Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪ್ರಶಸ್ತಿ ಪುರಸ್ಕಾರಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ : ಹೃದಯರೋಗ ತಜ್ಞ ಡಾ. ಎಂ. ಡಿ. ದೀಕ್ಷಿತ ಅಭಿಪ್ರಾಯ

 

ಬೆಳಗಾವಿ :
ಪ್ರಶಸ್ತಿ ಪುರಸ್ಕಾರಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡ ಭಾಷೆ ಉಳಿಸುವ ಬೆಳೆಸುವ ಕಾರ್ಯವಾಗಬೇಕಿದೆ. ಈ ಕುರಿತಂತೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಕನ್ನಡ ಲೇಖಕರಿಗೆ, ಪ್ರಕಾಶಕರಿಗೆ, ಸಮಾಜ ಸೇವಕರಿಗೆ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಪ್ರೋತ್ಸಾಹಿಸುತ್ತ ಬಂದಿದೆ ಎಂದು ಖ್ಯಾತ ಹೃದಯರೋಗ ತಜ್ಞ ಡಾ. ಮಹಾದೇವ ಡಿ. ದೀಕ್ಷಿತ ಹೇಳಿದರು.

ರವಿವಾರ ಹಿಂದವಾಡಿಯ ಐ.ಎಂ.ಇ.ಆರ್ ಸಭಾಭವನದಲ್ಲಿ
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು 2022 ಮತ್ತು 2023 ನೇ ಸಾಲಿನ ಸಿರಿಗನ್ನಡ ಗೌರವ ಪ್ರಶಸ್ತಿ ಹಾಗೂ 2021 ಮತ್ತು 2022 ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿರಿಗನ್ನಡ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನನಗೆ ಹೃದಯ ಶಸ್ತ್ರಕ್ರಿಯೆ ಮಾಡುವುದರಕ್ಕಿಂತ ಭಾಷಣ ಮಾಡುವುದು ಕಷ್ಟದ ಕೆಲಸ ಎಂದು ಹೇಳಿದರು.

ಲೇಖಕ, ನಾಟಕಕಾರ ಬಿ. ಆರ್. ಪೊಲೀಸ್ ಪಾಟೀಲ ಮಾತನಾಡಿ, ಬರೆದಂತೆ ಬದುಕುವ ಧರ್ಮವನ್ನು ನಾವು ಕಲಿಯಬೇಕಾದದ್ದು ಜನಪದರಿಂದ, ಶರಣರಿಂದ, ಶರಣರ ವಚನದಿಂದ. ನಮಗೆ ದೇಸಿ ಕಾವ್ಯದಲ್ಲಿ ಅದ್ಭುತವಾದ ರಚನೆಗಳು ಸಿಗುತ್ತವೆ ಎಂದು ಹೇಳಿದರು.
ಕೃತಿಗಳ ಮೌಲ್ಯಮಾಪನ ಮಾಡಿದ ಸಂಧ್ಯಾ ಹುನಗುಂಟೇಕರ ಮಾತನಾಡಿ, ಲೇಖಕ ಪ್ರಾದೇಶಿಕತೆಯನ್ನು ರೂಢಿಸಿಕೊಳ್ಳದೇ ಹೋದಂತೆ ಬರವಣಿಗೆ ಅದು ತನ್ನತನ ಕಳೆದುಕೊಂಡು ಹೋದಂತಾಗುತ್ತದೆ. ದೇಶೀಯತೆ ಅವಶ್ಯ ಎಂದು ಹೇಳಿದರು.

2023 ಸಿರಿಗನ್ನಡ ಗೌರವ ಪಡೆದ ಪ್ರೊ. ವಿ. ಎನ್.ಗೋಡಖಿಂಡಿ, ಪ್ರೊ. ರಾಜಶೇಖರ ಕರಡಿಗುದ್ದಿ ಸೇರಿದಂತೆ 2021- 23 ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಪಡೆದಿರುವ ಡಾ. ಸಿ. ಕೆ. ನಾವಲಗಿ, ಡಾ. ಬಸವರಾಜ ಜಗಜಂಪಿ, ಬಿ. ಎಸ್. ಜಗಾಪುರ, ಡಾ. ಜೆ.ಪಿ. ದೊಡ್ಡಮನಿ, ಬಸವಣ್ಣೆಪ್ಪ ಕಂಬಾರ, ಡಾ. ಬಸು ಬೇವಿನಗಿಡದ, ಶೋಭಾ ನಾಯಿಕ, ರಂಜನಾ ನಾಯಕ, ಅಶೋಕ ಮಳಗಲಿ, ಡಾ. ಆರ್. ಬಿ. ಚಿಲುಮಿ, ಅಪ್ಪಾಸಾಹೇಬ ಸದರ ಜೋಶಿ, ದೀಪಿಕಾ ಚಾಟೆ, ಪ್ರಿಯಾ ಪುರಾಣಿಕ, ಹಮೀದಾ ಬೇಗಮ್ ದೇಸಾಯಿ, ಅನುಪಮಾ ಚೌಗಲೆ, ಪಂ. ರಾಜಪ್ರಭು ದೋತ್ರೆ, ಸುನಂದಾ ಮುಳೆ, ಬಸವರಾಜ ಗಾರ್ಗಿ, ಎ.ಎ. ಸನದಿ, ಸುನಂದಾ ಹಾಲಬಾವಿ, ಡಾ. ಪಿ.ಜಿ. ಕೆಂಪಣ್ಣವರ, ನೀರಜಾ ಗಣಾಚಾರಿ, ಯ. ರು. ಪಾಟೀಲ, ಶಮಾ ಜಮಾದಾರ, ಸ, ರಾ, ಸುಳಕೂಡೆ, ಸುಮಾ ಕಾಟ್ಕರ್, ಬಿ. ಎಸ್. ಗವಿಮಠ, ಶೀಲಾ ಅಂಕೋಲಾ, ಶೈಲಜಾ ಭಿಂಗೆ, ಬಾಳೇಶ ಚಿನಗುಡಿ, ಕಿತ್ತೂರಿನ ರಾಜಗುರು ಸಂಸ್ಥಾನಮಠ, ಮುಕುಂದ ಗೋರೆ, ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರಬಂಧ ಸ್ಪರ್ಧೆ, ಕನ್ನಡ ವಾಚನ ಸ್ಪರ್ಧೆ, ದಾಸರ ಪದಗಳ ಸ್ಪರ್ಧೆಯ ವಿಜೇತರನ್ನು ಗೌರವಿಸಲಾಯಿತು.

ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ದೀಪಾ ಪದಕಿ ಸಂಗಡಿಗರು ನಾಡಗೀತೆ ಹಾಡಿದರು. ನೀರಜಾ ಗಣಾಚಾರಿ ಸ್ವಾಗತಿಸಿದರು. ಶಿರೀಷ ಜೋಶಿ ಪರಿಚಯಿಸಿದರು. ಭಾರತಿ ವಡವಿ, ಸ್ವಾತಿ ಘೋಡೆಕರ ನಿರೂಪಿಸಿದರು. ಎನ್. ಬಿ. ದೇಶಪಾಂಡೆ, ಶ್ರೀಧರ ಹುಕ್ಕೇರಿ, ಸಂಜೀವ ಕುಲಕರ್ಣಿ, ಮೋಹನ ಗುಂಡ್ಲೂರ, ಸ್ವಾತಿ ಘೋಡೆಕರ, ನಾರಾಯಣ ಗಣಾಚಾರಿ, ರಾಧಿಕಾ ನಾಯಿಕ, ಪ್ರೊ. ಪಿ. ಜಿ. ಕೆಂಪಣ್ಣವರ, ಎಚ್. ಎಸ್. ದೇಶಪಾಂಡೆ, ಗುಂಡೇನಟ್ಟಿ ಮಧುಕರ ಉಪಸ್ಥಿತರಿದ್ದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ