Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಜಿಲ್ಲಾಧಿಕಾರಿಗಳೇ ಏನಿದು? ಮತಕ್ಕಾಗಿ ಮುಗ್ಧ ಮನಗಳ N'ICE'

ಶಾಲಾ ಮಕ್ಕಳಿಗೂ Ice ಆಮಿಷ...!

ರಾಜಕೀಯ ಪುಢಾರಿಗಳ ಚೆಲ್ಲಾಟಕ್ಕೆ ಜಿಲ್ಲಾಡಳಿತ ನವಿಲುನರ್ತನ..!

ಜನ ಜೀವಾಳ ಜಾಲ: ಬೆಳಗಾವಿ: ತಮ್ಮ ಭಾವಚಿತ್ರ ಹೊತ್ತ ಕೂಪನ್ ನೀಡುವ ಮೂಲಕ ಶಾಲಾ ಮಕ್ಕಳಿಗೆ ಐಸ್ಕ್ರೀಮ್ ವಿತರಣಾ ಆಮಿಷ N'ICE'* ಕಾರ್ಯ ನಡೆದಿದೆ.ನಗರದ ಉತ್ತರ ದಕ್ಷಿಣ ಕ್ಷೇತ್ರದ ಶಾಲಾ ಆವರಣಗಳ ಸುತ್ತ ಕೂಪನ್ ಮೂಲಕ ಐಸ್ ಕ್ರೀಮ್ ಹಂಚಿಕೆ ವಿಡಿಯೋ ಸಹಿತ ವರದಿಯಾಗಿದ್ದು ಗಮನ ಸೆಳೆದಿದೆ. ನೀತಿ ಸಂಹಿತೆ ಪ್ರಾರಂಭವಾಗುವುದನ್ನು ನೋಡುತ್ತ ಕುಳಿತುಕೊಳ್ಳಬೇಡಿ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೂಚನೆ ಮತ್ತು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಹಲವು ಬಗೆಯ ಆಮಿಷಗಳನ್ನು ತಡೆಗಟ್ಟುವ ಬಗೆಗಿನ ಆದೇಶದ ನಂತರವೂ ಇಂದು ಮತದಾರರ ಓಲೈಕೆಗಾಗಿ ಮುಗ್ದ ಮನದ ಮಕ್ಕಳಿಗೆ ಐಸ್ಕ್ರೀಮ/ ಚಾಕಲೇಟ್ ತಿನ್ನಿಸುವದು ನಡೆದಿದೆ.

ಶಾಲಾ ಮಕ್ಕಳಿಗೆ ಐಸ್ಕ್ರೀಮ್ ವಿತರಣೆ ಘಂಟಾಘೋಷವಾಗಿ ನಡೆದಿದೆ. ರಾಜಕೀಯ ಪುಢಾರಿಗಳ ನಾಟ್ಯಕ್ಕೆ ಪ್ರತಿಯಾಗಿ ಜಿಲ್ಲಾಡಳಿತ ನವಿಲುನರ್ತನ ಮಾಡುತ್ತಿದೆಯೇ ಎಂದು ಜನ ಆಕ್ರೋಶಭರಿತರಾಗಿದ್ದಾರೆ.
ಚುನಾವಣೆ ಮುನ್ನಲೆಯಲ್ಲಿ ಸಾಕಷ್ಟು ರಾಜಕೀಯ ಆಟಗಳು ನಡೆದಿದ್ದು, ಇವರ ಆಮಿಷದ ಪರಮಾವಧಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಜನರ ಮತಾಧಿಕಾರವನ್ನು ಮೋಸದಿಂದ ಸೆಳೆಯುವ ನಿರ್ಲಜ್ಜ ಪ್ರಯತ್ನ ಎಂದೇ ತಿಳಿಯಲಾಗುತ್ತಿದೆ.

ಕಾಂಗ್ರೆಸ್ ಕಾರ್ಯಕರ್ತೆ ಪ್ರಭಾವತಿ ಚಾವಡಿ ಕಿಡಿ: ಐಸ್ ಕ್ರೀಮ್ ವಿತರಿಸಲು ಜಿಲ್ಲಾಡಳಿತ ಶಾಸಕರಿಗೆ ಅನುಮತಿ ನೀಡಿದ್ದಲ್ಲದೇ ತನ್ನ ಶಿಕ್ಷಕರಿಗೂ ಸಹಕರಿಸಲು ಆದೇಶ ನೀಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸದರಿ ಆಮಿಷ ಪ್ರಕರಣ ಮತ್ತು ವಿಡಿಯೋ ದಾಖಲಾತಿಗೆ ಸಂಬಂಧಿಸಿ ಜಿಲ್ಲಾ ಚುನಾವಣಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಬೇಕಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ