Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸ್ವಚ್ಛತೆಯಲ್ಲಿ ಸ್ಥಾನ ಪಡೆಯಿತು ಬೈಲಹೊಂಗಲ

 

ನವದೆಹಲಿ :
ದೇಶದ ಅತ್ಯಂತ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ 518ನೇ ಸ್ಥಾನ ಪಡೆದುಕೊಂಡು ಇದೀಗ ರಾಜ್ಯದ ಗಮನ ಸೆಳೆದಿದೆ.

ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಹೊಸದುರ್ಗ ಪುರಸಭೆಗಳಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮತ್ತು ಬೈಲಹೊಂಗಲ ಪುರಸಭೆ ಎರಡನೇ ಸ್ಥಾನದಲ್ಲಿವೆ. ಬಿಬಿಎಂಪಿ ಮೂರನೇ ಸ್ಥಾನದಲ್ಲಿವೆ. 15 ರಿಂದ 25 ಸಾವಿರ ಜನಸಂಖ್ಯೆ ಹೊಂದಿರುವ ದಕ್ಷಿಣ ವಲಯವಾರು ನಗರಗಳಲ್ಲಿ ಹೊಳಲ್ಕೆರೆ 11 ಮತ್ತು ಶಿರಾಳಕೊಪ್ಪ 19ನೇ ಸ್ಥಾನ ಪಡೆದುಕೊಂಡಿವೆ. 25 ರಿಂದ 50 ಸಾವಿರ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಕುಂದಾಪುರ 29 ನೇ ಸ್ಥಾನದಲ್ಲಿದೆ. 50,000 ದಿಂದ ಒಂದು ಲಕ್ಷದವರೆಗಿನ ಜನಸಂಖ್ಯೆಯಲ್ಲಿ ಕಾರವಾರ 13ನೇ ಸ್ಥಾನ, ತಿಪಟೂರು 57, ಶಿರಸಿ 60ನೇ ಸ್ಥಾನದಲ್ಲಿದೆ. ದೇಶದ ಅತ್ಯಂತ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಮೈಸೂರು 23ನೇ ಸ್ಥಾನ ಪಡೆದುಕೊಂಡದ್ದು ರಾಜ್ಯದಲ್ಲೇ ಸ್ವಚ್ಛ ನಗರಿಗಳಲ್ಲಿ ಮೊದಲ ಸ್ಥಾನದಲ್ಲಿದೆ. ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರು ಈ ಸ್ಥಾನ ಪಡೆದುಕೊಂಡಿದೆ. ಇದೇ ವರ್ಗದಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಇದ್ದು 87ನೇ ಸ್ಥಾನ ಪಡೆದುಕೊಂಡಿದೆ.
ಟಾಪ್ 100 ರಲ್ಲಿ ಸ್ಥಾನ ಪಡೆದುಕೊಂಡ ರಾಜ್ಯದ ಎರಡು ನಗರಗಳು ಎನಿಸಿಕೊಂಡಿವೆ.

ಬೆಂಗಳೂರು 125 ನೇ ಸ್ಥಾನದಲ್ಲಿದೆ. ಒಂದು ಲಕ್ಷದೊಳಗಿನ ನಗರಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ 194 ಸ್ಥಾನ ಪಡೆದುಕೊಂಡಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸುವ ಸರ್ವೇಕ್ಷಣ್ ಸಮೀಕ್ಷೆಯಲ್ಲಿ ತ್ಯಾಜ್ಯ ಸಂಗ್ರಹ, ವಿಂಗಡಣೆ, ಸಂಸ್ಕರಣೆಯಲ್ಲಿ ಬಿಬಿಎಂಪಿ ಪ್ರಗತಿ ಸಾಧಿಸಿದ್ದರೂ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ದೇಶದ ಸ್ವಚ್ಛ ನಗರಿ :
ದೇಶದ ಅತ್ಯಂತ ಸ್ವಚ್ಛ ನಗರಿಗಳು ಎಂಬ ಹಿರಿಮೆಗೆ ಮಧ್ಯ ಪ್ರದೇಶದ ಇಂದೋರ್‌ ಹಾಗೂ ಗುಜರಾತಿನ ಸೂರತ್ ಭಾಜನವಾಗಿವೆ. ನಗರಿಗಳಿಗೆ ಪ್ರಥಮ ಸ್ಥಾನ ದೊರೆತಿದೆ. ವಿಶೇಷ ಎಂದರೆ ಇಂದೋರ್ ಸತತ 7ನೇ ವರ್ಷವೂ ನಂ.1 ಸ್ವಚ್ಛ ನಗರಿ ಸ್ಥಾನ ಉಳಿಸಿಕೊಂಡಿದೆ.

ತ್ಯಾಜ್ಯ ನಿರ್ವಹಣೆಗೆ ಇಂದೋರ್ ಕೈಗೊಂಡಿರುವ ಪರಿಣಾಮಕಾರಿಯಾದ, ಸುಸ್ಥಿರ ಹಾಗೂ ದೀರ್ಘಕಾಲಿನ ಕ್ರಮಗಳೇ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಏಕ ಬಳಕೆಯ ಪ್ಲಾಸ್ಟಿಕ್‌ಗೆ ನಿಷೇಧ ಹೇರಿದ ಬಳಿಕ ಇಂದೋರ್‌ನಲ್ಲಿ ತ್ಯಾಜ್ಯ ಉತ್ಪಾದನೆ ಪ್ರಮಾಣವೇ ಕಡಿಮೆಯಾಗಿದೆ.
ಮಹಾರಾಷ್ಟ್ರದ ನವಿಮುಂಬೈ ಮೂರನೇ ಸ್ಥಾನದಲ್ಲಿದ್ದರೆ, ಕರ್ನಾಟಕದ ಯಾವೊಂದೂ ನಗರ ಟಾಪ್ 10 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿವೆ. ಮೈಸೂರು ದೇಶವ್ಯಾಪಿ ನಗರಗಳಲ್ಲಿ 23ನೇ ಸ್ಥಾನ ಮತ್ತು ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದಿದೆ. ಅತ್ಯುತ್ತಮ ಸಾಧಕ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ನಂತರದಲ್ಲಿವೆ.

ರಾಷ್ಟ್ರಪತಿ ದೌಪದಿ ಮುರ್ಮು ಅವರು ನವದೆಹಲಿಯಲ್ಲಿ ಗುರುವಾರ ಸ್ವಚ್ಛತಾ ಪ್ರಶಸ್ತಿ ವಿಜೇತ ನಗರ, ರಾಜ್ಯಗಳ ಪ್ರತಿನಿಧಿಗಳಿಗೆ ಬಹುಮಾನವನ್ನು ವಿತರಿಸಿದರು.1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಮಹಾರಾಷ್ಟ್ರದ ಸಾಸ್ವದ್ ಪ್ರಥಮ ಸ್ಥಾನ ಗೆದ್ದುಕೊಂಡಿದೆ. ಛತ್ತೀಸ್‌ಗಢದ ಪಠಾಣ್ ಹಾಗೂ ಮಹಾರಾಷ್ಟ್ರದ ಲೋನಾವಾಲಾ 2 ಮತ್ತು 3ನೇ ಸ್ಥಾನಕ್ಕೆ ಭಾಜನವಾಗಿವೆ. 4447 ನಗರ ಸ್ಥಳೀಯ ಸಂಸ್ಥೆಗಳು ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ-2023ರಲ್ಲಿ ಭಾಗಿಯಾಗಿದ್ದವು. 12 ಕೋಟಿ ನಾಗರಿಕರು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದರು. ಇದು ವಿಶ್ವದ ಅತಿ ದೊಡ್ಡ ಸ್ವಚ್ಛತಾ ಸರ್ವೇ ಎಂದು ಸರ್ಕಾರ ಹೇಳುತ್ತದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ