Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಜಿಎಸ್‌ಟಿ ಅಧಿಕಾರಿಗಳಿಂದ ಬೃಹತ್ ಜಿಎಸ್‌ಟಿ ವಂಚನೆ ಬಯಲು ಪ್ರಮುಖ ಆರೋಪಿ ಸೆರೆ

ಬೆಳಗಾವಿ; ಬೆಳಗಾವಿ ಜಿಎಸ್​ಟಿ ಗುಪ್ತಚಾರ ನಿರ್ದೇಶಾಲಯ (ಡಿಜಿಡಿಐ) ವಲಯ ಘಟಕದ ಅಧಿಕಾರಿಗಳು ಹರಿಹರದ ಮೇ.ಮರಿಯಂ ಡೀಲರ್ಗಳ ಆವರಣದಲ್ಲಿ ಸುಮಾರು 21.64 ಕೋಟಿ ರೂಪಾಯಿ ಮೌಲ್ಯದ ಜಿಎಸ್ಟಿ ವಂಚನೆ ಪತ್ತೆ ಮಾಡಿದ್ದಾರೆ.

ಪ್ರಮುಖ ಆರೋಪಿ ಮಹಮ್ಮದ್ ಸಕ್ಲೈನ ನ್ನು ಬಂಧಿಸಿ ಬೆಳಗಾವಿ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 14 ದಿನಗಳ ನ್ಯಾಯಾಂಗ ಬಂದನಕೆ ಒಪ್ಪಿಸಲಾಗಿದೆ ಎಂದು ಬೆಳಗಾವಿ ವಲಯದ ಜಿಎಸ್‌ಟಿ ಗುಪ್ತಚಾರ ನಿರ್ದೇಶಾಲಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

112.00 ಕೋಟಿ ಮೌಲ್ಯದ ನಕಲಿ ಇನ್ ವಾಯ್ಸ್ ನೀಡಿರುವುದು ಬೆಳಕಿಗೆ ಬಂದಿದೆ. 17.14 ಕೋಟಿ ಮೌಲ್ಯದ ಇನ್ ಫುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆಯಾಗಿದೆ. ಸಂಸ್ಥೆಯ ಮೊಹಮ್ಮದ್ ಸಕ್ಲೈನ್ ನಕಲಿ ಬಿಲ್ ಮೂಲಕ ಐಟಿಸಿಯ ವಂಚನೆ ನಡೆಸಿರುವುದಾಗಿ ಒಪ್ಪಿದ್ದಾರೆ. ರಿವರ್ಸ್ ಚಾರ್ಜ್ ಮೆಕಾನಿಸಂ (RCM)ಅಡಿ 4. 50 ಕೋಟಿ ಜಿಎಸ್‌ಟಿಯ ಕಡಿಮೆ ಪಾವತಿಯನ್ನು ಅವರು ಒಪ್ಪಿದ್ದಾರೆ.

ತೆರಿಗೆದಾರರು ನೋಂದಾಯಿಸದ ಪೂರೈಕೆದಾರರಿಂದ ಲೋಹದ ಸ್ಕ್ರಾಪ್ ಹೆಚ್ಚಾಗಿ ಖರೀದಿ ಮಾಡಿದ್ದಾರೆ. ಆದರೆ ಅದರಲ್ಲಿ ಐಟಿಸಿ ಲಭ್ಯವಿಲ್ಲ. ಹೆಚ್ಚುವರಿಯಾಗಿ ನೋಂದಾಯಿತ ಸಂಸ್ಥೆಗಳಿಂದ ಈ ಸಂಸ್ಥೆ ಹೆಚ್ಚಿನ ಖರೀದಿಗಳು ಅಸ್ತಿತ್ವದಲ್ಲಿ ಇಲ್ಲದ ಅಥವಾ ಕಾಲ್ಪನಿಕ ಸಂಸ್ಥೆಗಳಿಂದ ಬಂದಿವೆ.

ಮೇ. ಮರಿಯಂ ಸ್ಕ್ರಾಪ್ ಡೀಲರ್ಗಳು ನೋಂದಾಯಿಸದ ವಿತರಕರಿಂದ ನಿಜವಾದ ಖರೀದಿಗಳನ್ನು ಐಟಿಸಿಗಳೊಂದಿಗೆ ನಕಲಿ ಸಂಸ್ಥೆಗಳಿಂದ ಪಡೆದಿದ್ದಾರೆ. ಕಮಿಷನ್ ಗೆ ನಕಲಿ ಇನ್ವಾಯ್ಸ್ ನೀಡುವ ಉದ್ದೇಶದಿಂದ ನೋಂದಣಿ ಪಡೆಯಲು ನಕಲಿ ದಾಖಲೆ ಬಳಸಿರುವುದು ಸಹ ತನಿಖೆ ವೇಳೆ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,

 

 
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ