ಲಂಡನ್: ಬ್ರಿಟನ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಿರಿಯ ಭಾರತೀಯರೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 23 ವರ್ಷದ ತುಷಾರ್ ಕುಮಾರ್, ಇಂಗ್ಲೆಂಡ್‌ನ ಎಲ್‌ಸ್ಟ್ರೀ ಹಾಗೂ ಬೋರ್‌ಹ್ಯಾಮ್‌ವುಡ್ ಟೌನ್ ಕೌನ್ಸಿಲ್‌ನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಲೇಬರ್ ಪಕ್ಷದ ತುಷಾರ್, 2023 ರಿಂದಲೂ ಇದೇ ಟೌನ್ ಕೌನ್ಸಿಲ್‌ನಲ್ಲಿ ಉಪಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಲಂಡನ್‌ನ ಪ್ರತಿಷ್ಠಿತ ಕಿಂಗ್ಸ್ ಕಾಲೇಜ್‌ನಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ತುಷಾರ್, ಮೇಯರ್ ಆಗಿ ಸ್ಥಳೀಯ ಸಮುದಾಯಕ್ಕೆ ಸೇವೆ ಸಲ್ಲಿಸಲು ಅವಕಾಶ ದೊರೆತಿದ್ದು, ಯುವಕರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡುವುದಾಗಿ ಹೇಳಿದ್ದಾರೆ.
