Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚಂದಪ್ಪನ ಸಹಚರ ಬಾಗಪ್ಪನ ರಕ್ತಸಿಕ್ತ ಚರಿತ್ರೆ

 

 

ವಿಜಯಪುರ : ಚಂದಪ್ಪನ ಶಿಷ್ಯ, ನಟೋರಿಯಸ್​ ರೌಡಿ ಬಾಗಪ್ಪ ಹರಿಜನ್​​ನ ಕೊಲೆಯಾಗಿದೆ. ವಿಜಯಪುರ ನಗರದ ರೆಡಿಯೋ ಕೇಂದ್ರದ ಬಳಿಯ ಮದಿನಾ ನಗರದಲ್ಲಿ ಮಂಗಳವಾರ ಬಾಗಪ್ಪ ಹರಿಜನ್​ನ್ನು ಕೊಲೆ ಮಾಡಲಾಗಿದೆ. ಮಾರಾಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿದೆ. ದಶಕಗಳ ಹಿಂದೆ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಭೀಮಾತೀರದಲ್ಲಿ ರಕ್ತದ ಹೊಳೆಯನ್ನೇ ಹರಿಸಿದ್ದ ಬಾಗಪ್ಪ ಚರಿತ್ರೆ ಹೀಗಿದೆ.

ಕೊಲೆಯಾದ ಬಾಗಪ್ಪ ಹರಿಜನ್ ಭೀಮಾತೀರದ ಹಂತಕ ಎಂದೇ ಕುಖ್ಯಾತಿಯಾಗಿದ್ದ ಚಂದಪ್ಪ ಹರಿಜನ್ ಶಿಷ್ಯನಾಗಿದ್ದ. ಬಾಗಪ್ಪ ಹರಿಜನ್ ಕಲಬುರ್ಗಿ, ವಿಜಯಪುರ ಭಾಗದ ಭೀಮಾತೀರದಲ್ಲಿ ಹಲವು ಅಪರಾಧ ಕೃತ್ಯಗಳನ್ನು ಎಸಗಿದ್ದ.

ಬಾಗಪ್ಪ ಹರಿಜನ್​ ಮೇಲಿದ್ದ ಪ್ರಕರಣಗಳು

ಬಾಗಪ್ಪ ಹರಿಜನ್​ ಮೇಲೆ ಒಟ್ಟು 10 ಪ್ರಕರಣಗಳಿವೆ, ಈ ಪೈಕಿ 6 ಕೊಲೆ ಪ್ರಕರಣಗಳು ಇವೆ. 1998‌ ರಲ್ಲಿ‌ ಸಿಂದಗಿಯಲ್ಲಿ ಸ್ಟನ್​ಗನ್ ಬಳಸಿ ಗುಂಡು ಹಾರಿಸಿದ್ದ ಕೇಸ್​ ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತನ‌ ಹೆಸರಿದೆ. ಚಂದಪ್ಪ ಹರಿಜನ್​ ಸಹೋದರ ಬಸಪ್ಪ ಹಾಗೂ ಸಂಬಂಧಿ ಮುತ್ತುರಾಜ ಕೊಲೆ ಪ್ರಕರಣ ಈತನ ಮೇಲಿದೆ.

* 2000 ರಲ್ಲಿ ಪೊಲೀಸರ ಮೇಲೆ ಫೈರಿಂಗ್

* 1999 ರಲ್ಲಿ ಆಲಮೇಲದಲ್ಲಿ ನಡೆದ ಕೊಲೆ ಪ್ರಕರಣ

* 1998 ರಲ್ಲಿ ಕಲಬುರಗಿ ಜಿಲ್ಲೆ ಆಳಂದನಲ್ಲಿ‌ ನಡೆದ ಜೋಡಿ ಕೊಲೆ ಪ್ರಕರಣ

* 1997 ರಲ್ಲಿ ಚಡಚಣದಲ್ಲಿ ನಡೆದ ಕೊಲೆ ಪ್ರಕರಣ

* 2001 ರಲ್ಲಿ ಕೋಡ್ ಕೊಲೆ ಪ್ರಕರಣ

2003 ರಲ್ಲಿ ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.

ಬಾಗಪ್ಪನ ಮೇಲೆ ಫೈರಿಂಗ್​

ಕಳೆದ‌ 2018 ಆಗಷ್ಟ್ 8 ರಂದು ವಿಜಯಪುರ ‌ನಗರದ ನ್ಯಾಯಾಲಯದ ಆವರಣದಲ್ಲಿ ಬಾಗಪ್ಪ ಹರಿಜನ್ ಮೇಲೆ ಪೀರಪ್ಪ ಹಡಪದ್ ಎಂಬಾತ ಫೈರಿಂಗ್​ ಮಾಡಿದ್ದನು. ಚಂದಪ್ಪ ಹರಿಜನ ಸಹೋದರನ ಪುತ್ರ ಭೀಮಸ್ಯಾ ಹಾಗೂ ಇತರರು ಪೀರಪ್ಪ ಹಡಪದಗೆ ಬಾಗಪ್ಪ ಕೊಲೆಗೆ ಸುಪಾರಿ ನೀಡಿದ್ದರು. ಪ್ರಕರಣದ‌ ವಿಚಾರಣೆಗೆ ಬಾಗಪ್ಪ ಹರಿಜನ್​ ನ್ಯಾಯಾಲಯಕ್ಕೆ ಬಂದಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ಬಳಿಕ, ಹೈದ್ರಾಬಾದ್​ನಲ್ಲಿ ಚಿಕಿತ್ಸೆ ಪಡೆದು‌ ಬಾಗಪ್ಪ ಹರಿಜನ್​ ಗುಣ ಮುಖನಾಗಿದ್ದ.

ಗುಂಡು ಹಾರಿಸಿ ಹತ್ಯೆ ಮಾಡಿರುವ ಶಂಕೆ: ಎಸ್​ಪಿ

ಪ್ರಕರಣ ಸಂಬಂಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಗಪ್ಪ ಹರಿಜನ್​ನನ್ನು ಕೊಲೆ ಮಾಡಿರುವ ಹಂತಕರ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ತನಿಖೆ ಮುಂದುವರೆದಿದೆ. ಬಾಗಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಬಾಗಪ್ಪ ಹರಿಜನ್ ವಿಜಯಪುರ ನಗರದ ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದನು. ಊಟ ಮಾಡಿ ಮನೆಯ ಮುಂದೆ ಬಾಗಪ್ಪ ವಾಕಿಂಗ್ ಮಾಡುತ್ತಿದ್ದ ವೇಳೆ ಆಟೋದಲ್ಲಿ ಬಂದ ನಾಲ್ಕೈದು ಜನರು ಕೊಡಲಿ ಸೇರಿ ವಿವಿಧ ಮಾರಕಾಸ್ತ್ರ ಹಾಗೂ ಗುಂಡು ಹಾರಿಸಿ ಹತ್ಯೆ ಮಾಡಿರುವ ಅನುಮಾನವಿದೆ ಎಂದು ಹೇಳಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ