Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಟಗೇರಿಯಲ್ಲಿ ಶೀಘ್ರದಲ್ಲೇ ಬೆಳಗಾವಿ ಮಧ್ಯವರ್ತಿ ಬ್ಯಾಂಕ್

 

ಕೌಜಲಗಿ(ಬೆಟಗೇರಿ):
ಗ್ರಾಮೀಣ ಭಾಗದ ಆರ್ಥಿಕ ಅಭ್ಯುದಯಕ್ಕೆ ಹಣಕಾಸು ಸಂಸ್ಥೆಗಳ ಅವಶ್ಯಕತೆ ಇದ್ದು ಬೆಟಗೇರಿ ಗ್ರಾಮದಲ್ಲಿ ಶೀಘ್ರದಲ್ಲಿಯೇ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಶಾಖೆ ಪ್ರಾರಂಭಿಸಲಾಗುವುದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಸಮೀಪದ ಬೆಟಗೇರಿ ಗ್ರಾಮಕ್ಕೆ ಶುಕ್ರವಾರ ಬಿಡಿಸಿಸಿ ಬ್ಯಾಂಕ್ ಶಾಖೆ ಪ್ರಾರಂಭಿಸಲು ರಚಿಸಿದ ಕಮಿಟಿ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಮಾತನಾಡಿ ಬೆಟಗೇರಿ ಹಾಗೂ ಸುತ್ತಮುತ್ತಲಿನ ಜನರ ಬೇಡಿಕೆಯಾದ ಬಿಡಿಸಿಸಿ ಬ್ಯಾಂಕ್ ಶಾಖೆ ತೆರೆಯುವ ಸಲುವಾಗಿ ಅಧ್ಯಕ್ಷ ರಮೇಶ ಕತ್ತಿ ಅವರು ಕಮಿಟಿ ರಚಿಸಿದ್ದಾರೆ ಎಂದರು.

ಶಾಖೆ ಪ್ರಾರಂಭವಾದ ನಂತರ ಎಲ್ಲ ಸಹಕಾರಿಗಳು ಶಾಖೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಕೇಳಿಕೊಂಡರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಹಕಾರ ವಲಯಕ್ಕೆ ಸೂಕ್ತ ಉತ್ತೇಜನ ನೀಡುತ್ತಿದ್ದು ರಾಜ್ಯದಲ್ಲಿ 559 ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಾಗಿ ಮಾಡಲಾಗಿದೆ. ಪಿಕೆಪಿಎಸ್‌ಗಳು ರೈತರ ಬೆನ್ನಿಗೆ ನಿಂತಿವೆ, ದೇಶದಲ್ಲಿ ಸಹಕಾರಿ ಕ್ಷೇತ್ರ ಬೆಳೆದರೆ ರೈತರಿಗೆ ಸಾಕಷ್ಠು ಅನುಕೂಲವಾಗಲಿದೆ. ಸಹಕಾರಿ ಕ್ಷೇತ್ರ ಇನಷ್ಠು ಹೆಮ್ಮರವಾಗಿ ಬೆಳೆಯಲಿ ರೈತರು, ಬಡವರು, ಕೂಲಿಕಾರ್ಮಿಕರು ಇದರ ಉಪಯೋಗ ಆರ್ಥಿಕವಾಗಿ ಮುಂದೆ ಬರಬೇಕೆಂದರು.

ಬೆಟಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘಗಳು,ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಸೌಹಾರ್ದ ಸಹಕಾರಿ ಸಂಘ ಸಂಸ್ಥೆಗಳ ನಿರ್ದೇಶಕರು,ಸದಸ್ಯರು ಆದಷ್ಟೂ ಬೇಗ ಬಿಡಿಸಿಸಿ ಬ್ಯಾಂಕ್ ಶಾಖೆ ಪ್ರಾರಂಭಿಸುವಂತೆ ನಿರ್ದೇಶಕ ಸತೀಶ ಕಡಾಡಿ ಅವರಿಗೆ ಮನವಿ ಸಲ್ಲಿಸಿದರು.

ಬೆಟಗೇರಿ ಸುತ್ತಮುತ್ತಲಿನ ಸಂಘ ಸಂಸ್ಥೆಗಳ ಪರವಾಗಿ ಬಾಳೇಶ ಗೌಡರ ಸೇರಿದಂತೆ ಅನೇಕ ಸಹಕಾರಿಗಳು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಅವರನ್ನು ಸನ್ಮಾನಿಸಲಾಯಿತು.

ದಿಬಿಡಿಸಿಸಿ ಬ್ಯಾಂಕ್ ಅಧಿಕಾರಿ ಶಶಿಧರ ಹಾದಿಮನಿ,ಶಾಖಾ ನಿಯಂತ್ರಣ ಮತ್ತು ತಪಾಸಣಾ ವಿಭಾಗ ಉಪಪ್ರಧಾನ ವ್ಯವಸ್ಥಾಪಕ ಎ ಸಿ ಕಲ್ಮಟ ಮಾತನಾಡಿದರು.
ಬೆಟಗೇರಿ ಗ್ರಾಮದ ಪ್ರಮುಖರಾದ ಬಸವಂತ ಕೋಣಿ,ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲನ್ನವರ,ಶ್ರೀಶೈಲ ಗಾಣಿಗಿ,ಸುರೇಶ ಸಿದ್ನಾಳ,ಶಿವಾಜಿ ನೀಲನ್ನವರ,ಈರಪ್ಪ ದೇಯನ್ನವರ, ಈಶ್ವರ ಮುಧೋಳ, ಶ್ರೀಕಾಂತ ಕರೆಪ್ಪಗೋಳ, ಈರಯ್ಯ ಹೀರೆಮಠ, ಮಾಯಪ್ಪ ಬಾಣಸಿ, ಸುಭಾಸ ಜಂಬಗಿ, ಡಿಸಿಸಿ ಬ್ಯಾಂಕ್ ಸುನೀಲ್ ಪಾಟೀಲ, ಟಿಸಿಓ ಮಹಾಂತೇಶ ಕುರಬೇಟ, ಎಂ ಐ ಮೋದಗಿ, ವಿನೋದ ವಾಲಿ ಸೇರಿದಂತೆ ಅನೇಕ ಸಹಕಾರಿಗಳು, ವ್ಯಾಪಾರಸ್ಥರು, ಪ್ರಗತಿಪರ ರೈತರು, ಸಹಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ