Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸ್ಮಶಾನ ಭೂಮಿ ಕಬಳಿಸಲು ಯತ್ನಿಸಿದವರ ವಿರುದ್ಧ ದೇವಗಿರಿ ಗ್ರಾಮಸ್ಥರ ಪ್ರತಿಭಟನೆ

Advertisement
ಬೆಳಗಾವಿ: ಕಡೋಲಿ ಗ್ರಾಪಂಗೆ ವ್ಯಾಪ್ತಿಯಲ್ಲಿ ಬರುವ ದೇವಗಿರಿ ಗ್ರಾಮದಲ್ಲಿನ ಲಿಂಗಾಯತ ಸಮಾಜದ ಸ್ಮಶಾನಭೂಮಿಯನ್ನು ಕಬಳಿಸಲು ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವಗಿರಿ ಗ್ರಾಮಸ್ಥರು ಸ್ಮಶಾನಭೂಮಿಯಲ್ಲೇ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ದೇವಗಿರಿ ಗ್ರಾಮಸ್ಥರು ಮಾತನಾಡಿ, ದೇವಗಿರಿ ಗ್ರಾಮದ ಸರ್ವೇ ನಂ 123/8ರಲ್ಲಿ ಬರುವ 1 ಎಕರೆ 16 ಗುಂಟೆಯ ಭೂಮಿಯನ್ನು ಲಿಂಗಾಯತ ಸಮಾಜದ ಜನರಿಗೆ ಸ್ಮಶಾನಕ್ಕೆ ಮೀಸಲಾಗಿತ್ತು. ಕಳೆದ ಸುಮಾರು ವರ್ಷಗಳಿಂದ ದೇವಗಿರಿ ಗ್ರಾಮದ ಜನರು ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಈ ಜಾಗ ಬಳಸಿಕೊಳ್ಳುತ್ತಿದ್ದಾರೆ. ಈ ವರ್ಷ ಸಹ ಇಲ್ಲಿ ಅನೇಕ ಶವಗಳ ಅಂತ್ಯಕ್ರಿಯೆ ಮಾಡಲಾಗಿದೆ. ಈಗ ವ್ಯಕ್ತಿಯೊಬ್ಬ ಈ ಜಾಗ ತನ್ನದೆಂದು ತಕರಾರು ತೆಗೆದು ಅಡಚಣೆ ಉಂಟುಮಾಡಿ ಈ ಸ್ಮಶಾನ ಭೂಮಿಯನ್ನು ಕಬಳಿಸಲು ಯತ್ನ
ಮಾಡುತ್ತಿದ್ದಾನೆ ಎಂದು ಆರೋಪಿಸಿದರು.

ಈ ಜಾಗ ಸ್ಮಶಾನಕ್ಕೆ ಮೀಸಲು ಎಂದು ನಮ್ಮ ಹಿರಿಯರು ಈ ಜಾಗ ಸುಮಾರು ವರ್ಷಗಳ ಹಿಂದೆಯ ಗುರುತಿಸಿದ್ದಾರೆ. ಆದರೆ ಈಗ ವ್ಯಕ್ತಿಯೊಬ್ಬ ಈ ಜಾಗ ನನ್ನ ಪಿತ್ರಾರ್ಜಿತ ಆಸ್ತಿ ಎಂದು ಆರೋಪ ಮಾಡಿ ಲಿಂಗಾಯತ ಸಮಾಜದ ಸ್ಮಶಾನ ಭೂಮಿ ಕಬಳಿಸಲು ಯತ್ನ ಮಾಡುತ್ತಿದ್ದಾನೆ. ಇದು ಸರಿಯಲ್ಲ. ಶೀಘ್ರವೇ ಈ ಆರೋಪ ಬಿಟ್ಟು ಲಿಂಗಾಯತ ಸಮುದಾಯದ ಜನರಿಗೆ ಸ್ಮಶಾನ ಭೂಮಿಯನ್ನು ಯತಾವತ್ತಾಗಿ ಮುಂದುವರೆಸಿಕೊಂಡು ಹೋಗಲು ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಸಚಿವರ ಆಪ್ತ ಸಹಾಯಕರ ಮುಂದೆ ಅಳಲು ತೋಡಿಕೊಂಡ ಗ್ರಾಮಸ್ಥರು: ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿಯವರ ಆಪ್ತ ಸಹಾಯಕ ಮಲಗೌಡ ಪಾಟೀಲ್‌ ಅವರ ಬಳಿ ತಮ್ಮ ನೋವು ತೊಡಿಕೊಂಡ ದೇವಗಿರಿ ಗ್ರಾಮಸ್ಥರು, ದೇವಗಿರಿ ವ್ಯಾಪ್ತಿಯ ಕಡೋಲಿ ಗ್ರಾಪಂನ ರಿ.ಸ.ನಂ- 123/8 ರಲ್ಲಿ ಸಂಬಂಧಿಸಿದ ಭೂಮಿಯನ್ನು ಕಳೆದ ಮೂರ್ನಾಲ್ಕೂ ತಲಮಾರಿನಿಂದ ಈ ಭೂಮಿಯನ್ನು ನಾವು ಸ್ಮಶಾನ ಭೂಮಿಯಾಗಿ ಬಳಕೆ ಮಾಡುತ್ತಿದ್ದೇವೆ. ಹೀಗಾಗಿ ಮುಂದೆಯೂ ನಮಗೆ ಈ ಜಾಗವನ್ನು ಬಳಕೆ ಮಾಡಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಸಮಸ್ಯೆ ಆಲಿಸಿದ ಸಚಿವರ ಆಪ್ತ ಸಹಾಯಕ ಮಲಗೌಡಾ ಪಾಟೀಲ ಅವರು ಗ್ರಾಮಸ್ಥರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಈ ಪ್ರತಿಭಟನೆಯಲ್ಲಿ ಗೌಡಪ್ಪ ಶಿವನಗೌಡ ಪಾಟೀಲ, ಬಾಬುರಾವ ಪಾಟೀಲ, ಬಾಬು ಪಾಟೀಲ, ನಿಂಗಪ್ಪ ಪಾಟೀಲ, ಪಕ್ಕಿರಪ್ಪ ಸದಾವರ, ತಿಪ್ಪಣ್ಣಾ ಪಕ್ಕಿರನಾಯಕ, ಬಾಬು ಬಡಿಗೇರ, ಮಂಜುಳಾ ಅಂಕಿ, ರೇಖಾ ಸುತಾರ ಸೇರಿದಂತೆ ದೇವಗೀರಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಸಿಎಂ ಆದ ನಂತರ ರಾಮಲಿಂಗಾ ರೆಡ್ಡಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ‌ ಕೊಡ್ತೇನೆ ಅಂದ್ದಿದ್ದು ನಿಜ, ಆದರೆ…: ಸಿಎಂ ಡಿಕೆ ಶಿವಕುಮಾರ್ಜನಾಕ್ರೋಶಕ್ಕೆ ಹೆದರಿ ಕರ್ನಾಟಕದಲ್ಲಿ ಸಿಎಂ ಬದಲಾವಣೆ: ಪ್ರಧಾನಿ ಮೋದಿ  ಗುಡುಗುಡಿಕೆಶಿ ಸಂಪುಟದಲ್ಲಿ ಖಾತೆ ಅಸಮಾಧಾನ ತೀವ್ರ : ರಾಮಲಿಂಗಾ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ಸಚಿವ ಮುನಿಯಪ್ಪ ಬಹಿರಂಗ ಅಸಮಾಧಾನ !ಉದಯಕುಮಾರಗೆ ಪ್ರತಿಷ್ಠಿತ ಪ್ರಶಸ್ತಿಮುಂದಿನ ಬಾರಿ ಮಹಿಳೆಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ; ಲಕ್ಷ್ಮೀ ಹೆಬ್ಬಾಳ್ಕರ್ ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಕಾನೂನು ಉತ್ಸವದಲ್ಲಿ ಸಾಧನೆ : ಸಾಧಕರಿಗೆ ಸನ್ಮಾನರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡುವೆ: ಡಿ.ಕೆ. ಶಿವಕುಮಾರ್ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆಬಿಜೆಪಿಗೆ ಆಘಾತ ; ಪಕ್ಷಕ್ಕೆ ರಾಜೀನಾಮೆ ನೀಡಿದ ತಮಿಳುನಾಡಿನ ಪ್ರಭಾವಿ ನಾಯಕ ಅಣ್ಣಾಮಲೈ