Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಂಧಾನವು ವಿರೋಧಾತ್ಮಕವಲ್ಲದ ನ್ಯಾಯ ವಿಧಾನವಾಗಿದೆ :ಕಮಲ್

 

ಬೆಳಗಾವಿ:
ನ್ಯಾಯ ವಿಧಾನವು ಬದಲಾದಂತೆ ಇತ್ತೀಚಿನ ದಿನಗಳಲ್ಲಿ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯುನ್ಯಾಯಾಂಗ ವ್ಯವಸ್ಥೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಪಕ್ಷಗಾರರ ನಡುವಿನ ವಿವಾದವನ್ನು ಸುಲಭವಾಗಿ ತನ್ನದೇ ವಿಶಿಷ್ಟ ಶೈಲಿಯ ಕ್ರಮ ವಿಧಾನಗಳಾದ 'ಮಾತುಕತೆ' ಹಾಗೂ 'ಮಧ್ಯಸ್ಥಿಕೆ' ಮೂಲಕ ಶೀಘ್ರವಾಗಿ ಪರಿಹರಿಸುತ್ತದೆ. ಇದನ್ನು ವಿವಾದಗಳ ವಿವಿಧ ಶ್ರೇಣಿಗೆ ಅನ್ವಯಿಸಿ, ಪರಿಹಾರ ಕಂಡುಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಜೊತೆಗೆ ಸಂಧಾನವು ಸ್ವಯಂ ಪ್ರೇರಿತ ನ್ಯಾಯ ಪ್ರಕ್ರಿಯೆಯಾಗಲಿ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅಭಿಪ್ರಾಯಪಟ್ಟರು.

ನಗರದ ರಾಜಾ ಲಖಮಗೌಡ ಕಾನೂನು ವಿದ್ಯಾಲಯದ ಕೆ.ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಶನಿವಾರ ಪರ್ಯಾಯ ವಿವಾದಗಳ ಪರಿಹಾರ ವ್ಯವಸ್ಥೆ - ಹೊಸ ಪ್ರವೃತ್ತಿಗಳು, ಸಮಕಾಲೀನ ಸವಾಲುಗಳು ಮತ್ತು ಭವಿಷ್ಯ ಎಂಬ ವಿಷಯದ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ
ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ ಮಾತನಾಡಿ, ಉದಯೋನ್ಮುಖ ವಕೀಲರು ಅಗತ್ಯ ಬಿದ್ದರೆ ತಮ್ಮ ಕಕ್ಷಿದಾರರಿಗೆ ಸಂಧಾನ ಅಥವಾ ಮಧ್ಯಸ್ಥಿಕೆಯ ಮೂಲಕ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿ, ನ್ಯಾಯ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕವಾಗಿ ಕಾರ್ಯೊನ್ಮುಖರಾಗಬೇಕೆಂದು ಹೇಳಿದರು.

ವಿಚಾರ ಸಂಕೀರ್ಣದಲ್ಲಿ ದೇಶದಾದ್ಯಂತ ಹತ್ತಾರು ವಿಶ್ವವಿದ್ಯಾಲಯಗಳ ನಲವತ್ನಾಲ್ಕು ಪ್ರತಿನಿಧಿಗಳು ಭಾಗವಹಿಸಿ, 65ಕ್ಕೂ ಹೆಚ್ಚಿನ ಪ್ರಬಂಧಗಳನ್ನು ಮಂಡಿಸಿದರು.

ಕಾಲೇಜಿನ IQAC ಹಾಗೂ ಸೆಮಿನಾರ್ ವಿಭಾಗದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ. ಎ. ಎಚ್ ಹವಾಲ್ದಾರ್ ಸ್ವಾಗತಿಸಿ, ಸಭಿಕರಿಗೆ ಕಾಲೇಜಿನ ಸಾಧನೆಯನ್ನು ಪರಿಚಯಿಸಿದರು.

ಕೆ. ಎಲ್. ಎಸ್ ಸೊಸೈಟಿಯ ಕಾರ್ಯದರ್ಶಿಗಳಾದ ಎಸ್. ವಿ. ಗಣಾಚಾರಿ ಮತ್ತು ವಿ. ಜಿ ಕುಲಕರ್ಣಿ, ಆಡಳಿತ ಮಂಡಳಿ ಚೇರ್ಮನ್ ಪಿ.ಎಸ್ ಸಾವಕಾರ್, ಮಂಡಳಿ ಸದಸ್ಯ ಪ್ರಮೋದ್ ಕಟಾವಿ, ಆರ್.ಎಲ್.ಎಲ್. ಸಿ ಚೇರ್ಮನ್ ಎಂ. ಆರ್. ಕುಲಕರ್ಣಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ