ಬೆಂಗಳೂರು: ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿ.ಕೆ ಶಿವಕುಮಾರ್ ಅವರ ಕೊಠಡಿಗೆ ಜ್ಯೋತಿಷಿಗಳು ಭೇಟಿ ನೀಡಿ ವಾಸ್ತು ಪರಿಶೀಲಿಸಿದ್ದಾರೆ.
ಶಿವಕುಮಾರ್ ಕುಳಿತುಕೊಳ್ಳಲಿರುವ ಕುರ್ಚಿಯ ವಾಸ್ತು ನೋಡಿರುವ ಜ್ಯೋತಿಷಿಗಳು, ಕುರ್ಚಿಯ ದಿಕ್ಕನ್ನು ಬದಲಿಸಿದ್ದಾರೆ.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಯಲ್ಲಿ ಅಜ್ಜಯ್ಯನ ಚಿತ್ರ ಅಳವಡಿಸಲಾಗಿದೆ.
ಡಿ.ಕೆ ಶಿವಕುಮಾರ್ ಅವರು ಅಜ್ಜಯ್ಯನನ್ನು ಬಲವಾಗಿ ನಂಬುತ್ತಾರೆ. 'ನಾನು ರಾಜನಾಗುವೆ ಎಂದು ನೊಣವಿನಕೆರೆ ಅಜ್ಜಯ್ಯ ಬಾಲ್ಯದಲ್ಲಿ ಹೇಳಿದ್ದರು. ಅಜ್ಜಯ್ಯನ ಅನುಗ್ರಹದಿಂದ ಮುಖ್ಯಮಂತ್ರಿ ಆಗುತ್ತಿದ್ದೇನೆ' ಎಂದು ಡಿ.ಕೆ. ಶಿವಕುಮಾರ್ ಈ ಹಿಂದೆ ಹೇಳಿದ್ದರು.
ಜ್ಯೋತಿಷಿಗಳ ಸಲಹೆಯಂತೆ ಅಜ್ಜಯ್ಯನ ಚಿತ್ರ ಅಳವಡಿಸಲಾಗಿದೆ.
