Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಟಿಕೆಟ್‌ ಸಿಗದೇ ಮನೆ ಹಾದಿ ಹಿಡಿದ ಬೆನಕೆ..!

*ಸಿಕ್ಕ ಅವಕಾಶದ ರಾಜಕೀಯ ಏಣಿ ಏರದ ಅನಿಲ ಬೆನಕೆ*

*ಸ್ವಂತಸ್ಥಿಕೆ ಮೆರೆಯದೇ ಆಲಸಿ ಪ್ರತಿನಿಧಿತನವೇ ಟಿಕೇಟ್ ಕೈತಪ್ಪಲು ಕಾರಣ..!?

ಬೆಳಗಾವಿ:ಸಿಕ್ಕ ಅವಕಾಶ ಸದುಪಯೋಗ ಮಾಡಿಕೊಳ್ಳದೇ ಒಂದೇ ಅವಧಿಗೆ ಸೀಮಿತ ರಾಜಕೀಯ ಅಂತ್ಯ ಮಾಡಿಕೊಂಡ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ  ಸುದ್ದಿಯಲ್ಲಿದ್ದಾರೆ.

ಬಿಜೆಪಿ ಕೇಂದ್ರ ಸಮಿತಿ ಇಂದು ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಬೆಳಗಾವಿ ನಗರ ಉತ್ತರ ಕ್ಷೇತ್ರದ ಹಾಲಿ ಶಾಸಕ ಅನಿಲ ಬೆನಕೆ ಈಗ ಟಿಕೇಟ್ ಸಿಗದೆ ಮನೆಯ ಹಾದಿ ಹಿಡಿದಿದ್ದಾರೆ.
ಅನಿಲ ಬೆನಕೆಗೆ ಟಿಕೇಟ್ ವಂಚನೆ ಆಗುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಮೂರ್ನಾಲ್ಕು ತಿಂಗಳಿಂದಲೇ ಚರ್ಚೆ ಗರಿಗೆದರಿತ್ತು‌.
ಕಳೆದ ಐದು ವರ್ಷ ಧರ್ಮದಂಗಲ ಆಗದಂತೆ ನಗರ ಶಾಂತ ಉಳಿದಿದ್ದು ಬಿಟ್ಟರೆ, ಅನಿಲ ಬೆನಕೆ ಅವರಿಂದ ಯಾವುದೇ ನಿರೀಕ್ಷಿತ ಪ್ರತಿನಿಧಿತ್ವ ಬೆಳಗಾವಿ ಉತ್ತರಕ್ಕೆ ಸಿಗದಿರುವುದು ಗಮನ ಸೆಳೆದಿದೆ. ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಆದರೂ ಸುಮ್ಮನಿದ್ದ ಶಾಸಕ, ನಗರದಾದ್ಯಂತ ರಸ್ತೆ, ಒಳಚರಂಡಿ ಸ್ವಚ್ಚತೆಯ ಬಗ್ಗೆಯೂ ಗಮನ ಹರಿಸದೇ ಸಮರ್ಥ ಶಾಸಕತ್ವ ನಿಭಾಯಿಸದಿರುವುದೇ ಅನಿಲ ಬೆನಕೆ ಕಿಕ್ ಔಟ್ ಗೆ ಕಾರಣ ಎನ್ನಲಾಗಿದೆ.
ಶಾಸಕನಾಗಿ ತನ್ನ ಸ್ವಂತಸ್ಥಿಕೆ ಬಿಟ್ಟು, ಮತ್ತೊಬ್ಬ ನಾಯಕನ ಅಣತಿಯಂತೆ ಹಿಂದೆ ಅಡ್ಡಾಡಿ ಈಗ ಟಿಕೇಟ್ ವಂಚಿತರಾಗಿರುವುದು ಮುಖ್ಯ ಕಾರಣ ಎಂಬ ಚರ್ಚೆ ನಡೆದಿದೆ.
ಕಳೆದ ಐದು ವರ್ಷ ನಗರ ನಾಗರಿಕರು ಹೊಯ್ಯಕೊಂಡರೂ, ಬಾಯಿ ಬಡಕೊಂಡರೂ ಗಮನ ಹರಿಸದ ಶಾಸಕ ಅನಿಲ ಬೆನಕೆ ಕೊನೆಯದಾಗಿ ರಸ್ತೆ ನಿರ್ಮಾಣ, ಒಳಚರಂಡಿ ಅಭಿವೃದ್ಧಿ, ಬೀದಿದೀಪಗಳ ವ್ಯವಸ್ಥೆಯನ್ನು ಮಾಡದೇ ಕಾಲ ಕಳೆದು ಚುನಾವಣೆ ಘೋಷಣೆಯಾದಾಗ 15 ದಿನಗಳ ಹಿಂದೆ ಬೆರಳೆಣಿಕೆಯ ರಸ್ತೆಗಳಲ್ಲಿ ಕಳಪೆ ಡಾಂಬರು ಹಾಕಲಾಗಿದೆ.... ಏನೂ ಮಾಡದೇ ಸುಸ್ತಾದರು...' ಎಂಬಂತೆ ಅನಿಲ ಬೆನಕೆ ಅವರ ಕಾರ್ಯಗಳು ಗೌನ. ಒಂದು ಕ್ಷೇತ್ರದ ಶಾಸಕನಾಗಿ ಸ್ವತಂತ್ರ ಕಾರ್ಯನಿರ್ವಹಣೆ ಮಾಡುವುದನ್ನು ಬಿಟ್ಟು ಇನ್ನೊಬ್ಬ ನಾಯಕನ ಅಣತಿಯಂತೆ ಅಡ್ಡಾಡಿದರು ಎಂಬ ಹಣೆಪಟ್ಟಿಯೂ ಅನಿಲ ಬೆನಕೆ ಅವರಿಗೆ ಬಿದ್ದಿತ್ತು.ವಿಧ್ಯಾವಂತ, ಸಮಾಜ ಅನುರಾಗಿ, ವೃತ್ತಿಯಲ್ಲಿ ವೈದ್ಯ, ಸಮಾಜ ಸೇವಕ ಜೊತೆಗೆ ಪ್ರಬಲ ಲಿಂಗಾಯತ ಸಮಾಜದ ಡಾ. ರವಿ ಪಾಟೀಲ ಟಿಕೇಟ್ ಗಿಟ್ಟಿಸಿಕೊಂಡಿರುವ ಸುದ್ದಿ ಈಗ ನಗರದಾದ್ಯಂತ ಸಂಭ್ರಮಕ್ಕೆ ಕಾರಣವಾಗಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ