ ಅವಧಿ 16 ತಾಸುಮೇಯರ್, ಉಪ ಮೇಯರ್ ಪಾಲಿಕೆಯಲ್ಲಿ ರಾಜ್ಯದ ಪರ ಗೊತ್ತುವಳಿ ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ: ಅಶೋಕ ಚಂದರಗಿನಕಲಿ ಹೆಸರಿನಲ್ಲಿ 25 ಮದುವೆ ; ತಮ್ಮ ಅಳಿಯನ ವಿರುದ್ಧವೇ ದೂರು ದಾಖಲಿಸಿದ ಬಿಜೆಪಿ ಶಾಸಕ : ಇಬ್ಬರ ಬಂಧನನಟಿಯ ಮೇಲೆ ಅತ್ಯಾಚಾರ ; 73 ವರ್ಷದ ಸಿನೆಮಾ ನಿರ್ದೇಶಕನ ಬಂಧನʼಪ್ರತಿಭಟನೆ ಪ್ರತಿಧ್ವನಿಸಲಿಲ್ಲ….ʼ : ಕಾಂಗ್ರೆಸ್‌ ಸಂಸದ ಶಶಿ ತರೂರ ಹೇಳಿಕೆಗೆ ಕಾಂಗ್ರೆಸ್‌ ನಾಯಕ ವೇಣುಗೋಪಾಲ ಎಚ್ಚರಿಕೆಜೈಲಿನಲ್ಲಿದ್ದ ಪ್ರಿಯಕರನ ಭೇಟಿಗೆ ಬಂದ ಅಪ್ರಾಪ್ತ ಬಾಲಕಿಯ ಜೇಬಿನಲ್ಲಿ ಸಿಕ್ಕಿತು 10 ಜೀವಂತ ಗುಂಡುಗಳು….!ಭಾರತದಲ್ಲಿ ʼಏಜ್ ವೆರಿಫಿಕೇಷನ್ʼ ಫೀಚರ್‌ ಪರೀಕ್ಷೆಗೆ ಮುಂದಾದ ವಾಟ್ಸ್ಆ್ಯಪ್‌ವಿದೇಶಿ ಉದ್ಯೋಗದ ಆಮಿಷ ; ಪೋರ್ಚುಗಲ್‌ಗೆ ಹೋದ ಭಾರತದ ಯುವತಿ ಬಿಯರ್ ಶಾಪ್‌ ಮಾಲೀಕನಿಗೆ ಮಾರಾಟ….?!