Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

CT ರವಿ ಕೇಸ್; ಬಾಗೇವಾಡಿ ಪಿಐ ಅನಾರೋಗ್ಯ: ಆಸ್ಪತ್ರೆಗೆ ದಾಖಲು..?

CT ರವಿ ಕೇಸ್; ಬಾಗೇವಾಡಿ ಪಿಐ ಅನಾರೋಗ್ಯ: ಆಸ್ಪತ್ರೆಗೆ ದಾಖಲು..?

ನ್ಯಾಯಾಂಗ ನಿಂದನೆ ತೂಗುಗತ್ತಿಯಲ್ಲಿ ಬೆಳಗಾವಿ ಪೊಲೀಸರು ..?

ಕಾನೂನು ಅರಿತರೂ ಮಂತ್ರಿ ಒತ್ತಡಕ್ಕೆ ಮಣಿದ್ರಾ IPS ಅಧಿಕಾರಿಗಳು..?

ಬೆಳಗಾವಿ : ಮಂತ್ರಿಗಳ ಒತ್ತಡಕ್ಕೆ ಮಣಿದು ಬೆಳಗಾವಿ ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಬಾಹಿರವಾಗಿ ಶಾಸಕ CT ರವಿ ಅವರನ್ನು ಬಂಧಿಸುವಂತೆ ಹೇರಿದ ಒತ್ತಡ ತಾಳಲಾರದೆ ಹಿರೇಬಾಗೇವಾಡಿ ಪಿಐ ರಮೇಶ ಪಾಟೀಲ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಕೆಎಲ್ಇ ಆಸ್ಪತ್ರೆ ಸೇರಿದ್ದಾಗಿ ತಿಳಿದು ಬಂದಿದೆ.ಮಾಹಿತಿ ಪ್ರಕಾರ ಅವರಿಗೆ ಬಿಪಿ ಕಡಿಮೆಯಾಗಿದೆ ಎಂದು ತಿಳಿದಿದೆ.

ನಿನ್ನೆ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ಕೊನೆಯ ದಿನದಂದು ವಿಧಾನ ಪರಿಷತ್ತಿನಲ್ಲಿ ಮಂತ್ರಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಬಿಜೆಪಿ ಶಾಸಕ ಸಿ ಟಿ ರವಿ ‍ಅಸಂವಿಧಾನಿಕ ಪದ ಬಳಿಸಿದ್ದಾರೆ ಎಂದು ಆರೋಪಿಸಿ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೆ ಆರೋಪಿ ಸಿ ಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಸುವರ್ಣ ಸೌಧದಿಂದ ವಶಕ್ಕೆ ಪಡೆದು ಖಾನಾಪೂರ ಠಾಣೆಗೆ ಕರೆದೊಯ್ದಿದ್ದರು. ನಂತರ ಅವರು ಕೂಡ ಮಂತ್ರಿ ಲಕ್ಷ್ಮೀ ಬೆಂಬಲಿಗರು ನನ್ನ ಮೇಲೆ ಸೌಧ ಒಳಗೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ಆದರೆ ಇಷ್ಟೆಲ್ಲಾ ನಡೆದ ಮೇಲೆ ಪೊಲೀಸರು ಮಾತ್ರ ಕಾನೂನು ಪ್ರಕಾರ ಕ್ರಮ ಕೈಗೊಳ್ಳದೇ ಸರ್ಕಾರದ ಒತ್ತಡಕ್ಕೆ ಮಣಿದು ಕಾನೂನು ಬಾಹಿರವಾಗಿ ಆರೋಪಿಯನ್ನು ಬಂಧಿಸಲು ಪಣ ತೊಟ್ಟಂತೆ ಕಾಣುತ್ತಿದೆ.

ಯಾಕೆಂದರೆ ನಿನ್ನೆ ಪರಿಷತ್ತಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕ ಸಿ ಟಿ ರವಿ ಮೇಲೆ ಲೈಂಗಿಕ ಕಿರುಕುಳ ಮತ್ತು ಮಹಿಳೆಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿ ಮಾನಹಾನಿ ಮಾಡಿರುವ ಆರೋಪದಡಿ BNS ಕಲಂ 75 ,79 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾಯ್ದೆ ಪ್ರಕಾರ ಪ್ರಕರಣದ ಶಿಕ್ಷೆ ಅವಧಿ 3 ವರ್ಷದ ತನಕ ಇರುವ ಕಾರಣ ಸುಪ್ರೀಂ ಕೋರ್ಟ್‌ ಆದೇಶದನ್ವಯ ಆರೋಪಿಯನ್ನು ಬಂಧಿಸುವಂತಿಲ್ಲ.

ಇಷ್ಟೆಲ್ಲಾ ಕಾನೂನು ಅರಿತಿರುವ ಬೆಳಗಾವಿ IPS ಅಧಿಕಾರಿಗಳು ಒಬ್ಬ ಶಾಸಕ, ಒಂದು ದೊಡ್ಡ ರಾಷ್ಟ್ರೀಯ ಪಕ್ಷದ ರಾಜ್ಯ ಮುಖಂಡರಾಗಿರುವ ರಾಜಕಾರಣಿಯನ್ನು ಕಿರಿಯ ಅಧಿಕಾರಿಗಳಿಗೆ ಆದೇಶ ನೀಡಿ ಬಂಧಿಸುವಂತೆ ಒತ್ತಾಯಿಸುತ್ತಿರುವುದು ತೀವ್ರ ಅಸಹ್ಯಕರವಾಗಿದೆ.

ಒಂದು ವೇಳೆ ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಶಾಸಕನ್ನು ಬಂಧಿಸಿದರೇ, ಇದು ಕಾನೂನು ಬಾಹಿರ ಹಾಗೂ ನ್ಯಾಯಾಂಗ ನಿಂದನೆ ಆಗುತ್ತದೆ. ಇದರ ಮೇಲೆ ಬಂಧಿಸಿದ ಅಧಿಕಾರಿಗಳ ತಲೆದಂಡ ಪಕ್ಕಾ ಅಂತಾರೆ ವಕೀಲರು.

ಅದಕ್ಕಾಗಿ ಹಿರಿಯ ಅಧಿಕಾರಿಗಳು ಅಂತಹ ದೊಡ್ಡ ರಾಜಕಾರಣಿಯನ್ನು ತಾವು ಬಂಧಿಸಲು ಹೋಗದೆ, ತಮ್ಮ ಅಧೀನದಲ್ಲಿದ್ದ ಕಿರಿಯ ಅಧಿಕಾರಿಗಳಿಗೆ ಒತ್ತಡ ಹೇರಿ ಬಂಧಿಸುವಂತೆ ಕಾಡುತ್ತಿರುವುದಾಗಿ ಗೊತ್ತಾಗಿದೆ.

ಇದರಿಂದ ಬೆಳಗಾವಿ ಪೊಲೀಸ ಇಲಾಖೆ ಮಂತ್ರಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಇತ್ತ ನ್ಯಾಯಾಂಗ ತೂಗುಗತ್ತಿಯಲ್ಲೂ ಸಿಲುಕುವ ಭಯದಿಂದ ಬೇರೊಬ್ಬರ ಮೇಲೆ ಬೊಟ್ಟು ಮಾಡುತ್ತಿದ್ದಾರೆ.ಒಟ್ಟಿನಲ್ಲಿ CT ರವಿ ಕೇಸ್ ಯಾವ ತಿರುವು ಪಡೆಯುತ್ತೆ ಎಂದು ಕಾದು ನೋಡಬೇಕು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ? ಸಾರ್ವಜನಿಕರನ್ನು ಸತಾಯಿಸುತ್ತಿರುವ ಬಿ ಎಲ್ ಒ ಗಳ ವಿರುದ್ಧ ಕ್ರಮಕ್ಕೆ ಅಗ್ರಹಶಾಸಕರ ಮನೆಗಳಿಗೆ ಸೀಮಿತವಾದರೆ BLO ಗಳು ?ದೇಶಾದ್ಯಂತ ಆವರಿಸಿದ ಮೋಡಗಳು ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ; ಮುಂಗಾರು ಬಲಗೊಳ್ಳುತ್ತಿದೆ ಎಂದ ಹವಾಮಾನ ಇಲಾಖೆನೀಟ್‌ ಹೋರಾಟ : ಯುವ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಭರವಸೆ ನೀಡಿದ್ರೆ ಉಪವಾಸ ಅಂತ್ಯ ; ಕೇಂದ್ರಕ್ಕೆ ವಾಂಗ್ಚುಕ್ ಷರತ್ತುಕೋಚಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರುಆಷಾಢ ಏಕಾದಶಿ ಪ್ರಯುಕ್ತ ಧಾರವಾಡ-ಪಂಡರಪುರ ನಡುವೆ ವಿಶೇಷ ರೈಲು ಸಂಚಾರಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆ, ಹುಬ್ಬಳ್ಳಿ ಉದ್ಘಾಟನಾ ಸಮಾರಂಭ ಮುಂದೂಡಿಕೆಎನ್‌ಡಿಎಗೆ ಎನ್‌ಸಿಪಿ ಬೆಂಬಲದ ವದಂತಿಗಳ ನಡುವೆ ಪ್ರಧಾನಿ ಮೋದಿ ಭೇಟಿ ಮಾಡಿದ ಶರದ್ ಪವಾರ್–ಸುಪ್ರಿಯಾ ಸುಳೆಗಣಿಕೊಪ್ಪ : ಶಾಸಕ ಬಾಬಾಸಾಹೇಬ ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಸಿಹಿ ಭೋಜನ, ಕಲಿಕಾ ಸಾಮಗ್ರಿ ವಿತರಣೆವಿದ್ಯಾರ್ಥಿಗಳು  ಎನ್ ಸಿಸಿ   ಮಹತ್ವ ಮತ್ತು ಅದರ ಉಪಯೋಗ ಹಾಗೂ ಅನುಕೂಲಗಳ  ಮಾಹಿತಿ ಪಡೆಯಬೇಕು: ಪ್ರೊ . ಹನುಮಂತ ಬನ್ನೂರ