ಬೆಳಗಾವಿ : ಸುಮಾರು 110 ವರ್ಷಗಳ ಭವ್ಯ ಹಿನ್ನೆಲೆ ಹೊಂದಿರುವ ಬೆಳಗಾವಿಯ ಪ್ರತಿಷ್ಠಿತ ಹಾಗೂ ಕೆಎಲ್ ಇ ಸಂಸ್ಥೆಯ ಅಂಗಸಂಸ್ಥೆ ಜಿ.ಎ.ಪ್ರೌಢಶಾಲೆಯ ಪ್ರಸಕ್ತ ಶೈಕ್ಷಣಿಕ ಸಾಲಿನ ನೂತನ ಪ್ರಧಾನಿಯಾಗಿ ಎನ್ ಸಿಸಿ ವಿದ್ಯಾರ್ಥಿನಿ ಸುಶ್ಮಿತಾ ಬೆಡಸೂರ ಮತ್ತು ಉಪ ಪ್ರಧಾನಿಯಾಗಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿ ಆದಿತ್ಯ ತಾವರೆ ಆಯ್ಕೆಯಾಗಿದ್ದಾರೆ. ಇವರು ಎಸ್ ಎಸ್ ಎಲ್ ಸಿ ಡವರ್ಗದ ವಿದ್ಯಾರ್ಥಿಗಳಾಗಿದ್ದಾರೆ.
ಇವರನ್ನು ಉಪ ಪ್ರಾಚಾರ್ಯ ಸಿ.ಪಿ.ದೇವರುಷಿ, ಅಜೀವ ಸದಸ್ಯ ಮಹದೇವ ಬಳಿಗಾರ, ಸಂಸತ್ ವಿಭಾಗದ ಮುಖ್ಯಸ್ಥೆ ಪಾರ್ವತಿ ಚಿಮ್ಮಡ, ಎನ್‌ಸಿಸಿ ಮತ್ತು ಸ್ಕೌಟ್ಸ್ ಗೈಡ್ಸ್ ವಿಭಾಗ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
