Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಸವಾದಿ ಶರಣರು ಏಕದೇವೋಪಾಸಕರಾಗಿದ್ದರು : ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು

 

ಬೆಳಗಾವಿ; ಅಲ್ಲಿ ಇಲ್ಲಿ ಹುಡುಕಿದರೆ ಭಗವಂತ ಸಿಗಲಾರ.ಅನು,ರೇಣು ತೃಣಕಾಷ್ಟದಲ್ಲಿ ಭಗವಂತನಿದ್ದಾನೆ. ಪ್ರತಿಯೊಂದು ಜೀವರಾಶಿಗಳಲ್ಲಿ ಭಗವಂತನಿರುವಾಗ ಕಂಡ ಕಂಡಲ್ಲಿ ಅಡ್ಡ ಉದ್ದ ಬೀಳುವ ಭಕ್ತರ ನೋಡಬಾರದೆಂದು ನನ್ನನ್ನು ಅಂಧಕನ ಮಾಡಿದೇನು ? ಅನ್ನುವ ಭಾವ.ಹನ್ನೆರಡನೆಯ ಶತಮಾನದ ಬಸವಾದಿ ಶರಣರು ಏಕದೇವೋಪಾಸಕರಾಗಿದ್ದರು ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ನುಡಿದರು.
ಅವರು ಬುಧವಾರ ಜಾಗತಿಕ ಲಿಂಗಾಯತ ಮಾಹಾಸಭಾ ಜಿಲ್ಲಾ ಘಟಕ ಬೆಳಗಾವಿ ಅವರು ಮಹಾಂತೇಶ ನಗರದ ಮಹಾಂತ ಭವನದಲ್ಲಿ ಹಮ್ಮಿಕೊಂಡ ಮಾಸಿಕ ಅನುಭಾವ ಗೋಷ್ಠಿಯ ಪಾವನ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಪರಮ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.
ಬಸವಣ್ಣನವರು ನಮ್ಮೊಳಗಿರು ಭಗವಂತನ ಜೊತೆ ಅನುಸಂಧಾನ ಮಾಡುವ ಸಲುವಾಗಿ ಇಷ್ಟಲಿಂಗ ಕೊಟ್ಟರು.ಜಾತಿ ಧರ್ಮ, ವರ್ಣ ವರ್ಗರಹಿತ ವಾದ ಸಮ ಸಮಾಜದ ಪರಿಕಲ್ಪನೆ ಬಸವಾದಿ ಶರಣದ್ದಾಗಿತ್ತು.ಭಗವಂತ ಮತ್ತು ಭಕ್ತನ ನಡುವೆ ಯಾವದೇ ಮದ್ಯವರ್ತಿ ಇಲ್ಲ.ನೇರಾ ನೇರ ಲಿಂಗಾಂಗ ಸಾಮರಸ್ಯವನ್ನು ಕಾಣಬಹುದು.ಇದರಿಂದ ನೀವೇ ಗುರುವಾಗಬಹುದು,ಜಂಗಮನಾಗಬಹುದು, ಅನಭಾವಿಗಳಾಗಬಹುದು ಎಂದು, ನಮಗೆ ಒಂಭತ್ತು ನೂರು ವರ್ಷಗಳ ಹಿಂದೆನೆ ಬಸವಾದಿ ಶಿವಶರಣರು ತಿಳಿಸಿಕೊಟ್ಟಿದ್ದಾರೆ.ಪ್ರತಿ ತಿಂಗಳ ಮೊದಲ ರವಿವಾರದಂದು ಇಷ್ಟಲಿಂಗ ದೀಕ್ಷೆ ಮತ್ತು ಪ್ರಾತ್ಯಕ್ಷಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾವೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿರಿ ಎಂದರು.
ಗೋಷ್ಠಿಯಲ್ಲಿ" ಶರಣರ ಏಕದೇವೋಪಾಸನೆ " ವಿಷಯ ಕುರಿತು ಎಸ್ ಜಿ ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಶೀವಲೀಲಾ ಪ್ರಕಾಶ ಅರಳಿಕಟ್ಟಿ. ಅವರು ಬಸವಣ್ಣನವರ ವಚನಗಳನ್ನು ಆಧರಿಸಿ ನಾವೆಲ್ಲರೂ ಏಕದೇವೋಪಾಸರಾಗಬೇಕು.ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಾ.ಲಿಂ ಮಹಾಸಭಾದ ಜಿಲ್ಲಾ ಘಟಕದ ಅದ್ಯಕ್ಷರಾದ ಬಸವರಾಜ ರೊಟ್ಟಿ ಹಿರಿಯ ನ್ಯಾಯವಾದಿಗಳು ಮಾತನಾಡುತ್ತಾ ,ಇತ್ತೀಚಿನ ದಿನಗಳಲ್ಲಿ ಬಸವಾದಿ ಶರಣರ ವಚನಗಳನ್ನು ಕೆಲವರು ಪ್ರಕ್ಷುಬ್ಧ ಗೊಳಿಸುತ್ತಿದ್ದಾರೆ‌. ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಹೋರಾಟವೇ ನಡೆದಿಲ್ಲ. ಅದೊಂದು ಭಕ್ತಿಯ ಚಳುವಳಿ ಅಂತಾ ಬಿಂಬಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರಯತ್ನಗಳು ನಡೆದಿವೆ.ವಚನ ಸಾಹಿತ್ಯಕ್ಕಾಗಲಿ,ಲಿಂಗಾಯತ ಧರ್ಮದ ಮೇಲೆ ದಾಳಿ ಮಾಡುವದನ್ನು ಜಾಗತಿಕ ಲಿಂಗಾಯತ ಮಹಾಸಭಾವು ಖಂಡಿಸುತ್ತದೆ.ವಚನ ದರ್ಶನ ಪುಸ್ತಕವನ್ನು ಪ್ರಕಟಿಸಿ ,ವಚನ ಸಾಹಿತ್ಯದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರಿಗೆ ನಾವೂ ಕೂಡ ಗ್ರಂಥಗಳ ಮೂಲಕ ಉತ್ತರಿಸಬೇಕಾಗಿದೆ.ನಿವೃತ್ತ ಪ್ರಾದ್ಯಾಪಕರಾದ ಡಾ.ಟಿ.ಆರ್.ಚಂದ್ರಶೇಖರ ಬೆಂಗಳೂರು ಅವರ ಸಂಪಾದಕತ್ವದಲ್ಲಿ ನಾಡಿನ ಹಿರಿಯ ವಿದ್ವಾಂಸರು ಬರೆದ ಲೇಖನಗಳನ್ನು ಸಂಗ್ರಹಿಸಿದ ಗ್ರಂಥಗಳನ್ನು ರಾಜ್ಯಾದಂತ ದೊಡ್ಡ ಪ್ರಮಾಣದಲ್ಲಿ ಬಿಡುಗಡೆಗೊಳಿಸುವ ತಯಾರಿ ನಡೆದಿದೆ.ನಾವು ಇದಕ್ಕೆಲ್ಲ ಸಂಘಟಿಕರಾಗಬೇಕಾಗಿದೆ ಎಂದು ಹೇಳಿದರು.
ಪ್ರಸಾದ ದಾಸೋಹಿಗಳಾದ ಸಂಗಿತಾ ಮುರುಗೇಶ ಶಿವಪೂಜಿ ದಂಪತಿ ಷಟ್ ಸ್ಥಲ ಧ್ವಜಾರೋಹಣ ಮಾಡಿದರು. ಜಾ.ಲಿಂ ಮ ಉಪಾಧ್ಯಕ್ಷರಾದ ನ್ಯಾಯವಾದಿ ಬಸವರಾಜ ಸುಲ್ತಾನಪೂರ,ಹಾಗು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಅವರ ಗೌರವ ಉಪಸ್ಥಿತರಾಗಿ ವೇದಿಕೆಯಲ್ಲಿ ಇದ್ದರು.ಬೆಳಗಾವಿ ತಾಲೂಕು ಘಟಕದ ಅದ್ಯಕ್ಷೆ ಅನೀತಾ ಚೆಟ್ಟರ ಅವರು ಪ್ರಸ್ತಾವಿಕ ನುಡಿಗಳೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ದ್ರಾಕ್ಷಾಯಣಿ ಹೂಗಾರ ಅವರು ಶರಣು ಸಮರ್ಪಣೆ ಮಾಡಿದರು.ಮಹಾನಂದಾ ಪರುಶೆಟ್ಟಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.ಪ್ರಾರಂಭದಲ್ಲಿ ಬಸಮ್ಮ ಮಠದ ಮತ್ತು ಜಾ.ಲಿಂ.ಮ ದ ಮಹಿಳಾ ಸದಸ್ಯರು ವಚನ ಪ್ರಾರ್ಥನೆಯನ್ನು ಮಾಡದರು.
ಕಾರ್ಯಕ್ರಮದಲ್ಲಿ ಜಾ.ಲಿಂ ಮ ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ಎಸ್.ಜಿ. ಸಿದ್ನಾಳ.ಬಸವರಾಜ ಕರಡಿಮಠ,ಎಮ್ ವಿ.ಕೋರಿಶೆಟ್ಟಿ,ಚಂದ್ರಪ್ಪ ಬೂದಿಹಾಳ, ಎಫ್ ಆರ್ ಪಾಟೀಲ, ಅರವಿಂದ ಪರುಶೆಟ್ಟಿ,ಮುರಿಗೆಪ್ಪ ಬಾಳಿ,ಡಾ. ಅಡಿವೆಪ್ಪ ಇಟಗಿ,ಯರಗಟ್ಟಿಯ ಅಶೋಕ ಹಾದಿಮನಿ,ಸುಧಾ ರೊಟ್ಟಿ, ಶೋಭಾ ಶಿವಳ್ಳಿ, ಅನ್ನಪೂರ್ಣ ಮಳಗಲಿ, ಸುಲೋಚನ ವಸ್ತ್ರದ,ಪ್ರೀತಿ ಮಠದ,ಕೆಂಪಣ್ಣ ರಾಮಾಪೂರಿ,ನೇತ್ರಾ ರಾಮಾಪೂರಿ, ಪ್ರವೀಣ ಚಿಕಲಿ,ಬಸವರಾಜ ಚಟ್ಟರ,ವಿವಿಧ ಬಡಾವಣೆಯ ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ