Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಆನಂದಿಬೆನ್ ಪಟೇಲ್ ಭೇಟಿಯಾದ ಆದಿತ್ಯನಾಥ: ಇಂದು ಸಂಪುಟ ವಿಸ್ತರಣೆ ಸಾಧ್ಯತೆ

Advertisement

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶನಿವಾರ ಲಖನೌದ ಜನಭವನದಲ್ಲಿ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರನ್ನು ಭೇಟಿಯಾಗಿದ್ದು, ಭಾನುವಾರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಯೋಗಿ ಆದಿತ್ಯನಾಥ ಸಂಪುಟದ ವಿಸ್ತರಣೆ ಭಾನುವಾರ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಜನಭವನದಲ್ಲಿ ಹೊಸ ಸಚಿವರ ಪ್ರಯಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ಪಿಟಿಐಗೆ ದೃಢಪಡಿಸಿವೆ.

ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಸರ್ಕಾರದಿಂದ ಈವರೆಗೆ ಅಧಿಕೃತವಾಗಿ ಮಾಹಿತಿ ພ໐໖.

ಸಂಪುಟ ವಿಸ್ತರಣೆ ಬಗ್ಗೆ ದೀರ್ಘಕಾಲದ ಊಹಾಪೋಹಗಳ ನಡುವೆ ಈ ಮಹತ್ವದ ಬೆಳವಣಿಗೆ ನಡೆದಿದೆ. ಪಂಚರಾಜ್ಯ ಚುನಾವಣೆಗಳ ಬೆನ್ನಲ್ಲೇ ರಾಜ್ಯದಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸಚಿವ ಸಂಪುಟದ ಗರಿಷ್ಠ ಸಂಖ್ಯೆ 60 ಆಗಿದೆ. ಸದ್ಯ ಆರು ಸ್ಥಾನಗಳು ಖಾಲಿ ಇವೆ.

ರಾಜ್ಯದಲ್ಲಿ 2027ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಸಂಪುಟದ ವಿಸ್ತರಣೆಯು ಜಾತಿ ಹಾಗೂ ಪ್ರಾದೇಶಿಕ ಸಮೀಕರಣಗಳ ಮೇಲೆ ಪರಿಣಾಮ ಬೀರಬಹುದು ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಡಿ ದಾಳಿ ವೇಳೆ ಮಂಜುನಾಥ ಮತ್ತು ಆಪ್ತರ ಬಳಿ ಸಿಕ್ಕಿದ್ದೆಷ್ಟು ಗೊತ್ತೇ ?ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ; ಯಾರಿಗೆ ಯಾವ ಜಿಲ್ಲೆ ; ಇಲ್ಲಿದೆ ವಿವರಉದ್ಯಮಿ ರಾಜಾಭಾವು ಶಿರಗಾಂವಕರ ನಿಧನಪಾಸ್‌ಪೋರ್ಟ್‌ ಪೌರತ್ವದ ದಾಖಲೆಯಲ್ಲ : ವಿದೇಶಾಂಗ ಸಚಿವಾಲಯ ಸ್ಪಷ್ಟನೆಬೆಳಗಾವಿಯಲ್ಲಿ ‘ಖೇಲೋ ಇಂಡಿಯಾ’ ಯೋಜನೆಯಡಿ ಭವ್ಯ ಹಾಕಿ ಮೈದಾನ ನಿರ್ಮಾಣಕ್ಕೆ ವೇಗ: ಸಂಸದ ಜಗದೀಶ್ ಶೆಟ್ಟರ್ ಭರವಸೆ; ಕ್ಯಾಂಟೋನ್ಮೆಂಟ್ ಮಂಡಳಿಯಿಂದ ಸಕಾರಾತ್ಮಕ ಸ್ಪಂದನೆಎನ್‌ಸಿಇಆರ್‌ಟಿ ಮಹತ್ವದ ನಿರ್ಧಾರ; 9ನೇ ತರಗತಿ ಪಠ್ಯಪುಸ್ತಕದಲ್ಲಿ ‘ತುರ್ತು ಪರಿಸ್ಥಿತಿ’ ವಿಷಯ ಸೇರ್ಪಡೆಬೆಳಗಾವಿಯಲ್ಲಿ ‘ಜಿನ ದೀವಿಗೆ’ ಮತ್ತು ‘ಮರಾಠಿಯೊಳಗೊಂದು ಕನ್ನಡ ಗತವೈಭವ’ ಕೃತಿಗಳ ಲೋಕಾರ್ಪಣೆ ಸಮಾರಂಭವೆನೆಜುಲಾದಲ್ಲಿ ಭೀಕರ ಅವಳಿ ಭೂಕಂಪ : 32 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯಮೋದಿ ಪ್ರಧಾನಿಯಾಗಿ 12 ವರ್ಷದ ಸಾಧನೆ : ಬೆಳಗಾವಿಯ ಸಾಹಿತಿಗಳಿಗೆ ಪುಸ್ತಕ ವಿತರಿಸಿದ ಮಾಜಿ ಸಿಎಂ ಹಿಂಡಾಲ್ಕೋ ಕಂಪನಿಯಲ್ಲಿ ಮುತ್ಯಾನಟ್ಟಿ ಯುವಕ ಆತ್ಮಹತ್ಯೆ..!