Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಧೋನಿ, ರೋಹಿತ್ ಸಾಲಿಗೆ ಸೇರಿದ ಪಾಟಿದಾರ್

ಅಹಮದಾಬಾದ್ :

ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆದ ಸಾಧನೆ ಮಾಡಿತು. ಆ ಮೂಲಕ ಸತತ ಎರಡು ಟ್ರೋಫಿ ಗೆದ್ದ ನಾಯಕರುಗಳಾದ ಧೋನಿ, ರೋಹಿತ್ ಶರ್ಮಾ ಸಾಲಿಗೆ ಪಾಟಿದಾರ್ ಸೇರಿದರು.

ಇಂಡಿಯನ್ ಪ್ರೀಮಿಯರ್ ಲೀಗ್–2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿತು.

ಆರ್‌ಸಿಬಿ ಉತ್ತಮ ಬೌಲಿಂಗ್ ದಾಳಿ
ನಾಯಕನ ನಿರ್ಧಾರ ಸಮರ್ಥಿಸಿಕೊಂಡ ಆರ್‌ಸಿಬಿ ವೇಗಿಗಳು ಗುಜರಾತ್ ಬ್ಯಾಟರ್‌ಗಳ ಮೇಲೆ ಸವಾರಿ ಮಾಡಿದರು. ಮರಿಣಾಮ, ಜಿಟಿ 12.1 ಓವರ್‌ಗಳಲ್ಲಿ 73 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು.

ಪೆವಿಲಿಯನ್ ಪರೇಡ್ ನಡೆಸಿದ ಜಿಟಿ ಬ್ಯಾಟರ್‌ಗಳು
ಗುಜರಾತ್ ಟೈಟನ್ಸ್ ಪರ ಶುಭಮನ್ ಗಿಲ್ (10), ಸಾಯಿ ಸುದರ್ಶನ್ (12), ಅರ್ಷದ್ ಖಾನ್ (20) ಹಾಗೂ ಜೋಸ್ ಬಟ್ಲರ್ (19) ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.

ವಾಷಿಂಗ್‌ಟನ್ ಏಕಾಂಗಿ ಹೋರಾಟ
ಕ್ರೀಸ್ ಕಚ್ಚಿ ಆಡಿದ ವಾಷಿಂಗ್‌ಟನ್ ಸುಂದರ್ ಅಜೇಯ 50 ರನ್ ಸಿಡಿಸಿದರು. ಆರ್‌ಸಿಬಿ ಪರ ರಸಿಕ್ ಸಲಾಮ್ ದಾರ್ 3, ಭುವನೇಶ್ವರ್ ಕುಮಾರ್ ಹಾಗೂ ಹೇಜಲ್ವುಡ್ ತಲಾ 2 ವಿಕೆಟ್ ಪಡೆದರು.

ಉತ್ತಮ ಆರಂಭ ಪಡೆದ ಆರ್‌ಸಿಬಿ
ವೆಂಕಟೇಶ್ ಐಯ್ಯರ್
156 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ ಅಯ್ಯರ್ (32 ರನ್) ಗಳಿಸುವ ಮೂಲಕ 62 ರನ್‌ಗಳ ಉತ್ತಮ ಜೊತೆಯಾಟ ಆಡಿದರು.

ಗುಜರಾತ್ ಟೈಟನ್ಸ್ ಕಮ್‌ಬ್ಯಾಕ್
ಮೊಹಮ್ಮದ್ ಸಿರಾಜ್ 
4.3 ಓವರ್‌ಗಳಲ್ಲಿ 62 ರನ್ ಗಳಿಸಿದ್ದಾಗ, ದಾಳಿಗಿಳಿದ ಮೊಹಮ್ಮದ್ ಸಿರಾಜ್ ವೆಂಕಟೇಶ್ ಅಯ್ಯರ್ ಅವರ ವಿಕೆಟ್ ಪಡೆದರು, ನಂತರ ಬಂದ ಪಡಿಕ್ಕಲ್ (1) ಪಡಿಕ್ಕಲ್ (15) ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

ವಿರಾಟ್ ಕೊಹ್ಲಿ ಅಜೇಯ ಬ್ಯಾಟಿಂಗ್ 
ವಿರಾಟ್ ಕೊಹ್ಲಿ
ಸತತವಾಗಿ ವಿಕೆಟ್ ಕಳೆದುಕೊಂಡಾಗಲು ಸ್ಫೋಟಕ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆರ್‌ಸಿಬಿಗೆ ಸುಲಭ ಗೆಲುವು
ಈ ಗೆಲುವಿನೊಂದಿಗೆ ರಜತ್ ಪಾಟಿದಾರ್ ಅವರು ನಾಯಕತ್ವ ವಹಿಸಿಕೊಂಡ ಮೊದಲ ಎರಡು ಸೀಸನ್‌ನಲ್ಲಿ ತಂಡವನ್ನು ಚಾಂಪಿಯನ್ ಮಾಡಿದ ಐಪಿಎಲ್‌ನ ಮೊದಲ ನಾಯಕ ಎಂಬ ಸಾಧನೆ ಮಾಡಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸರ್ಕಾರದ ‘ವಂದೇ ಮಾತರಂ’ ಸಂಪೂರ್ಣ ಚರಣ ನಿಯಮಕ್ಕೆ ಕಾಂಗ್ರೆಸ್ ಅಪಸ್ವರ ; ಎರಡು ಚರಣ ಮಾತ್ರ ಹಾಡಲು ನಿರ್ಧಾರ20 ರೂ. ಲಂಚದ ಆರೋಪಕ್ಕೆ 30 ವರ್ಷಗಳ ಕಾನೂನು ಹೋರಾಟ : ಸುಪ್ರೀಂಕೋರ್ಟಿನಿಂದ ಇಬ್ಬರು ಸರ್ಕಾರಿ ನೌಕರರ ಖುಲಾಸೆಕೇಂದ್ರ ಸರ್ಕಾರದ ‘ವಂದೇ ಮಾತರಂ’ ಸಂಪೂರ್ಣ ಚರಣ ನಿಯಮಕ್ಕೆ ಕಾಂಗ್ರೆಸ್ ಅಪಸ್ವರ ; ಎರಡು ಚರಣ ಮಾತ್ರ ಹಾಡಲು ನಿರ್ಧಾರಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಜನತೆಗೆ ಸಿಹಿ ಸುದ್ದಿಪ್ರಿಯಕರನ ಜೊತೆ ಸೇರಿ ಗಂಡ, 4 ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಂದ ಪತ್ನಿಹನೂರು ಗುಂಡಿನ ಚಕಮಕಿ ಪ್ರಕರಣ : ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ಬದುಕುಳಿದ ವ್ಯಕ್ತಿ ಹೇಳಿದ್ದೇನು ?ಹಾರ್ಮುಜ್ ಜಲಸಂಧಿ ‘ಅಮೆರಿಕದ ಹೊಸ ಭೂಪ್ರದೇಶ’ ಎಂದು ಘೋಷಿಸಿ ನಕ್ಷೆ ಹಂಚಿಕೊಂಡ ಟ್ರಂಪ್‌ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)ಜಾವೆಲಿನ್ ಎಸೆತದಲ್ಲಿ  ಜಿ. ಎ. ಹೈಸ್ಕೂಲ್ ವಿದ್ಯಾರ್ಥಿ ವಿಶಾಲ್ ರಾಠೋಡ ದಾಖಲೆ ಸಾಧನೆ: ರಾಷ್ಟ್ರಮಟ್ಟಕ್ಕೆ ಆಯ್ಕೆ